ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಳೆ ದುಬಾರಿ, ಕುಸಿದ ಟೊಮೆಟೊ ಬೆಲೆ

ಮೊಟ್ಟೆಕೋಳಿ ಬೆಲೆ ಕೆ.ಜಿ ₹170, ಮೊಟ್ಟೆಯೂ ದುಬಾರಿ
Last Updated 27 ಸೆಪ್ಟೆಂಬರ್ 2020, 2:19 IST
ಅಕ್ಷರ ಗಾತ್ರ

ತುಮಕೂರು: ಈ ವಾರ ಮಾರುಕಟ್ಟೆಯಲ್ಲಿ ತರಕಾರಿ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗದಿದ್ದರೂ, ಧಾನ್ಯಗಳು ದುಬಾರಿಯಾಗಿವೆ. ಬಹುತೇಕ ಧಾನ್ಯಗಳ ಬೆಲೆಯು ಕೆ.ಜಿ.ಗೆ ₹5ರಿಂದ ₹10ರ ವರೆಗೆ ಏರಿಕೆ ಕಂಡಿವೆ. ಅಡುಗೆ ಎಣ್ಣೆ ಧಾರಣೆಯೂ ಹೆಚ್ಚಳವಾಗಿದೆ.

ತೊಗರಿ ಬೇಳೆ, ಉದ್ದಿನ ಬೇಳೆ, ಬಟಾಣಿ, ಕಡಲೆ ಕಾಳು ತಲಾ ಕೆ.ಜಿ.ಗೆ ₹10 ಏರಿಕೆಯಾಗಿದ್ದರೆ, ಕಡಲೆ ಬೇಳೆ, ಕಡಲೆ ಹಿಟ್ಟು ತಲಾ ಕೆ.ಜಿ.ಗೆ ₹5 ಹೆಚ್ಚಳವಾಗಿದೆ. ಅಡುಗೆ ಎಣ್ಣೆಯಂತೂ ಇತರ ಪದಾರ್ಥಗಳಿಗಿಂತ ತುಸು ಹೆಚ್ಚೇ ದುಬಾರಿಯಾಗಿದ್ದು, ಎಲ್ಲಾ ಬ್ರಾಂಡ್‌ಗಳ ಬೆಲೆ ಕೆ.ಜಿ.ಗೆ ತಲಾ ₹20 ಏರಿಕೆಯಾಗಿದೆ. ಮಹಾಲಯ ಅಮಾವಾಸ್ಯೆ ಹಬ್ಬ ಬಂದಿದ್ದೇ ಬೆಲೆ ಜಿಗಿತಕ್ಕೆ ಕಾರಣವಾಗಿದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.

ಟೊಮೆಟೊ ಅಗ್ಗ: ಬೀನ್ಸ್ ಬೆಲೆ ಕಡಿಮೆಯಾಗಿಲ್ಲ. ಕೆ.ಜಿ ₹150ರ ಆಸುಪಾಸಿನಲ್ಲಿ ಮಾರಾಟವಾಗುತ್ತಿದ್ದರೆ, ಟೊಮೆಟೊ ಧಾರಣೆ ತೀವ್ರ ಕುಸಿತ ಕಂಡಿದೆ. ಕಳೆದ ವಾರ ಕೆ.ಜಿ ₹40ಕ್ಕೆ ಮಾರಾಟವಾಗಿದ್ದರೆ, ಈ ವಾರ ₹10–12ಕ್ಕೆ ಇಳಿಕೆಯಾಗಿದೆ. ಬದನೆಕಾಯಿ, ಮೂಲಂಗಿ ಬೆಲೆಯೂ ತುಸು ತಗ್ಗಿದೆ. ಉಳಿದಂತೆ ಇತರ ತರಕಾರಿ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಹಣ್ಣುಗಳ ಧಾರಣೆಯಲ್ಲೂ ಹೆಚ್ಚಿನ ವ್ಯತ್ಯಾಸ ಕಂಡುಬಂದಿಲ್ಲ.

ಕೋಳಿ ದುಬಾರಿ: ಮೊಟ್ಟೆಕೋಳಿ ಧಾರಣೆಯು ಒಮ್ಮೆಲೆ ಕೆ.ಜಿ.ಗೆ ₹110ರಿಂದ 170ಕ್ಕೆ ಜಿಗಿದಿದ್ದು, ಕೆ.ಜಿ.ಗೆ ₹60ರಿಂದ 70ರ ವರೆಗೆ ಏರಿಕೆಯಾಗಿದೆ. ಬ್ರಾಯ್ಲರ್ ಕೋಳಿ ಕೆ.ಜಿ ₹200ರಿಂದ 220ಕ್ಕೆ ಮಾರಾಟವಾಗುತ್ತಿದೆ. ಮೊಟ್ಟೆ ಬೆಲೆ ಸಹ ಹೆಚ್ಚಳವಾಗಿದ್ದು, 1ಕ್ಕೆ ₹ 6ರಂತೆ ಮಾರಲಾಗುತ್ತಿದೆ. ಲಾಕ್‌ಡೌನ್ ಸಮಯದಲ್ಲಿ ಕೋಳಿ ಸಾಕಾಣಿಕೆ ಸ್ಥಗಿತಗೊಂಡಿದ್ದು ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ. ಬ್ರಾಯ್ಲರ್ ಕೋಳಿ ಸಾಕಾಣಿಕೆ ಮಾಡಿದರೆ 2ರಿಂದ 3 ತಿಂಗಳಲ್ಲಿ ಮಾರುಕಟ್ಟೆಗೆ ಬರುತ್ತದೆ. ಆದರೆ ಮೊಟ್ಟೆಕೋಳಿ ಮಾರುಕಟ್ಟೆಗೆ ಬರಲು 10ರಿಂದ 12 ತಿಂಗಳು ಬೇಕಾಗುತ್ತದೆ. ಹಾಗಾಗಿ ಮತ್ತಷ್ಟು ದಿನಗಳ ಕಾಲ ಬೆಲೆ ಕಡಿಮೆಯಾಗುವ ಸೂಚನೆಗಳು ಕಾಣುತ್ತಿಲ್ಲ.

ಮೀನು: ಬಂಗುಡೆ ಕೆ.ಜಿ ₹260–300, ಬೂತಾಯಿ ₹240, ಅಂಜಲ್ ₹630, ಬೊಳಿಂಜಿರ್ ₹260, ಬಿಳಿ ಮಾಂಜಿ ಕೆ.ಜಿ ₹680ಕ್ಕೆ ನಗರದ ಮತ್ಸ ದರ್ಶಿನಿಯಲ್ಲಿ ಮಾರಾಟವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT