ತುಮಕೂರು: ಜನರನ್ನು ವಿಭಜಿಸುವ, ದ್ವೇಷ–ಹಿಂಸೆಯ ದಾರಿ ಹಿಡಿಸುವ ವ್ಯಕ್ತಿಗಳ ಜತೆಗೆ ಹೋಗದೆ, ಎಚ್ಚರಿಕೆ ವಹಿಸಬೇಕು ಎಂದು ಪಿಯುಸಿಎಲ್ ಅಧ್ಯಕ್ಷ ಕೆ.ದೊರೈರಾಜ್ ಸಲಹೆ ಮಾಡಿದರು.

ನಗರದಲ್ಲಿ ಮಂಗಳವಾರ ಒಳ ಮೀಸಲಾತಿ ಹೋರಾಟ ಸಮಿತಿ, ಸಿಐಟಿಯು, ಪೌರ ಕಾರ್ಮಿಕರು, ಮುನಿಸಿಪಲ್ ಕಾರ್ಮಿಕರ ಸಂಘ, ಸ್ಲಂ ಸಮಿತಿ, ಮಾದರ ಮಹಾಸಭಾದಿಂದ ಆಯೋಜಿಸಿದ್ದ ಬಿ.ಆರ್.ಅಂಬೇಡ್ಕರ್, ಬಾಬು ಜಗಜೀವನ್ ರಾಮ್ ಜಯಂತಿಯಲ್ಲಿ ಮಾತನಾಡಿದರು.

ಬಡವರು, ದುಡಿಯುವ ಜನರು, ಎಲ್ಲ ಶೋಷಿತ ಜಾತಿಗಳನ್ನು ಒಂದು ಮಾಡುವವರನ್ನು ಬೆಂಬಲಿಸಬೇಕು. ಸಮಾಜದಲ್ಲಿ ಎದುರಾಗುವ ಸವಾಲುಗಳಿಗೆ ಹೆದರದೆ ಬದ್ಧತೆಯಿಂದ ಮುಂದೆ ಸಾಗಬೇಕು. ಅದು ನಮ್ಮ ಯಶಸ್ಸಿಗೆ ಕಾರಣವಾಗುತ್ತದೆ. ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಅಂಬೇಡ್ಕರ್ ಜಯಂತಿ ಪ್ರತಿ ಮನೆಯ ಹಬ್ಬವಾಗಬೇಕು ಎಂದು ಆಶಿಸಿದರು.

ಡಿಡಿಪಿಯು ಬಾಲಗುರುಮೂರ್ತಿ, ‘ಜಾತಿ ಕಾಣದ ಕ್ಯಾನ್ಸರ್ ರೀತಿ ಮನಸ್ಸಿಗೆ ಅಂಟಿದೆ. ಪ್ರತಿ ಜಾತಿಯೂ ಗಟ್ಟಿಯಾಗುತ್ತಿದೆ. ಅಂಬೇಡ್ಕರ್ ಹಚ್ಚಿದ ಅರಿವು ವಾರಸುದಾರರನ್ನು ಸೃಷ್ಟಿಸಿತು, ಚಳವಳಿಗಳು ಬೆಳೆದವು. ಸಾಮಾಜಿಕ ನ್ಯಾಯ ಸಿಗಲಾರಂಭಿಸಿತು. ಒಂದು ವಿಭಾಗ ವಾರಸುದಾರರಾದರೆ, ಇನ್ನೊಂದು ವಿಭಾಗ ತನ್ನ ಲಾಭಕ್ಕೆ ಮಾತ್ರ ಮುಂದಾಗಿದೆ. ಇದರಿಂದ ಚಳವಳಿಗಳು ಸೊರಗಿವೆ’ ಎಂದು ವಿಷಾದಿಸಿದರು.

ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಸೈಯದ್ ಮುಜೀಬ್, ‘ಎಲ್ಲರು ಅಂಬೇಡ್ಕರ್ ವಿಚಾರಧಾರೆ ಅರಿಯಬೇಕು. ಪ್ರಸ್ತುತ ಪ್ರಜಾಪ್ರಭುತ್ವ, ಬಹುತ್ವ, ಸಮಾನತೆಗೆ ತದ್ವಿರುದ್ಧವಾದ ಜೀವ ವಿರೋಧಿ ಆಲೋಚನೆಯ ವಿಷ ಹರಡಲಾಗುತ್ತಿದೆ. ಇದು ಅಂಬೇಡ್ಕರ್ ಆಲೋಚನೆಗೆ ತದ್ವಿರುದ್ಧ’ ಎಂದು ಹೇಳಿದರು.

ಮುಖಂಡರಾದ ಕೆಂಚಮಾರಯ್ಯ, ವೈ.ಎಚ್.ಹುಚ್ಚಯ್ಯ, ಎ.ನರಸಿಂಹಮೂರ್ತಿ, ಅನುಪಮಾ, ಎನ್.ಕೆ.ಸುಬ್ರಮಣ್ಯ, ಕೊಟ್ಟ ಶಂಕರ್, ವೈ.ಕೆ.ಬಾಲಕೃಷ್ಣಪ್ಪ, ಮಂಜುನಾಥ್, ಸುಜಿತ್ ನಾಯಕ್, ಅರುಣ್, ತಿರುಮಲಯ್ಯ, ದೇವರಾಜು, ಮಾರುತಿ, ಪ್ರಕಾಶ್, ಕುಮಾರ್, ನಾಗಾರ್ಜುನ, ಶಿವನಂಜಯ್ಯ, ಅಂಜನಮೂರ್ತಿ, ಕೆ.ನರಸಿಂಹರಾಜು, ಸಿ.ವೆಂಕಟೇಶ್ ಇತರರು ಉಪಸ್ಥಿತರಿದ್ದರು.

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ಪೌರ ಕಾರ್ಮಿಕರ ಮಕ್ಕಳನ್ನು ಸನ್ಮಾನಿಸಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260415-17-1606572157

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.