ತಂಬಾಕು ದುಷ್ಪರಿಣಾಮ ಜಾಗೃತಿ ಮೂಡಿಸಿ

7

ತಂಬಾಕು ದುಷ್ಪರಿಣಾಮ ಜಾಗೃತಿ ಮೂಡಿಸಿ

Published:
Updated:

ತುಮಕೂರು: ವಾಹನ ಚಾಲಕರು ಮತ್ತು ನಿರ್ವಾಹಕರು ಧೂಮಪಾನ ಮಾಡಬಾರದು. ಪ್ರಯಾಣಿಕರು ಮತ್ತು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಕೆಎಸ್ಆರ್‌ಟಿಸಿ ತುಮಕೂರು ವಿಭಾಗೀಯ ಅಧಿಕಾರಿ ಗಜೇಂದ್ರ ಹೇಳಿದರು.

ತಂಬಾಕು ಮುಕ್ತ ತುಮಕೂರುನಗರ ಅಭಿಯಾನದಡಿ ಶುಕ್ರವಾರ ಸಾರಿಗೆ ಸಿಬ್ಬಂದಿಗೆ ಆಯೋಜಿಸಿದ್ದ ತಂಬಾಕು ದುಷ್ಪರಿಣಾಮಗಳ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ತಂಬಾಕು ಬಳಸುವುದರಿಂದ ಕ್ಯಾನ್ಸರ್, ಪಾರ್ಶ್ವವಾಯು, ಹೃದಯ ಸಂಬಂಧಿ ಕಾಯಿಲೆ ಸೇರಿ ಹಲವು ಕಾಯಿಲೆಗಳಿಗೆ ತುತ್ತಾಗಬೇಕಾಗುತ್ತದೆ. ತಂಬಾಕು ವ್ಯಸನಿಗಳಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಉಚಿತ ಆಪ್ತ ಸಮಾಲೋಚನೆ ನಡೆಸಲಾಗುತ್ತಿದೆ. ಇದರ ಪ್ರಯೋಜನ ಪಡೆಯಬೇಕು ಎಂದು ಹೇಳಿದರು.

ತರಬೇತಿ ಕಾರ್ಯಾಗಾರದಲ್ಲಿ ಡಿಪೋ ವ್ಯವಸ್ಥಾಪಕ ಲಕ್ಷ್ಮಿಪತಿ, ಕಾರ್ಮಿಕ ಕಲ್ಯಾಣಾಧಿಕಾರಿ ಹಂಸವೀಣಾ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಎಂ.ಆರ್.ರವಿಪ್ರಕಾಶ್, ಪುಂಡಲೀಕ ಲಕಾಟಿ, ಟಿ.ಆರ್.ರುಕ್ಮಿಣಿ ಇದ್ದರು.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !