ಮರ ಕಡಿದವರ ಹಿಡಿದ ಪಾಲಿಕೆ ಸಿಬ್ಬಂದಿ

ಸೋಮವಾರ, ಜೂನ್ 17, 2019
28 °C
ವಾಲ್ಮೀಕಿನಗರದ ವಿನಾಯಕ ಉದ್ಯಾನದಲ್ಲಿನ ಮರಗಳಿಗೆ ಕೊಡಲಿ ಏಟು

ಮರ ಕಡಿದವರ ಹಿಡಿದ ಪಾಲಿಕೆ ಸಿಬ್ಬಂದಿ

Published:
Updated:
Prajavani

ತುಮಕೂರು: ನಗರದ ಬಟವಾಡಿ ಬಡಾವಣೆಯ ವಾಲ್ಮೀಕಿ ನಗರದಲ್ಲಿನ ವಿನಾಯಕ ಮಕ್ಕಳ ಉದ್ಯಾನದಲ್ಲಿನ ನಾಲ್ಕು ಬೃಹತ್ ಮರಗಳನ್ನು ಅಕ್ರಮವಾಗಿ ಕಡಿದು ಸಾಗಿಸುತ್ತಿದ್ದವರನ್ನು ಪಾಲಿಕೆಯ ಸಿಬ್ಬಂದಿಯೇ ಹಿಡಿದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಮೂರು ದಿನಗಳ ಹಿಂದೆ ರಾತ್ರೋ ರಾತ್ರಿ ಮರ ಕಡಿಯುತ್ತಿದ್ದವರನ್ನು ನಾಗರಿಕರ ಸಹಕಾರದಿಂದ ಹಿಡಿದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಟಾಟಾ ಎಸಿ ವಾಹನ, ಮರದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಂತಿನಗರದ ರಫೀಕ್, ಸೈಫುಲ್ಲಾ ಎಂಬುವರ ವಿರುದ್ದ ಅರಣ್ಯ ಇಲಾಖೆ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆಯೇ ಪಾಲಿಕೆ ಆಯುಕ್ತ ಟಿ.ಭೂಬಾಲನ್, ಆರೋಗ್ಯ ಅಧಿಕಾರಿ ನಾಗೇಶ್‌ಕುಮಾರ್ ಹಾಗೂ ಇತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !