ಪ್ರಜಾವಣಿ ವಾರ್ತೆ

ತುಮಕೂರು: ‘ತಂತ್ರಜ್ಞಾನ ಯುಗದಲ್ಲಿ ಸಮಯಕ್ಕೆ ತಕ್ಕಂತೆ ವೇಗದ ಕಲಿಕೆ ಅಗತ್ಯ. ಹಳೆಯ ಕಲಿಕೆಯಿಂದ ಹೊರಬಂದು, ಹೊಸತು ಕಲಿಯುವ ರೂಢಿ ಬೆಳೆಸಿಕೊಳ್ಳಬೇಕು. ತಂತ್ರಜ್ಞಾನಕ್ಕೆ ಭಯಪಡುವ ಅವಶ್ಯಕತೆ ಇಲ್ಲ. ಬದಲಾಗಿ ಅದಕ್ಕೆ ನಾವೇ ಆದೇಶ ನೀಡುವುದನ್ನು ಕಲಿಯಬೇಕಿದೆ’ ಎಂದು ಬೆಂಗಳೂರಿನ ಐಐಐಟಿ ನಿರ್ದೇಶಕ ಪ್ರೊ. ದೇಬಬ್ರತ ದಾಸ್ ಪ್ರತಿಪಾದಿಸಿದರು.

ತುಮಕೂರು ವಿಶ್ವವಿದ್ಯಾಲಯದಲ್ಲಿ ಬುಧವಾರ ಹತ್ತೊಂಬತ್ತನೇ ಘಟಿಕೋತ್ಸವ ಭಾಷಣ ಮಾಡಿದರು.

‘ಭಾರತ ಈಗ ಬಹುದೊಡ್ಡ ರೂಪಾಂತರಕ್ಕೆ ಒಳಗಾಗಿದೆ. ನಾವು ಜಾಗತಿಕ ತಂತ್ರಜ್ಞಾನ ಬಳಸುವ ದೇಶವಾಗಷ್ಟೇ ಉಳಿದಿಲ್ಲ. ಬದಲಿಗೆ, ಜಗತ್ತಿಗಾಗಿಯೇ ಡಿಜಿಟಲ್ ಪಬ್ಲಿಕ್ ಇನ್ಫಾಸ್ಟ್ರಕ್ಚರ್ (ಡಿಪಿಐ) ನಿರ್ಮಿಸಿ ಕೊಡುತ್ತಿದ್ದೇವೆ. ಬೆಂಗಳೂರಿನ ಐಐಐಟಿ ಜಾಗತಿಕವಾಗಿ 60 ದೇಶಗಳಿಗೆ ಡಿಪಿಐಗೆ ಸಂಬಂಧಿಸಿದಂತೆ ಬೆಂಬಲ ಮತ್ತು ಸಲಹೆ ನೀಡುವ ಮೂಲಕ ಜಗತ್ತೇ ಗಮನಿಸುವಂತಹ ಕೆಲಸ ಮಾಡಿದೆ. ಮಾಡ್ಯುಲರ್ ಓಪನ್ ಸೋರ್ಸ್ ಐಡೆಂಟಿಟಿ ಫ್ಲಾಟ್ಫಾರ್ಮ್ ಪ್ರಸ್ತುತ 29 ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಡಿಜಿಟಲ್ ಜಗತ್ತಿನ ಅವಕಾಶಗಳು ಈಗ ಎಲ್ಲರಿಗೂ ಸಮಾನವಾಗಿ ಸಿಗುತ್ತಿವೆ’ ಎಂದು ಹೇಳಿದರು.

‘ದತ್ತಾಂಶ ಆಧರಿತ ಕೆಲಸಗಳನ್ನು ಮಾಡುವುದರಲ್ಲಿ ಎಐ ಪರಿಣಾಮಕಾರಿ ಸಾಧನ. ತಂತ್ರಜ್ಞಾನ ಈಗ ಕೇವಲ ಒಂದು ಪ್ರತ್ಯೇಕ ವಿಭಾಗವಾಗಿ ಉಳಿದಿಲ್ಲ. ಅದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಕೃತಕಬುದ್ದಿಮತ್ತೆ ಬಗ್ಗೆ ತಿಳಿವಳಿಕೆ ಇರುವ ಪರಿಣತ, ಎಐ ಗೊತ್ತಿಲ್ಲದವನ ಸ್ಥಾನ ಕಸಿಯುತ್ತಾನೆ. ನಾವು ಏನು ಕಲಿತಿದ್ದೇವೆ ಎಂಬುದಕ್ಕಿಂತ ಹೇಗೆ ಕಲಿತಿದ್ದೇವೆ ಎಂಬುದು ಮುಖ್ಯ’ ಎಂದು ವಿಶ್ಲೇಷಿಸಿದರು.

ಮೌಲ್ಯಗಳಿಲ್ಲದ ಬುದ್ಧಿವಂತಿಕೆ ಹೇಗೆ ನಿರರ್ಥಕ ಎಂಬುದಕ್ಕೆ ಅವರು ಭಸ್ಮಾಸುರನ ಕತೆಯನ್ನು ಉದಾಹರಣೆ ನೀಡಿದರು. ಎಐ ಕೂಡ ಮಾನವಕುಲಕ್ಕೆ ಭಸ್ಮಾಸುರ ವರ ನೀಡುತ್ತಿದೆ. ಎಐ ಬಳಸಿ ಕ್ಷಣಾರ್ಧದಲ್ಲಿ ಏನು ಬೇಕಾದರೂ ಮಾಡಬಹುದು. ಆದರೆ, ಆ ಶಕ್ತಿಯನ್ನು ಸರಿಯಾದ ದಾರಿಯಲ್ಲಿ ಮುನ್ನಡೆಸಲು ಜಾಗೃತ ಹೃದಯ ಇರಬೇಕು. ಬುದ್ಧಿವಂತಿಕೆಯು ಅಲ್ಗಾರಿದಮ್ ಅನ್ನು ಹೇಗೆ ನಿರ್ಮಿಸಬೇಕು ಎಂದು ಹೇಳಿಕೊಡುತ್ತದೆ. ಆದರೆ, ಮೌಲ್ಯಗಳು ಅದನ್ನು ಬಳಸಬೇಕೇ ಬೇಡವೇ ಎಂಬುದನ್ನು ನಿರ್ಧರಿಸುತ್ತದೆ ಎಂದು ಹೇಳಿದರು.

ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಂ.ವೆಂಕಟೇಶ್ವರಲು, ಕುಲಸಚಿವ (ಮೌಲ್ಯಮಾಪನ) ಪ್ರೊ. ಮೋಹನ ಎಚ್.ಎಸ್., ಕುಲಸಚಿವೆ ನಾಹಿದಾ ಜಮ್ ಜಮ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260604-17-81279554

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.