ಭಾನುವಾರ, ಜೂನ್ 13, 2021
21 °C
ಜಿಲ್ಲೆಯಲ್ಲಿ 1,544 ಮಂದಿ ಗುಣಮುಖ

ತುಮಕೂರು; ಕೋವಿಡ್‌ನಿಂದ ಮತ್ತೆ 5 ಮಂದಿ ಸಾವು, 2,603ಕ್ಕೆ ಏರಿದ ಸೋಂಕಿತರ ಸಂಖ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ತುಮಕೂರು: ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಬಳಲುತ್ತಿದ್ದ 5 ಮಂದಿ ಮತ್ತೆ ಮೃತಪಟ್ಟಿದ್ದಾರೆ. ಭಾನುವಾರ 94 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ಮೃತಪಟ್ಟ 5 ಮಂದಿಯೂ ಪುರುಷರೇ ಆಗಿದ್ದಾರೆ. ಈವರೆಗೆ ಜಿಲ್ಲೆಯಲ್ಲಿ ಮೃತಪಟ್ಟವರ ಸಂಖ್ಯೆ 79 ಹಾಗೂ ಸೋಂಕಿತರ ಸಂಖ್ಯೆ 2603ಕ್ಕೆ ಏರಿಕೆಯಾಗಿದೆ. ಭಾನುವಾರ ದೃಢಪಟ್ಟ ಸೋಂಕಿತರಲ್ಲಿ 62 ಮಂದಿ ಪುರುಷರು ಹಾಗೂ 32 ಮಂದಿ ಮಹಿಳೆಯರು ಇದ್ದಾರೆ. 

ತುಮಕೂರಿನ ಕೋತಿತೋಪು ರಸ್ತೆಯ 44 ವರ್ಷ, ಸಿದ್ಧಗಂಗಾ ಬಡಾವಣೆಯ 60 ವರ್ಷ ಹಾಗೂ ಗಾಂಧಿನಗರದ 68 ವರ್ಷದ ಪುರುಷರು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ. ಪಾವಗಡ ತಾಲ್ಲೂಕು ಮಹಾದೇವನಗರದ 52 ವರ್ಷ ಹಾಗೂ ಶಿರಾ ತಾಲ್ಲೂಕು ಕಚೇರಿ ಮೊಹಲ್ಲಾ ಬಡಾವಣೆಯ 72 ವರ್ಷದ ಪುರುಷರು ಜೀವಬಿಟ್ಟಿದ್ದಾರೆ.

ಶೇ 60 ಮಂದಿ ಗುಣಮುಖ: ಕೊರೊನಾ ಸೋಂಕಿನಿಂದ ಬಳಲುತ್ತಿದ್ದ 85 ಮಂದಿ ಗುಣಮುಖರಾಗಿ ಭಾನುವಾರ ಮನೆಗಳಿಗೆ ತೆರಳಿದರು. ಈವರೆಗೆ ಜಿಲ್ಲೆಯಲ್ಲಿ 1544 ಮಂದಿ ಗುಣಮುಖರಾಗಿದ್ದಾರೆ. 980 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಒಂದೆಡೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದರೆ, ಮತ್ತೊಂದೆಡೆ ಅಷ್ಟೇ ಸಂಖ್ಯೆಯ ಜನರು ಗುಣಮುಖರಾಗಿ ಮನೆಗಳಿಗೆ ಹಿಂದಿರುಗುತ್ತಿದ್ದಾರೆ. ತುಮಕೂರಿನಲ್ಲಿ ಸೋಂಕಿತರು ಒಂದು ಸಾವಿರ ಸಂಖ್ಯೆ ದಾಟಿದ್ದಾರೆ. 

ತಾಲ್ಲೂಕುಇಂದಿನ ಸೋಂಕಿತರು (ಆ.9)ಒಟ್ಟು ಸೋಂಕಿತರುಮರಣ
ಚಿ.ನಾ.ಹಳ್ಳಿ11383
ಗುಬ್ಬಿ71373
ಕೊರಟಗೆರೆ81672
ಕುಣಿಗಲ್72794
ಮಧುಗಿರಿ71773
ಪಾವಗಡ111942
ಶಿರಾ81694
ತಿಪಟೂರು121712
ತುಮಕೂರು301,03956
ತುರುವೇಕೆರೆ31320
ಒಟ್ಟು942,60379

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು