ತುರುವೇಕೆರೆ: ತಾಲ್ಲೂಕು ಒಳ ಮೀಸಲಾತಿ ಹೋರಾಟ ಸಮಿತಿ, ಮಾದಾರ ಮಹಾಸಭಾ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಿಂದ ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಂ ಜಯಂತಿ ಅಂಗವಾಗಿ ಆರೋಗ್ಯ ಶಿಬಿರ ನಡೆಯಿತು.

ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸರ್ಕಾರದ ನಿಲುವು ಖಂಡಿಸಿ ತಮಟೆ ಬಾರಿಸುವ ಮೂಲಕ ಸರ್ಕಾರ ಒಳಮೀಸಲಾತಿ ಜಾರಿಗೆ ಮೀನಾಮೇಷ ಎಣಿಸುತ್ತಿದೆ ಎಂದು ಆರೋಪಿಸಿದರು.

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕೃಷ್ಣಮೂರ್ತಿ ಬಿಳಿಗೆರೆ ಮಾತನಾಡಿ, ಅಂಬೇಡ್ಕರ್ ಜಗತ್ತೇ ಪೂಜಿಸುವ ವ್ಯಕ್ತಿಯಾಗಿದ್ದಾರೆ. ಪ್ರಪಂಚವೇ ಅಂಬೇಡ್ಕರ್ ಅವರನ್ನು ಪೂಜಿಸುತ್ತಿದ್ದರೂ, ಅವರು ಜೀವಂತವಿದ್ದ ಕಾಲದಲ್ಲಿ ಅವರನ್ನು ಸ್ಪೃಶ್ಯ ಸಮಾಜ ದೇಶದ್ರೋಹಿಯಂತೆ ಕಾಣುತ್ತಿತ್ತು ಎಂದು ಬೇಸರ ವ್ಯಕ್ತಪಡಿಸಿದರು.

ಅಂಬೇಡ್ಕರ್ ಮಹಾನ್ ಮಾನವತಾವಾದಿ. ಎಲ್ಲರನ್ನೂ ಸಮಾನವಾಗಿ ನೋಡಬೇಕೆಂದು ಪ್ರತಿಪಾದಿಸಿದವರು. ಸಮ ಸಮಾಜದ ನಿರ್ಮಾಣದ ಕನಸು ಹೊತ್ತಿದ್ದರು. ಶಿಕ್ಷಣ ಮತ್ತು ಆರೋಗ್ಯಕ್ಕೆ ಒತ್ತು ನೀಡಿ ಎಂದು ಅಲವತ್ತುಕೊಂಡಿದ್ದವರು ಅಂಬೇಡ್ಕರ್. ಅವರು ಸಾವಿರ ವರ್ಷಗಳಿಗೆ ಆಗುವಷ್ಟು ಯೋಜನೆ ರೂಪಿಸಿದ್ದರು ಎಂದರು.

ಮಾಜಿ ಶಾಸಕ ಮಸಾಲಾ ಜಯರಾಂ ಮಾತನಾಡಿ, ರಾಜ್ಯ ಸರ್ಕಾರ ದಲಿತರ ನಡುವೆ ಹೊಡೆದಾಡುವ ನೀತಿ ಅನುಸರಿಸುತ್ತಿದೆ. ಅಂಬೇಡ್ಕರ್ ಅವರ ಕನಸಾಗಿದ್ದ ಸಮಾನತೆಯ ಮನೋಭಾವಕ್ಕೆ ಈ ಸರ್ಕಾರ ಕಿಂಚಿತ್ತೂ ಬೆಲೆ ನೀಡುತ್ತಿಲ್ಲ. ಅವರು ಶಾಸಕರಾಗಿದ್ದ ವೇಳೆಯಲ್ಲೂ ಎಲ್ಲರನ್ನೂ ಒಂದೆಡೆ ಸೇರಿಸಿ ನ್ಯಾಯ ಸಮ್ಮತವಾದ ನಿರ್ಧಾರ ಕೈಗೊಳ್ಳಿ ಎಂದು ಹೇಳಿದರೂ ದುರಾವರ್ತನೆಯಿಂದ ಈ ಸರ್ಕಾರ ವರ್ತಿಸುತ್ತಿದೆ ಎಂದು ದೂರಿದರು.

ಶಾಸಕ ಎಂ.ಟಿ.ಕೃಷ್ಣಪ್ಪ, ಮಾಜಿ ಶಾಸಕ ಎಚ್.ಬಿ.ನಂಜೇಗೌಡ, ನರಸಿಂಹಮೂರ್ತಿ, ವಿ.ಟಿ.ವೆಂಕಟರಾಮಯ್ಯ, ದಂಡಿನಶಿವರ ಕುಮಾರ್, ಮಲ್ಲೂರು ತಿಮ್ಮೇಶ್, ಲಕ್ಷ್ಮೀಶ್. ಡಾ.ಮುರುಳೀಧರ್, ಡಾ.ಚಂದ್ರಯ್ಯ, ಗುರುದತ್, ಮಂಜಣ್ಣ, ಚಿದಾನಂದ್, ಸುಬ್ರಮಣಿ ಶ್ರೀಕಂಠೇಗೌಡ, ವಸಂತಕುಮಾರ್, ಹಾವಾಳ ಶಿವಕುಮಾರ್, ಶೌಕತ್, ಎಸ್. ಎಂ. ಕುಮಾರಸ್ವಾಮಿ, ಮುನಿಯೂರು ಮಂಜು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260415-17-820439781

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.