ಒಂದೇ ದಿನದಲ್ಲಿ ₹ 22 ಸಾವಿರ ದಂಡ

7
ಬಾಲಕ, ಬಾಲಕಿಯರಿಂದ ದ್ವಿಚಕ್ರವಾಹನ ಚಾಲನೆ, ಪೋಷಕರ ವಿರುದ್ಧವೂ ನಿರ್ದಾಕ್ಷಿಣ್ಯ ಕ್ರಮ

ಒಂದೇ ದಿನದಲ್ಲಿ ₹ 22 ಸಾವಿರ ದಂಡ

Published:
Updated:
Deccan Herald

ತುಮಕೂರು: ನಗರದಲ್ಲಿ ಇತ್ತೀಚೆಗೆ ಬಾಲಕ, ಬಾಲಕಿಯರು ಹೆಚ್ಚಿನ ಪ್ರಮಾಣದಲ್ಲಿ ದ್ವಿಚಕ್ರವಾಹನಗಳನ್ನು ಅಪಾಯಕಾರಿ ರೀತಿಯಲ್ಲಿ ಚಾಲನೆ ಮಾಡುತ್ತಿದ್ದಾರೆ ಎಂಬ ದೂರುಗಳು ಸಾರ್ವಜನಿಕರಿಂದ ಬಂದ ಹಿನ್ನೆಲೆಯಲ್ಲಿ ಮಂಗಳವಾರ ವಿಶೇಷ ಅಭಿಯಾನ ನಡೆಸಿದ ಪೊಲೀಸರು 20 ಪ್ರಕರಣ ದಾಖಲಿಸಿ ₹ 22,600 ದಂಡ ವಿಧಿಸಿದ್ದಾರೆ.

ಇನ್ನು ಮುಂದೆ  ಬಾಲಕ ಮತ್ತು ಬಾಲಕಿಯರಿಗೆ ವಾಹನ ಚಾಲನೆ ಮಾಡಲು ನೀಡುವಂತಹ ಪೋಷಕರ ಮೇಲೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ದಿವ್ಯ ಗೋಪಿನಾಥ್ ಎಚ್ಚರಿಕೆ ನೀಡಿದ್ದಾರೆ.

ಸಾರ್ವಜನಿಕರು ಸಂಚಾರ ನಿಯಮಗಳನ್ನು ಪಾಲನೆ ಮಾಡಿ ತುಮಕೂರು ನಗರವನ್ನು ಸ್ಮಾರ್ಟ್‌ ಸಿಟಿಯನ್ನಾಗಿ ಮಾಡಲು ಕೈ ಜೋಡಿಸಬೇಕು ಎಂದು ಮನವಿ ಮಾಡಿದ್ದಾರೆ.

ಜುಲೈನಲ್ಲಿ 10,027 ಪ್ರಕರಣ ದಾಖಲು!

ಕಳೆದ ಜುಲೈ ತಿಂಗಳಲ್ಲಿ ಮೋಟಾರು ವಾಹನ ಕಾಯ್ದೆ ಉಲ್ಲಂಘನೆ ಮಾಡಿದವರ ವಿರುದ್ಧ 10,027 ಪ್ರಕರಣಗಳನ್ನು ನಗರದಲ್ಲಿ ದಾಖಲಿಸಿದ್ದು, ₹ 20 ಲಕ್ಷ ದಂಡ ವಿಧಿಸಲಾಗಿದೆ.

ಪ್ರಕರಣ ಸಂಖ್ಯೆ ದಂಡ
ಚಾಲನಾ ಪರವಾನಗಿ ಇಲ್ಲದ್ದು 1904 ₹6,63,300
ಹೆಲ್ಮೆಟ್‌ ಇಲ್ಲದ್ದಕ್ಕೆ 4294 ₹4,29,400
ಮದ್ಯಪಾನ ಮಾಡಿ ಚಾಲನೆ 196 ₹2,87,900
ನಿಷೇಧ ಸ್ಥಳದಲ್ಲಿ ವಾಹನ ನಿಲುಗಡೆ 441 ₹44,100
ಸೀಟ್ ಬೆಲ್ಟ್ ಧರಿಸದ್ದಕ್ಕೆ 384 ₹38,400
ಸಿಗ್ನಲ್ ಉಲ್ಲಂಘನೆ 154 ₹15,400
ವಾಹನ ಕಾಯ್ದೆ ಉಲ್ಲಂಘನೆ 2377 ₹3,81,500

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !