ತುಮಕೂರು: ಬದುಕಿನಲ್ಲಿ ಬಸವ ಪ್ರಜ್ಞೆ ಅಳವಡಿಸಿಕೊಂಡರೆ ಜಯಂತಿ ಸಾರ್ಥಕವಾಗುತ್ತದೆ. ಇಲ್ಲದಿದ್ದರೆ ಕೇವಲ ಸಮಾರಂಭವಾಗಲಿದೆ ಎಂದು ಸಿದ್ಧಗಂಗಾ ಮಠದ ಶಿವಸಿದ್ಧೇಶ್ವರ ಸ್ವಾಮೀಜಿ ಹೇಳಿದರು.

ನಗರದಲ್ಲಿ ಭಾನುವಾರ ರಾತ್ರಿ ನಗರ ವೀರಶೈವ ಸಮಾಜ ಸೇವಾ ಸಮಿತಿಯಿಂದ ರೇಣುಕಾಚಾರ್ಯ, ಬಸವೇಶ್ವರ ಮತ್ತು ಸಿದ್ಧರಾಮೇಶ್ವರ ಜಯಂತಿ ಅಂಗವಾಗಿ ಏರ್ಪಡಿಸಿದ್ದ ವೀರಶೈವ ಧರ್ಮ ಸಮ್ಮೇಳನದಲ್ಲಿ ಮಾತನಾಡಿದರು.

ಬಸವಣ್ಣ ವ್ಯಕ್ತಿಯಲ್ಲ, ಅವರೊಂದು ಶಕ್ತಿ, ತತ್ವ. ಅವರನ್ನು ಪವಾಡ ಪುರುಷ ಎಂದು ಕರೆಯುತ್ತೇವೆ. ಆದರೆ ಅವರು ಪವಾಡ ಪುರುಷರಲ್ಲ, ಪರಿಸ್ಥಿತಿಯಿಂದ ರೂಪುಗೊಂಡವರು. ತಾವು ಬೆಳೆದ ಪರಿಸರದಲ್ಲಿದ್ದ ಅಸಹಜ ನಡವಳಿಕೆ, ಸಂಪ್ರದಾಯದ ಬಗ್ಗೆ ಜಿಜ್ಞಾಸೆ ಉಂಟಾಗಿ, ಅದರ ಹಿಂದಿನ ತಾತ್ವಿಕತೆ ಹುಡುಕಲು ಮುಂದಾದರು. ಅವರ ತತ್ವ, ಆದರ್ಶ, ಚಿಂತನೆಗಳನ್ನು ನಾವೆಲ್ಲ ತಿಳಿದುಕೊಳ್ಳಬೇಕು ಎಂದು ಸಲಹೆ ಮಾಡಿದರು.

ನಿವೃತ್ತ ಅಧಿಕಾರಿ ಸಿ.ಸೋಮಶೇಖರ್, ‘ವಿಶ್ವವೇ ನನ್ನ ಕುಟುಂಬ, ಮಾನವ ಜನಾಂಗವೇ ನನ್ನ ಸಹೋದರರು ಎಂಬುವುದು ಧರ್ಮದ ಉದ್ದೇಶ, ಸಂದೇಶ. ಹೃದಯಗಳನ್ನು ಬೆಸೆಯುವುದು, ಭಾವನೆಗಳಿಗೆ ಧಕ್ಕೆ ಮಾಡದೆ ಸನ್ಮಾರ್ಗದಲ್ಲಿ ನಡೆಸುವುದು ಧರ್ಮ’ ಎಂದು ಅಭಿಪ್ರಾಯಪಟ್ಟರು.

ಶಾಸಕ ಜಿ.ಬಿ.ಜ್ಯೋತಿಗಣೇಶ್, ಶಿಕ್ಷಣ ತಜ್ಞ ಚನ್ನಪ್ಪ ಬಾರಿಗಿಡದ, ನಗರ ವೀರಶೈವ ಸಮಾಜ ಸೇವಾ ಸಮಿತಿ ಅಧ್ಯಕ್ಷ ಕೆ.ಎಸ್.ಮಂಜುನಾಥ ಕೋರಿ, ಉಪಾಧ್ಯಕ್ಷ ಟಿ.ಸಿ.ಹರೀಶ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ, ಮುಖಂಡರಾದ ಜಿ.ಕೆ.ಸ್ವಾಮಿ, ಟಿ.ಕೆ.ನಂಜುಂಡಪ್ಪ, ಡಾ.ಕೆ.ಎಸ್.ಪರಮೇಶ್, ಕೆ.ಜೆ.ರುದ್ರಪ್ಪ, ಬಾವಿಕಟ್ಟೆ ಮಂಜುನಾಥ್, ಕೆ.ವೈ.ಸಿದ್ಧಲಿಂಗಮೂರ್ತಿ, ಟಿ.ಸಿ.ಓಹಿಲೇಶ್ವರ್, ಸಿದ್ದಗಂಗಯ್ಯ ಸಿದ್ದರಾಮಣ್ಣ, ಟಿ.ಬಿ.ಹರೀಶ್ ಇತರರು ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260421-17-1438530912

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.