ತುಮಕೂರು: ‘ಜಗತ್ತಿಗೆ ಶಾಂತಿ ಸಾರಿದ ಬುದ್ಧನನ್ನು ಭಾರತದಿಂದ ಓಡಿಸಿದ್ದೇವೆ ಎಂದು ಕೆಲ ಕುತಂತ್ರಿಗಳು ಭ್ರಮೆಯಲ್ಲಿದ್ದಾರೆ. ಬುದ್ಧ ರಾಷ್ಟ್ರ ಬಿಟ್ಟು ಹೋಗುವುದಿಲ್ಲ. ನಮ್ಮ ಜನರ ನಾಡಿಯಲ್ಲಿದ್ದಾರೆ‘ ಎಂದು ಬಿಎಂಟಿಸಿ ಉಪಾಧ್ಯಕ್ಷ ನಿಕೇತ್ರಾಜ್ ಮೌರ್ಯ ಹೇಳಿದರು.

ನಗರದಲ್ಲಿ ಶುಕ್ರವಾರ ಜಿಲ್ಲಾ ಆಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಯೋಜಿಸಿದ್ದ ಬುದ್ಧ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬುದ್ಧ ದೇಶದ ತ್ರಿವರ್ಣ ಧ್ವಜದಲ್ಲಿ ದಮ್ಮ ಚಕ್ರವಾಗಿ ನಿಂತಿದ್ದಾರೆ. ಜಗತ್ತಿನ ಎಲ್ಲೆಡೆ ಬುದ್ಧನ ಆದರ್ಶಗಳು, ಅನುಯಾಯಿಗಳು ಹರಡಿದ್ದಾರೆ. ಭಾರತದ ಹೃದಯ, ಅವರನ್ನು ಸುಲಭವಾಗಿ ಓಡಿಸಲು ಸಾಧ್ಯವಿಲ್ಲ. ಬುದ್ಧ ನಮಗೆ ಬೆಳಕಾಗಬೇಕು. ಅವರ ಆದರ್ಶಗಳು ಎಂದಿಗೂ ಶಾಶ್ವತ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ, ‘ಬುದ್ಧ ಎಂದರೆ ಎಚ್ಚರ ಎಂದರ್ಥ. ಬುದ್ಧ ಅವತರಿಸುವ ಮುನ್ನವೇ ಭೂಮಿ ಮೇಲೆ ನಾಗರಿಕತೆ ಇತ್ತು. ಅವರು ಹುಟ್ಟಿದ ಮೇಲೆ ಮನುಷ್ಯತ್ವ ಬೆಳೆಯಿತು. ಪ್ರೀತಿ, ಅಂತಃಕರಣ ನೆಲೆಯೂರಿತು’ ಎಂದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್, ತಹಶೀಲ್ದಾರ್ ಪಿ.ಎಸ್.ರಾಜೇಶ್ವರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಈಶ್ವರ ಕು.ಮಿರ್ಜಿ, ಉಪನ್ಯಾಸಕರಾದ ನರಸಿಂಹಯ್ಯ, ಶ್ರೀನಿವಾಸ್ ಇತರರು ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260502-17-2139575422

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.