ಗುರುವಾರ , ಆಗಸ್ಟ್ 11, 2022
21 °C

ಸಿದ್ಧಾರ್ಥದಲ್ಲಿ ಹೃದ್ರೋಗ ಚಿಕಿತ್ಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ನಗರದ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನಲ್ಲಿ ಅತ್ಯಾಧುನಿಕ ತಂತ್ರಜ್ಞಾನ, ನುರಿತ ಹೃದಯ ತಜ್ಞರನ್ನು ಒಳಗೊಂಡ ಹೃದ್ರೋಗ ಕೇಂದ್ರ ಆರಂಭಗೊಂಡಿದ್ದು, ಚಿಕಿತ್ಸೆ ನೀಡುವ ಪ್ರಕ್ರಿಯೆ ಆರಂಭಗೊಂಡಿದೆ.

ಹೃದ್ರೋಗ ಕೇಂದ್ರ ಆರಂಭವಾದ ನಂತರ 60ಕ್ಕೂ ಹೆಚ್ಚು ಜನರಿಗೆ ತಪಾಸಣೆ ನಡೆಸಿ, ಚಿಕಿತ್ಸೆ ನೀಡಲಾಗಿದೆ. ವಿದೇಶಿ ಗುಣಮಟ್ಟದ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ಹೃದಯ ಶಸ್ತ್ರಚಿಕಿತ್ಸೆ, ಸಂಕೀರ್ಣ ಜನ್ಮಜಾತ ಹೃದಯ ಶಸ್ತ್ರಚಿಕಿತ್ಸೆ, ಕನಿಷ್ಠ ಆಕ್ರಮಣಕಾರಿ ಹೃದಯ ಶಸ್ತ್ರಚಿಕಿತ್ಸೆ (ಕೀ ಹೋಲ್), ಹೃದಯಾಘಾತ ಶಸ್ತ್ರಚಿಕಿತ್ಸೆ, ಇಸಿಎಮೋ ಸೇವೆಗಳನ್ನು ನೀಡಲಾಗುತ್ತಿದೆ. ಆಂಜಿಯೋಗ್ರಾಮ್, ಆಂಜಿಯೋ ಪ್ಲ್ಯಾಸ್ಟಿ, ಪೇಸ್ ಮೇಕರ್ ಅಳವಡಿಕೆ, ಬಲೂನ್ ವಾಲ್ವೋಟಮಿ ರೋಟೋಬ್ಲೇಷನ್, ಸಾಧನ ಮುಚ್ಚುವಿಕೆ ಮತ್ತು ಸುರುಳಿ (ಕಾಯಿಲ್) ಶಸ್ತ್ರಚಿಕಿತ್ಸೆಗಳು ದೊರೆಯುತ್ತಿವೆ.

ಬಿಪಿಎಲ್, ಆಯುಷ್ಮಾನ್ ಕಾರ್ಡ್ ಹೊಂದಿರುವ ರೋಗಿಗಳಿಗೆ ಉಚಿತವಾಗಿ ತಪಾಸಣೆ ಮಾಡಲಾಗುತ್ತಿದೆ. ಸರ್ಕಾರಿ ನೌಕರರಿಗೂ ಇಎಸ್‍ಐ ಯೋಜನೆಯನ್ನೂ ಆಸ್ಪತ್ರೆಯಲ್ಲಿ ಅಳವಡಿಸಿಕೊಳ್ಳಲಾಗಿದೆ ಎಂದು ಸಿದ್ಧಾರ್ಥ ಅಡ್ವಾನ್ಸ್‌ಡ್ ಹಾರ್ಟ್ ಸೆಂಟರ್‌ನ ವೈದ್ಯ ಪ್ರಭಾಕರ್ ತಿಳಿಸಿದ್ದಾರೆ.

ಕಾರ್ಡಿಯೋಕೇರ್ ಸಂಸ್ಥೆ ಡಾ.ತಮಿನ್‍ ಅಹಮದ್ ನೇತೃತ್ವದಲ್ಲಿ ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಅಮೆರಿಕದ ಸ್ಟಾನ್‍ಫೋರ್ಡ್ ವಿ.ವಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸಿರುವ ತಜ್ಞರ ತಂಡ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದ್ದಾರೆ.

ತುಮಕೂರಿನ ಸುತ್ತಮುತ್ತಲಿನ ಹಾಗೂ ನೆರೆಹೊರೆ ಜಿಲ್ಲೆಗಳಿಗೂ ಚಿಕಿತ್ಸಾ ಸೌಲಭ್ಯ ದೊರೆಯುವಂತಾಗಲಿ ಎಂಬ ಉದ್ದೇಶದಿಂದ ಹೃದ್ರೋಗ ಕೇಂದ್ರ ಆರಂಭಿಸಲಾಗಿದೆ. ದಿನದ 24 ಗಂಟೆಗಳೂ ಕೆಲಸ ನಿರ್ವಹಿಸುತ್ತಿದೆ ಎಂದು ಸಿದ್ಧಾರ್ಥ ಶಿಕ್ಷಣ ಸಂಸ್ಥೆ ಕಾರ್ಯ
ದರ್ಶಿ ಡಾ.ಜಿ.ಪರಮೇಶ್ವರ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.