ತಿಪಟೂರು: ತಾಲ್ಲೂಕಿನ ಪರುವಗೊಂಡನಹಳ್ಳಿಯಲ್ಲಿ ಬಿದರೆಗುಡಿ ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರದಿಂದ ದತ್ತು ಗ್ರಾಮದ ಯೋಜನೆಯಡಿ ವಿಶ್ವ ಜೇನು ನೊಣ ದಿನಾಚರಣೆ ಅಂಗವಾಗಿ ಸುಸ್ಥಿರ ಆದಾಯಕ್ಕಾಗಿ ಜೇನು ಕೃಷಿ ಕಾರ್ಯಾಗಾರ ನಡೆಯಿತು.

ಕೆವಿಕೆ ಮುಖ್ಯಸ್ಥ ಶಂಕರ ಎಂ.ಎಚ್. ಮಾತನಾಡಿ, ರೈತರು ಜೇನು ಸಾಕಣೆಯನ್ನು ಉಪಕಸುಬಾಗಿ ಅಳವಡಿಸಿಕೊಂಡಲ್ಲಿ ಕಡಿಮೆ ವೆಚ್ಚದಲ್ಲಿ ಉತ್ತಮ ಆದಾಯ ಗಳಿಸಬಹುದು. ಜೇನು ನೊಣಗಳು ಪರಾಗಸ್ಪರ್ಶ ಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುವುದರಿಂದ ಕೃಷಿ ಉತ್ಪಾದನೆ ಹೆಚ್ಚಿಸಲು ಸಹಕಾರಿ ಎಂದು ಹೇಳಿದರು.

ಕಾರ್ಯಾಗಾರದಲ್ಲಿ ಜೇನು ಸಾಕಣೆ ಮಹತ್ವ, ಜೇನು ನೊಣಗಳ ನಿರ್ವಹಣೆ, ಜೇನು ಉತ್ಪಾದನೆ, ಮೌಲ್ಯವರ್ದನೆ ಹಾಗೂ ಮಾರುಕಟ್ಟೆ ಅವಕಾಶಗಳ ಕುರಿತು ತಿಳಿಸಲಾಯಿತು. ವೈಜ್ಞಾನಿಕ ರೀತಿಯಲ್ಲಿ ಜೇನು ಸಾಕಣೆ ಕೈಗೊಳ್ಳುವ ಕುರಿತು ಪ್ರಾಯೋಗಿಕ ಸಲಹೆಗಳನ್ನು ಒದಗಿಸಲಾಯಿತು.

ಕೇಂದ್ರದ ವಿಜ್ಞಾನಿ ತಸ್ಮಿಯಾಕೌಸರ್ ಮಾತನಾಡಿ, ಜಿಲ್ಲೆಯಾದ್ಯಂತ ಮೇ 20ರಿಂದ 24ರ ವರೆಗೆ ತುಂತುರು ಮಳೆಯಾಗುವ ಸಂಭವವಿದ್ದು ರೈತರು ಬೆಳೆ ಮತ್ತು ಜಾನುವಾರುಗಳಿಗೆ ಸುರಕ್ಷಿತ ಕ್ರಮ ಅನುಸರಿಸಬೇಕಿದೆ. ಶಿಫಾರಸು ಮಾಡಿರುವ ಪ್ರಮಾಣದಷ್ಟು ಗೊಬ್ಬರವನ್ನು ಬಳಸಿ ಉತ್ತಮ ಬೆಳೆ ಪಡೆಯಿರಿ ಎಂದು ತಿಳಿಸಿದರು.

ಕೇಂದ್ರದ ತೋಟಗಾರಿಕ ವಿಜ್ಞಾನಿ ಕೀರ್ತಿಶಂಕರ್ ಕೆ ಮಾತನಾಡಿ, ತೆಂಗು, ಅಡಿಕೆ ಬೆಳೆಗಳಲ್ಲಿ ಬಾಳೆಯನ್ನು ಅಂತರ ಬೆಳೆಯಾಗಿ ಬೆಳೆಯುವುದರಿಂದ ಅಧಿಕ ಲಾಭ ಪಡೆಯಬಹುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಗಾನವಿ, ಮೌಲ್ಯ, ರೇಣುಕಮೂರ್ತಿ, ಶಂಕರಪ್ಪ, ಧನಂಜಯ್ ಸೇರಿದಂತೆ 50ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-17-1941837155

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.