ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಸಾರಸ್ವತ ಲೋಕ ಬೆಳಗಿದ ಸರ್ವಜ್ಞ

Last Updated 20 ಫೆಬ್ರುವರಿ 2019, 14:12 IST
ಅಕ್ಷರ ಗಾತ್ರ

ತುಮಕೂರು: ಸರ್ವಜ್ಞ ಕವಿಯ ತ್ರಿಪದಿಗಳು ಇಂದಿಗೂ ಕನ್ನಡ ಸಾರಸ್ವತ ಲೋಕವನ್ನು ಬೆಳಗುತ್ತಿವೆ ಎಂದು ಉಪವಿಭಾಗಾಧಿಕಾರಿ ಶಿವಕುಮಾರ್ ನುಡಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಸಾಂಕೇತಿಕವಾಗಿ ಏರ್ಪಡಿಸಿದ್ದ ಸರ್ವಜ್ಞ ಜಯಂತಿಯಲ್ಲಿ ಸರ್ವಜ್ಞನ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

‘ಸರ್ವಜ್ಞರು ಸಮಾಜದ ಉದ್ಧಾರಕ್ಕಾಗಿ ನಾಡನ್ನು ಪರ್ಯಟನೆ ಮಾಡಿದರು. ತನ್ನ ಅನುಭವದಿಂದ ತ್ರಿಪದಿಗಳನ್ನು ರಚಿಸಿ ಕೋಟ್ಯಂತರ ಜನರಿಗೆ ದಾರಿದೀಪವಾದರು. ಇವರ ಮೂಲ ಹೆಸರು ಪುಷ್ಪದತ್ತ. ಸರ್ವಜ್ಞ ಎಂಬುದು ನಾಮಾಂಕಿತ ಮಾತ್ರ. ತೆಲುಗಿನ ಕವಿ ವೇಮನ, ತಮಿಳಿನ ತಿರುವಳ್ಳುವರ್ ಅವರಂತೆಯೇ ಕನ್ನಡದಲ್ಲಿ ಸರ್ವಜ್ಞರು ಪ್ರಸಿದ್ಧರು ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ನಿರ್ದೇಶಕ ಗುರುಮೂರ್ತಿ, ಕುಂಬಾರ ಸಂಘದ ಅಧ್ಯಕ್ಷ ವಿ.ರಾಮಚಂದ್ರಪ್ಪ, ಖಜಾಂಚಿ ಎಚ್ ಅನ್ನಪೂರ್ಣ, ಸದಸ್ಯರಾದ ವಸಂತ ಕುಮಾರ್, ಸದಾಶಿವಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಸವರಾಜಪ್ಪ ಆಪಿನಕಟ್ಟೆ, ಸುರೇಶ್, ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT