ಗುರುವಾರ , ಸೆಪ್ಟೆಂಬರ್ 19, 2019
26 °C

ಹತ್ಯಾಳು ನರಸಿಂಹಸ್ವಾಮಿ ಬೆಟ್ಟದಿಂದ ಇಳಿವಾಗ ಟ್ರ್ಯಾಕ್ಟರ್ ಪಲ್ಟಿ: ಐವರು ಸಾವು

Published:
Updated:

ತಿ‍ಪಟೂರು: ಸಮೀಪದ ಹತ್ಯಾಳು ನರಸಿಂಹಸ್ವಾಮಿ ಬೆಟ್ಟದಿಂದ ಕಡಿದಾದ ಇಳಿಜಾರಿನಲ್ಲಿ ಇಳಿಯುವಾಗ ಟ್ರ್ಯಾಕ್ಟರ್ ಚಾಲಕನ ನಿಯಂತ್ರಣ ತಪ್ಪಿ ಬಿದ್ದಿದ್ದರಿಂದ ಐದು ಮಂದಿ ಶನಿವಾರ ಸಂಜೆ ಮೃತಪಟ್ಟಿದ್ದಾರೆ.

ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮಾದಾಪುರ ಗ್ರಾಮದ ಶಂಕರಮ್ಮ( 55), ಶಿವಲಿಂಗಯ್ಯ (50), ಶಂಕರಪ್ಪ(60), ಭುವನ (9), ನಾಗರಾಜು (43) ಮೃತಪಟ್ಟವರು. ಈ ಎಲ್ಲರೂ ಒಂದೇ ಗ್ರಾಮದವರು. 

‘ಶನಿವಾರ ಬೆಟ್ಟದಲ್ಲಿ ಪೂಜೆ ಸಲ್ಲಿಸಲು ಟ್ರ್ಯಾಕ್ಟರ್‌ನಲ್ಲಿ 20 ಮಂದಿ ತೆರಳಿದ್ದರು. ಪೂಜೆ ಬಳಿಕ ಗ್ರಾಮಕ್ಕೆ ಹಿಂದಿರುಗಿ ಬರುವಾಗ ಟ್ರ್ಯಾಕ್ಟರ್ ಚಾಲಕನ ನಿಯಂತ್ರಣ ತಪ್ಪಿ ಬಿದ್ದಿದೆ. 12ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ’ ಎಂದು ಪೊಲೀಸರು ತಿಳಿಸಿದ್ದಾರೆ.

Post Comments (+)