ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್ ಇಲಾಖೆಯಿಂದ 'ಆಟೊ ಮಿತ್ರ ಆ್ಯಪ್‌' ಪರಿಚಯ

Last Updated 30 ಮೇ 2018, 9:54 IST
ಅಕ್ಷರ ಗಾತ್ರ

ಶಿವಮೊಗ್ಗ: ಆಟೊ ಚಾಲಕರು ಪ್ರಯಾಣಿಕರೊಂದಿಗೆ ಅಸಭ್ಯ ವರ್ತನೆ, ಹೆಚ್ಚಿನ ದರಕ್ಕೆ ಬೇಡಿಕೆ, ಬಾಡಿಗೆ ಬರಲು ನಿರಾಕರಿಸಿದಲ್ಲಿ ಪ್ರಯಾಣಿಕರು ಕೂಡಲೇ ಪೊಲೀಸ್ ಇಲಾಖೆಗೆ ದೂರು ನೀಡಲು ಅನುಕೂಲವಾಗುವಂ 'ಆಟೊ ಮಿತ್ರ' ಎಂಬ ಆ್ಯಪ್‌ ಅನ್ನು ಪರಿಚಯಿಸಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ ಖರೆ ಹೇಳಿದರು.

ಈ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ನಗರದಲ್ಲಿ  3,500 ಆಟೊ ಚಾಲಕರ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ಭಾವಚಿತ್ರ ಮುಂತಾದ ವಿವರಗಳನ್ನು ಸಂಗ್ರಹಿಸಿ, ಬಾರ್‌ಕೋಡ್ ಹಾಗೂ ಸಂಖ್ಯೆ ಹೊಂದಿರುವ ಮಾಹಿತಿ ಫಲಕವನ್ನು ವಿತರಿಸಲಾಗಿದೆ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಈ ಮಾಹಿತಿ ಫಲಕದಿಂದಾಗಿ ಪ್ರಯಾಣಿಕರು ತಮ್ಮ ಮೊಬೈಲ್‌ನಲ್ಲಿ ಆಟೊಮಿತ್ರ ಆ್ಯಪ್‌ ಅನ್ನು ಡೌನ್‌ಲೋಡ್ ಮಾಡಿಕೊಂಡು ಪರವಾನಗಿ ಮಾಹಿತಿ ಕಾರ್ಡ್‌, ಬಾರ್‌ ಕೋಡ್, ಸ್ಕ್ಯಾನಿಂಗ್ ಅಥವಾ ಪಿಎಸ್ಎನ್ ಸಂಖ್ಯೆ ಬಳಸಿ ಆಟೊ ಚಾಲಕರ ವಿವರಗಳನ್ನು ಪರಿಶೀಲಿಸಬಹುದು.  ಪ್ರಯಾಣದ ಸಮಯದಲ್ಲಿ ಆಟೊ ಚಾಲಕರ ವಿವರಗಳನ್ನು ತಮ್ಮ ಸ್ನೇಹಿತರಿಗೆ ಹಾಗೂ ಕುಟುಂಬ ವರ್ಗದವರಿಗೆ ನೀಡಬಹುದು. ಇದರಿಂದ ಪೊಲೀಸ್ ಇಲಾಖೆ ಜನಸ್ನೇಹಿಯಾಗಿದೆ ಎಂದರು.

ಸ್ವಂತ ವಾಹನ ಹೊಂದಿದವರಿಗೆ ವೈಯಕ್ತಿಕವಾದ ಕಾರ್ಡನ್ನು ಇಲಾಖೆ ವಿತರಿಸಿದೆ. ಪ್ರಸ್ತುತ ಆಟೊಗಳಿಗೆ ಎಸ್ಎಂಜಿ ಸಂಖ್ಯೆಗಳನ್ನು ನೀಡಲಾಗಿದೆ. ಶಿವಮೊಗ್ಗದಲ್ಲಿ ನೋಂದಾಯಿಸದ ವಾಹನಗಳ ಪ್ರವೇಶಕ್ಕೆ ಅನುಮತಿ ಇಲ್ಲ. ಅನುಮತಿ ಪಡೆಯದೇ ಇರುವ ವಾಹನಗಳನ್ನು ವಶಕ್ಕೆ ಪಡೆದುಕೊಳ್ಳಲಾಗುವುದು ಎಂದರು.

ನಗರದಲ್ಲಿ ವಾಹನ ಸಂಚಾರ ದಟ್ಟಣೆ ದಿನೇದಿನೇ ಹೆಚ್ಚಳವಾಗುತ್ತಿದ್ದು, ಸಂಚಾರ ವ್ಯವಸ್ಥೆಯನ್ನು ನಿಯಂತ್ರಿಸುವುದು ಕಷ್ಟಕರ. ಆದ್ದರಿಂದ ತಾಂತ್ರಿಕ ಆಧಾರಿತ ಟ್ರಾಫಿಕ್ ಎನ್‌ಫೋರ್ಸ್‌ಮೆಂಟ್ ಮಾಡುವ ಸದುದ್ದೇಶದಿಂದ ನಗರದಲ್ಲಿ ಆಟೊಮೇಶನ್ ಕೇಂದ್ರವನ್ನು ತೆರೆಯಲಾಗಿದೆ ಎಂದರು.

ಆಟೊಮೇಶನ್ ತಂತ್ರಾಂಶ ಅಭಿವೃದ್ಧಿಪಡಿಸಿ, ಕಾರ್ಯರೂಪಕ್ಕೆ ಬಂದನಂತರ ಸೀಮಿತ ಕೆಲವೇ ದಿನಗಳ ಅವಧಿಯಲ್ಲಿ ಸುಮಾರು 8,700 ವಾಹನಗಳಿಗೆ ಸಂಚಾರ ನಿಯಮ ಉಲ್ಲಂಘನೆ ನೋಟಿಸ್‌ಗಳನ್ನು ವಾಹನ ನೋಂದಣಿಯಾಗಿರುವ ವಿಳಾಸಕ್ಕೆ ಕಳುಹಿಸಿಕೊಡಲಾಗಿದೆ. ಅವುಗಳಲ್ಲಿ 1,267 ನೋಟಿಸ್‌ಗಳಿಗೆ ₹ 1,27,500 ದಂಡ ಪಾವತಿಯಾಗಿದೆ. ನೋಟಿಸ್‌ಗಳಿಗೆ ದಂಡವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಅಥವಾ ಜೂನ್ 1ರಿಂದ ನಗರದ ನಂ.1 ಕೇಂದ್ರಗಳಲ್ಲಿ ಪಾವತಿಸಬಹುದಾಗಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಡಿವೈಎಸ್‌ಪಿ ಸುದರ್ಶನ್, ವೆಂಕಟೇಶ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT