ತುಮಕೂರು: ಬೆಂಗಳೂರಿನಿಂದ ತುಮಕೂರಿಗೆ ಮೆಟ್ರೊ ವಿಸ್ತರಿಸುವ ಯೋಜನೆ ರೋಗಗ್ರಸ್ತ ಯೋಜನೆಯಾಗಿ ₹25 ಕೋಟಿ ವಸೂಲಾಗದ ಸಾಲದ ಪಟ್ಟಿಗೆ ಸೇರಬಹುದು. ಈ ಬಗ್ಗೆ ನಾಗರಿಕರು ಧ್ವನಿ ಎತ್ತಬೇಕು ಎಂದು ಜನ ಸಂಗ್ರಾಮ ಪರಿಷತ್ ಅಧ್ಯಕ್ಷ ಎನ್.ಎಸ್.ಪಂಡಿತ್ ಜವಾಹರ್ ಮನವಿ ಮಾಡಿದ್ದಾರೆ.

ಮೆಟ್ರೊ ವಿಸ್ತರಣೆಗೆ ಸರ್ಕಾರದಿಂದ ₹25 ಸಾವಿರ ಕೋಟಿ ವ್ಯಯಿಸಲಾಗುತ್ತಿದೆ. 40 ನಿಲ್ದಾಣಗಳು ನಿರ್ಮಾಣವಾಗಲಿವೆ. ನಗರದಿಂದ ಮೆಟ್ರೊ ಮೂಲಕ ಬೆಂಗಳೂರು ತಲುಪಲು ಕನಿಷ್ಠ 2 ಗಂಟೆ ಸಮಯ ಆಗುತ್ತದೆ. ಸುಮಾರು ₹250 ರಿಂದ ₹300 ದರ ನಿಗದಿ ಪಡಿಸಬಹುದು. ಶೇ 70 ರಷ್ಟು ಪ್ರಯಾಣಿಕರು ಆಸನಗಳು ಇಲ್ಲದೆ ನಿಂತುಕೊಂಡೆ ಹೋಗಬೇಕಾಗುತ್ತದೆ. ಶೌಚಾಲಯದ ವ್ಯವಸ್ಥೆಯೂ ಇರುವುದಿಲ್ಲ. ಇದರಿಂದ ಪ್ರಯಾಣಿಕರು ತೊಂದರೆ ಅನುಭವಿಸಬೇಕಾಗುತ್ತದೆ ಎಂದಿದ್ದಾರೆ. ಮೆಟ್ರೊ ಬದಲಿಗೆ ರೈಲು ಪ್ರಯಾಣ ಉತ್ತಮ. ಕೇವಲ ₹20 ಕೊಟ್ಟು ಮೆಮು ರೈಲಿನಲ್ಲಿ ಒಂದೂವರೆ ಗಂಟೆಯಲ್ಲಿ ಬೆಂಗಳೂರಿಗೆ ಹೋಗಬಹುದು ಎಂದು ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-17-1979376886

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.