ಶನಿವಾರ, ಸೆಪ್ಟೆಂಬರ್ 21, 2019
21 °C

ಮೇ 19ರಂದು ವಿದ್ಯುತ್ ವ್ಯತ್ಯಯ

Published:
Updated:

ತುಮಕೂರು: ತುಮಕೂರು ನಗರ ಬೆಸ್ಕಾಂ ಉಪವಿಭಾಗ ವ್ಯಾಪ್ತಿಯ ಅಂತರಸನಹಳ್ಳಿ 220 ಕೆವಿಎ ಸ್ವೀಕರಣಾ ಕೇಂದ್ರದಿಂದ ಹೊರಡುವ 11 ಕೆವಿ 400sqmm ಭೂಗತ ಕೇಬಲ್ ಕಾಮಗಾರಿ ಕೈಗೊಂಡಿದ್ದು,  ಭಾನುವಾರ (ಮೇ 19) ಬೆಳಿಗ್ಗೆ 10 ಗಂಟೆಯಿಂದ ಸಂಜೆ 5ರವರೆಗೆ ಕೆಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.

ಮಲ್ಲೇನಹಳ್ಳಿ, ಅರಕೆರೆ, ಅಜ್ಜಪ್ಪನಹಳ್ಳಿ, ಸ್ವಾಂದೇನಹಳ್ಳಿ, ಸತ್ಯಸಾಯಿ ಲೇಔಟ್, ಸತ್ಯಮಂಗಲ, ಕೈಗಾರಿಕಾ ಪ್ರದೇಶ, ವಡ್ಡರಹಳ್ಳಿ, ನವಿಲಹಳ್ಳಿ ಕ್ರಾಸ್, ರಂಗಾಪುರ, ಲಿಂಗಾಪುರ, ಬಾಲಾಜಿ ಲೇಔಟ್, ಅಣ್ಣೇನಹಳ್ಳಿ, ತಿಮ್ಮಲಾಪುರ, ಮಾರುಕಟ್ಟೆ, ಮಹಾಲಕ್ಷ್ಮಿ ಲೇಔಟ್, ಪುಟ್ಟಸ್ವಾಮ್ಯನ ಪಾಳ್ಯ, ಶಿರಾಗೇಟ್, ಹೊಂಬಯ್ಯನಪಾಳ್ಳ, ಬ್ಯಾಂಕ್ ಕಾಲೋನಿ, ಕೆಐಎಡಿಬಿ ಕೈಗಾರಿಕಾ ಪ್ರದೇಶ, ಶ್ರೀದೇವಿ ಕಾಲೇಜು, ವಾಸವಿ ನಗರ, ಹೊಸಹಳ್ಳಿ, ಎ.ಎಂ ಪಾಳ್ಯ, ಹೊನ್ನೇನಹಳ್ಳಿ, ಹೌಸಿಂಗ್ ಬೋರ್ಡ್, ಎಸ್.ಎನ್ ಪಾಳ್ಯ ಸೇರಿದಂತೆ ಸುತ್ತಮುತ್ತ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.

 

Post Comments (+)