ತುಮಕೂರು: ಸ್ವಾತಂತ್ರ್ಯ ಪೂರ್ವ, ನಂತರದ ದಿನಗಳಲ್ಲಿ ಅನೇಕ ಮಹನೀಯರು ದೇಶಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ದೇಶ ಸೇವೆ ಮಾಡಿದ ಹಲವರಿಗೆ ರಾಜಕೀಯ ಸ್ಥಾನಮಾನ ಸಿಕ್ಕಿಲ್ಲ. ಅವರಲ್ಲಿ ಅಂಬೇಡ್ಕರ್ ಸಹ ಒಬ್ಬರು ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೇಳಿದರು.

ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಎಸ್.ಸಿ ಮೋರ್ಚಾದಿಂದ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಂಬೇಡ್ಕರ್ ಶಿಕ್ಷಣದ ಮೂಲಕ ಉನ್ನತ ಸ್ಥಾನಕ್ಕೆ ಬೆಳೆದವರು. ಶಿಕ್ಷಣದಿಂದ ಎತ್ತರಕ್ಕೆ ಬೆಳೆಯಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಜಾತಿ ತಾರತಮ್ಯ ಮೀರಿ ಶಿಕ್ಷಣದಿಂದ ಉನ್ನತ ಸ್ಥಾನ ಪಡೆಯಲು ಸಾಧ್ಯ ಎಂದು ತೋರಿಸಿಕೊಟ್ಟು ಶಿಕ್ಷಣದ ಮಹತ್ವ ಸಾರಿದ್ದಾರೆ ಎಂದು ತಿಳಿಸಿದರು.

ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಸ್.ರವಿಶಂಕರ್, ‘ಅಂಬೇಡ್ಕರ್ ಸಂವಿಧಾನ ಶಿಲ್ಪಿ ಜತೆಗೆ ಸಾಮಾಜಿಕ ಸಾಮರಸ್ಯದ ಪ್ರವರ್ತಕರಾಗಿದ್ದರು. ಅವರಿಗೆ ಇಡೀ ರಾಷ್ಟ್ರ ಋಣಿಯಾಗಿದೆ’ ಎಂದರು.

ಜಿಲ್ಲಾ ಉಪಾಧ್ಯಕ್ಷ ವೈ.ಎಚ್.ಹುಚ್ಚಯ್ಯ, ‘ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಗೌರವಯುತವಾದ ಬದುಕು ಕಟ್ಟಿಕೊಳ್ಳಲು ಅಂಬೇಡ್ಕರ್ ರಚಿಸಿದ ಸಂವಿಧಾನ ನೆರವಾಗಿದೆ’ ಎಂದು ಅಭಿಪ್ರಾಯಪಟ್ಟರು.

ಪ್ರಮುಖರಾದ ವಿನಯ್ ಬಿದರೆ, ಸಾಗರನಹಳ್ಳಿ ವಿಜಯಕುಮಾರ್, ಗಂಗರಾಜು, ಟಿ.ಕೆ.ಧನುಷ್, ನವಚೇತನ್, ಸುಮಿತ್ರಮ್ಮ, ಸಿದ್ದರಾಮಣ್ಣ, ಮುಖಂಡರಾದ ಡಾ.ಎಂ.ಆರ್.ಹುಲಿನಾಯ್ಕರ್, ಅಂಜನಮೂರ್ತಿ, ಹನುಮಂತರಾಯಪ್ಪ, ಟಿ.ಎಚ್.ಹನುಮಂತರಾಜು, ಟಿ.ಆರ್.ಸದಾಶಿವಯ್ಯ, ಜ್ಯೋತಿ ತಿಪ್ಪೇಸ್ವಾಮಿ, ಗಂಗಾಧರ್, ಸತ್ಯಮಂಗಲ ಜಗದೀಶ್, ಮಂಜುನಾಥ್, ಮಾರುತೇಶ್, ಮಧುವನಿತಾ, ನಾಗರಾಜು, ವಿರೂಪಾಕ್ಷಪ್ಪ, ಪ್ರತಾಪ್, ಮಂಜುಳಾ, ರೇಖಾ, ಅರುಣ್, ಪ್ರೀತಂ ಜೈನ್, ಗಣೇಶ್ಪ್ರಸಾದ್, ಬಂಬೂ ಮೋಹನ್, ಆಟೊ ಯಡಿಯೂರಪ್ಪ, ವೆಂಕಟೇಶಾಚಾರ್, ಗಂಗೇಶ್, ಕಿರ್ಲೋಸ್ಕರ್ ಕುಮಾರ್, ಸಿದ್ಧೇಶ್, ಗಿರೀಶ್ ಪಾಲ್ಗೊಂಡರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260415-17-1509140782

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.