ತುಮಕೂರು: ನಗರ ಹೃದಯ ಭಾಗದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 206ರಲ್ಲಿ (ಬಿ.ಎಚ್.ರಸ್ತೆ) ವೈಟ್ ಟಾಪಿಂಗ್ ಕಾಮಗಾರಿ ಗುರುವಾರ ಆರಂಭವಾಗಿದೆ.

ನಗರದ ಬಟವಾಡಿಯಿಂದ ಮಲ್ಲಸಂದ್ರದ ವರೆಗಿನ 12 ಕಿ.ಮೀ ರಸ್ತೆಯನ್ನು ವೈಟ್ ಟಾಪಿಂಗ್ ಮಾಡಲು ಉದ್ದೇಶಿಸಲಾಗಿದೆ. ಹೆಗ್ಗೆರೆ– ಮಲ್ಲಸಂದ್ರ ನಡುವೆ ದ್ವಿಪಥವನ್ನು ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಮೊದಲ ಹಂತದಲ್ಲಿ ಹೆಗ್ಗೆರೆ ಭಾಗದಲ್ಲಿ ಕಾಮಗಾರಿ ಆರಂಭವಾಗಿದ್ದು, ಈಗ ನಗರದ ಬಿ.ಎಚ್.ರಸ್ತೆಯ ಭದ್ರಮ್ಮ ವೃತ್ತದಿಂದ ಎಸ್.ಎಸ್.ವೃತ್ತದ ವರೆಗೆ ಕೆಲಸ ಪ್ರಾರಂಭಿಸಲಾಗಿದೆ.

ಕಾಮಗಾರಿಗೆ ಕಳೆದ ಜನವರಿ ಕೊನೆ ಭಾಗದಲ್ಲಿ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಚಾಲನೆ ನೀಡಿದ್ದರು. ಮಂದಗತಿಯಲ್ಲಿ ಸಾಗುತ್ತಿದ್ದ ಕೆಲಸ ಈಗ ಚುರುಕು ಪಡೆದುಕೊಂಡಿದ್ದು, ನಗರದಲ್ಲಿ ಹಾದುಹೋಗಿರುವ ಬಿ.ಎಚ್.ರಸ್ತೆಗೂ ಕಾಲಿಟ್ಟಿದೆ.

ಆರಂಭದಲ್ಲಿ ಎಸ್.ಎಸ್.ವೃತ್ತದಿಂದ ಜೈನ್ ಭವನದ ವರೆಗೂ ಒಂದು ಭಾಗದಲ್ಲಿ ರಸ್ತೆ ಬಂದ್ ಮಾಡಿಕೆಲಸ ಮಾಡಲಾಯಿತು. ಶುಕ್ರವಾರದಿಂದ ಕಾಮಗಾರಿ ಮತ್ತಷ್ಟು ಚುರುಕು ಪಡೆದುಕೊಳ್ಳಲಿದೆ. ಬಿ.ಎಚ್.ರಸ್ತೆಯಲ್ಲಿ ಬಟವಾಡಿಯಿಂದ ಗುಬ್ಬಿ ಗೇಟ್ರಿಂಗ್ ರಸ್ತೆವರೆಗೆ ವೈಟ್ ಟಾಪಿಂಗ್ ಕಾಮಗಾರಿ ಪೂರ್ಣಗೊಳಿಸಲು ಕನಿಷ್ಠ ನಾಲ್ಕೈದು ತಿಂಗಳು ತೆಗೆದುಕೊಳ್ಳಲಿದೆ. ಅಲ್ಲಿಯವರೆಗೂ ನಗರದಲ್ಲಿ ವಾಹನ ಸಂಚಾರ ದುಸ್ತರವಾಗಲಿದೆ. ಮೊದಲಿಗೆ ರಸ್ತೆಯ ಒಂದು ಭಾಗದಲ್ಲಿ ಕಾಮಗಾರಿ ಪೂರ್ಣಗೊಳಿಸಿ, ಮತ್ತೊಂದು ಭಾಗದಲ್ಲಿ ಕಾಮಗಾರಿ ಆರಂಭಿಸಲಾಗುತ್ತದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260501-17-341263388

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.