ಶನಿವಾರ, ನವೆಂಬರ್ 28, 2020
18 °C
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕೆ

ಖಜಾನೆ ಖಾಲಿ: ಶಿರಾದಲ್ಲಿ ಹಣದ ಮೂಟೆ– ಸಿದ್ದರಾಮಯ್ಯ ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಾ:‘ಸಾಮಾಜಿಕ ಭದ್ರತಾ ಯೋಜನೆಯ ಅಡಿಯಲ್ಲಿ ಪಿಂಚಣಿ ನೀಡಲು ಮತ್ತು ಅಧಿಕಾರಿಗಳಿಗೆ ಸಂಬಳ ನೀಡಲು ಸರ್ಕಾರದ ಖಜಾನೆಯಲ್ಲಿ ಹಣ ಇಲ್ಲ ಎಂದು ಮುಖ್ಯಮಂತ್ರಿ ಹೇಳುತ್ತಾರೆ. ಆದರೆ, ಅವರ ಮಗ ಮೂಟೆಗಟ್ಟಲೇ ಹಣ ತಂದು ಶಿರಾದಲ್ಲಿ ಕುಳಿತಿದ್ದಾರೆ’ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. 

ತಾಲ್ಲೂಕಿನ ಕಾಡಜ್ಜನಪಾಳ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ರೋಡ್ ಷೊ ನಡೆಸಿ ಅವರು ಮಾತ‌ನಾಡಿದರು.

ಎಲ್ಲಿ ಸಲ್ಲದವರು ಬಿಜೆಪಿಯಲ್ಲಿ

‘ಎಲ್ಲೂ ಸಲ್ಲದವರು ಬಿಜೆಪಿಯಲ್ಲಿ ಸಲ್ಲುತ್ತಾರೆ. ಬಿಜೆಪಿಯಲ್ಲಿ ಸಲ್ಲುವರು ಜನರ ಬಳಿ ಸಲ್ಲುವುದಿಲ್ಲ. ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ಟಿಕೆಟ್‌ಗಾಗಿ ನಮ್ಮ ಬಳಿ ಬಂದಿದ್ದರು. ಜಯಚಂದ್ರ ಬಿಟ್ಟು ಬೇರೆಯವರಿಗೆ ಟಿಕೆಟ್ ನೀಡಲು ಸಾಧ್ಯ ಇಲ್ಲ ಹೇಳಿದಾಗ ಜೆಡಿಎಸ್ ಬಾಗಿಲು ತಟ್ಟಿದರು. ಅಲ್ಲೂ ಟಿಕೆಟ್ ದೊರೆಯದೆ ಬಿಜೆಪಿಗೆ ಹೋಗಿದ್ದಾರೆ’ ಎಂದರು. 

‘ಬಿಜೆಪಿಯಲ್ಲಿ ಪಕ್ಷ ನಿಷ್ಠಗೆ ಬೆಲೆ ಇದೆ ಪ್ರಾಮಾಣಿಕ ಕಾರ್ಯಕರ್ತರಿಗೆ ಗೌರವ ಇದೆ ಎನ್ನುತ್ತಾರೆ. ಆದರೆ ಬಿ.ಕೆ.ಮಂಜುನಾಥ್ ಅವರಿಗೆ ಮೋಸ ಮಾಡಿ ಹೊಸದಾಗಿ ಬಂದ ರಾಜೇಶ್ ಗೌಡ ಅವರಿಗೆ ಏಕೆ ಟಿಕೆಟ್ ನೀಡಿದರು. ನಮ್ಮಲ್ಲಿ ಪಕ್ಷ ನಿಷ್ಠಗೆ ಬೆಲೆ ‌ನೀಡಿ ಜಯಚಂದ್ರ ಅವರಿಗೆ ಟಿಕೆಟ್‌ ನೀಡಿದ್ದೇವೆ’ ಎಂದರು.

ಅಭ್ಯರ್ಥಿ ಟಿ.ಬಿ.ಜಯಚಂದ್ರ ಮಾತನಾಡಿದರು. ಮುಖಂಡ ಕೆ.ಎನ್.ರಾಜಣ್ಣ, ವಕ್ತಾರ ಬಿ.ಎನ್.ಚಂದ್ರಪ್ಪ, ಶಾಸಕ ಟಿ.ರಘು ಮೂರ್ತಿ, ಪರಮೇಶ್ವರ್ ನಾಯಕ, ಶಿವಮೂರ್ತಿ, ಪ್ರಕಾಶ್ ರಾಥೋಡ್, ಕಲ್ಕೆರೆ ರವಿಕುಮಾರ್, ಕೆಪಿಸಿಸಿ ಸದಸ್ಯ ಸತ್ಯನಾರಾಯಣ, ಬರಗೂರು ನಟರಾಜು, ಪಿ.ಆರ್.ಮಂಜುನಾಥ್, ಸೊರೆಕುಂಟೆ ಸತ್ಯನಾರಾಯಣ, ಸುರೇಶ್, ಕೃಷ್ಣೇಗೌಡ, ಮಹೇಶ್, ಬಾನು ಪ್ರಕಾಶ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು