ತುಮಕೂರು: ನಟ ಡಾ.ರಾಜಕುಮಾರ್ ವಿರುದ್ಧ ನಟ ಚೇತನ್ ಅಹಿಂಸಾ ನೀಡಿದ ಹೇಳಿಕೆ ಖಂಡಿಸಿ, ಕೂಡಲೇ ಅವರನ್ನು ರಾಜ್ಯದಿಂದ ಗಡಿಪಾರು ಮಾಡುವಂತೆ ಒತ್ತಾಯಿಸಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸುವ ಕುರಿತು ಸಮಾಲೋಚನಾ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.

ನಗರದಲ್ಲಿ ಶನಿವಾರ ಹಾಲಪ್ಪ ಪ್ರತಿಷ್ಠಾನದ ವತಿಯಿಂದ ಆಯೋಜಿಸಿದ್ದ ಕನ್ನಡಪರ ಸಂಘಟನೆ, ರಾಜಕುಮಾರ್ ಅಭಿಮಾನಿಗಳ ಸಮಾಲೋಚನೆ ಸಭೆಯಲ್ಲಿ ಚೇತನ್ ಹೇಳಿಕೆ ಕುರಿತು ಚರ್ಚಿಸಲಾಯಿತು. ರಾಜ್ಯದ ಎಲ್ಲ ವಿಶ್ವವಿದ್ಯಾಲಯದಲ್ಲಿ ರಾಜಕುಮಾರ್ ಅಧ್ಯಯನ ಪೀಠ ಸ್ಥಾಪಿಸಬೇಕು. ಜಿಲ್ಲಾ ಕೇಂದ್ರದಲ್ಲಿ ರಾಜಕುಮಾರ್ ಪ್ರತಿಮೆ ಪ್ರತಿಷ್ಠಾಪಿಸಬೇಕು. ಈ ಬಗ್ಗೆ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂಬ ತೀರ್ಮಾನಿಸಲಾಯಿತು.

‘ರಾಜಕುಮಾರ್ ಕನ್ನಡಿಗರ ಅಸ್ಮಿತೆ. ಶೂನ್ಯದಿಂದ ದಿಗಂತವರೆಗೆ ತಮ್ಮ ಕಲೆಯ ಮೂಲಕವೇ ಬೆಳೆದವರು. ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ಖಂಡನೀಯ’ ಎಂದು ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಮುರಳೀಧರ್ ಹಾಲಪ್ಪ ಹೇಳಿದರು.

ಮಾಜಿ ಶಾಸಕ ಗಂಗಹನುಮಯ್ಯ, ಮುಖಂಡರಾದ ನರಸೀಯಪ್ಪ, ದಿಬ್ಬೂರು ಮಂಜು, ವೆಂಕಟೇಶ್ ತಿಪಟೂರು, ಸೈಯದ್ ಖಲೀಂ, ಶಂಕರಪ್ಪ, ಆನಂತರಾಜು, ಪ್ರತಾಪ ಮದಕರಿ, ದಯಾನಂದ, ನಟರಾಜಶೆಟ್ಟಿ, ಕುಮಾರ್, ಬನಶಂಕರಿ ಬಾಬು, ಎಸ್.ಶಿವರಾಜು, ಅರುಣ್ಕುಮಾರ್, ನಿಸಾರ್ ಅಹ್ಮದ್, ಗಣೇಶ್, ಯಲ್ಲೇಶಗೌಡ, ದೀಕ್ಷಿತ್, ಹೇಮಂತಕುಮಾರ್, ಸಾಗರ್, ಸಿ.ಡಿ.ಜಯರಾಮ್, ಪಾವರ್ತಮ್ಮ ಇತರರು ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-17-507851585

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.