ಶ್ರೀ ಚುನಾವಣಾ ಆಯೋಗ ಪ್ರಸನ್ನ!: ಚರ್ಚೆಗೀಡಾದ ಮತದಾನ ಜಾಗೃತಿ ಕರಪತ್ರ

ಬುಧವಾರ, ಏಪ್ರಿಲ್ 24, 2019
33 °C

ಶ್ರೀ ಚುನಾವಣಾ ಆಯೋಗ ಪ್ರಸನ್ನ!: ಚರ್ಚೆಗೀಡಾದ ಮತದಾನ ಜಾಗೃತಿ ಕರಪತ್ರ

Published:
Updated:
Prajavani

ತುಮಕೂರು: ಕಡ್ಡಾಯ ಮತದಾನಕ್ಕೆ ಸಂಬಂಧಿಸಿದಂತೆ ಜಿಲ್ಲಾ ಸ್ವಿಪ್ ಸಮಿತಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಜಾಗೃತಿ ನಡೆಸುತ್ತಿವೆ. ಈಗ ರಾಜ್ಯ ಮತ್ತು ಕೇಂದ್ರ ಮುಖ್ಯ ಚುನಾವಣಾ ಆಯುಕ್ತರು, ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭ ಕಲ್ಯಾಣ್ ಅವರ ಹೆಸರಿರುವ ಮತದಾನ ಜಾಗೃತಿ ಕರಪತ್ರ ವಿವಾದಕ್ಕೆ ಕಾರಣವಾಗಿದೆ.

ಲಗ್ನಪತ್ರಿಕೆ ಮಾದರಿಯ ಈ ಕರಪತ್ರದಲ್ಲಿ ಮತದಾನದ ಜಾಗೃತಿ ಮೂಡಿಸಲಾಗಿದೆ. ಮೊದಲಿಗೆ ‘ಚುನಾವಣಾ ಆಯೋಗ’ ಪ್ರಸನ್ನ ಎಂದಿದೆ. ನಂತರ ಚಿ.ಮತದಾರ ಮತ್ತು ಚಿ.ಸೌ.ಪ್ರಜಾಪ್ರಭುತ್ವ ಎಂದು ಗಂಡು ಮತ್ತು ಹೆಣ್ಣಿನ ಹೆಸರನ್ನು ಬರೆಯಲಾಗಿದೆ. ಈ ಕರಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

‘ಈ ಕರಪತ್ರದ ಉದ್ದೇಶ ಉತ್ತಮವಾದುದ್ದೇ ಆಗಿದೆ. ಆದರೆ ಮತದಾರ ಗಂಡು, ಪ್ರಜಾಪ್ರಭುತ್ವ ಹೆಣ್ಣು ಎಂಬುದು ಇಂದೇ ಗೊತ್ತಾಗಿದ್ದು. ಇದನ್ನು ತಿಳಿಸಿಕೊಟ್ಟವರಿಗೆ ಧನ್ಯವಾದಗಳು’ ಎನ್ನುವ ವ್ಯಂಗ್ಯದ ಧ್ವನಿ ಕೇಳಿ ಬರುತ್ತಿದೆ. ಈ ಕರಪತ್ರಕ್ಕೂ ಜಿಲ್ಲಾಡಳಿತಕ್ಕೂ ಸಂಬಂಧ ಇಲ್ಲ ಎಂದು ಜಿಲ್ಲಾಡಳಿತದ ಮೂಲಗಳು ಸ್ಪಷ್ಟಪಡಿಸುತ್ತವೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !