ಮೃತ ಅಪರಿಚಿತ ವ್ಯಕ್ತಿ ಗುರುತಿಸಲು ಪ್ರಯತ್ನ

ಮಂಗಳವಾರ, ಜೂನ್ 18, 2019
29 °C

ಮೃತ ಅಪರಿಚಿತ ವ್ಯಕ್ತಿ ಗುರುತಿಸಲು ಪ್ರಯತ್ನ

Published:
Updated:
Prajavani

ತಿಪಟೂರು: ಮೈಸೂರು ಜಿಲ್ಲೆಯ ಬನ್ನೂರು ಠಾಣೆ ವ್ಯಾಪ್ತಿಯಲ್ಲಿ ಮೃತಪಟ್ಟು ಪತ್ತೆಯಾಗಿರುವ ಸುಮಾರು 55 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯನ್ನು ಗುರುತಿಸಲು ನೆರವಾಗುವಂತೆ ತಿಪಟೂರಿಗೆ ಸಂಬಂಧಿಸಿದವರ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಹರಿದಾಡುತ್ತಿದೆ.

ಬನ್ನೂರು ಠಾಣೆಯಿಂದ ಬಂದಿದ್ದ ಛಾಯಾಚಿತ್ರ ಹಂಚಿಕೊಂಡಿರುವ ಸ್ಥಳೀಯ ಪೊಲೀಸ್ ಇಲಾಖೆಯವರು ಆತ ತೊಟ್ಟಿದ್ದ ಅಂಗಿಯಲ್ಲಿದ್ದ ಟೈಲರ್ ಲೇಬಲ್ ಕೂಡ ಹಾಕಿದ್ದಾರೆ. ಆತನನ್ನು ಗುರುತಿಸಲು ಅದು ನೆರವಾಗಬಹುದಾ ಎಂಬುದು ಪೊಲೀಸರ ಪ್ರಯತ್ನವಾಗಿದೆ.

ಅಂಗಿಯಲ್ಲಿದ್ದ ಲೇಬಲ್‍ನಲ್ಲಿ ‘ಪರಮೇಶ್ ಟೈಲರ್-ತಿಪಟೂರು’ ಎಂದಿದೆ. ಸ್ಥಳೀಯ ಪೊಲೀಸರು ದೊಡ್ಡಪೇಟೆಯಲ್ಲಿರುವ ಪರಮೇಶ್ ಟೈಲರ್ ಮಾಲಿಕರನ್ನು ಈ ಬಗ್ಗೆ ವಿಚಾರಿಸಿ ವ್ಯಕ್ತಿಯ ಗುರುತಿಗೆ ಪ್ರಯತ್ನಿಸಿದ್ದಾರೆ. ಯಾರಾದರೂ ಪರಿಚಯದವರಿದ್ದರೆ ಮಾಹಿತಿ ನೀಡುವಂತೆ ವ್ಯಾಟ್ಸ್‌ಆ್ಯಪ್ ಮೂಲಕ ಸಾರ್ವಜನಿಕರಲ್ಲಿ ಕೋರಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !