ತುಮಕೂರು: ನಗರದ ಸಪ್ತಗಿರಿ ಬಡಾವಣೆಯಲ್ಲಿರುವ ಗಾರೆನರಸಯ್ಯನ ಕಟ್ಟೆ ಬಫರ್ ವಲಯದಲ್ಲಿ ಕಟ್ಟಡ ನಿರ್ಮಾಣ ಮತ್ತೆ ಪ್ರಾರಂಭವಾಗಿದ್ದು, ತಕ್ಷಣ ಸ್ಥಗಿತಗೊಳಿಸಲು ಕ್ರಮ ತೆಗೆದುಕೊಳ್ಳುವಂತೆ ವನ್ಯಜೀವಿ ಜಾಗೃತಿ ನಿಸರ್ಗ ಸಂಸ್ಥೆ ಅಧ್ಯಕ್ಷ ಬಿ.ವಿ.ಗುಂಡಪ್ಪ ಅವರು ಮಹಾನಗರ ಪಾಲಿಕೆ ಆಯುಕ್ತರನ್ನು ಒತ್ತಾಯಿಸಿದ್ದಾರೆ.

ಹೈಕೋರ್ಟ್ ಆದೇಶ ಹಾಗೂ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ರೂಪಿಸಿರುವ ನಿಯಮ ಪಾಲನೆಯಾಗುತ್ತಿಲ್ಲ. ಕೆರೆ, ಕಟ್ಟೆ ಅಂಗಳದಿಂದ 30 ಮೀಟರ್ ಒಳಗಿನ ಬಪರ್ ವಲಯದಲ್ಲಿ ಯಾವುದೇ ಅಭಿವೃದ್ಧಿ ಚಟುವಟಿಕೆ, ಕಟ್ಟಡ ನಿರ್ಮಾಣ ಮಾಡಲು ಅವಕಾಶವಿಲ್ಲ. ಆದರೆ ಗಾರೆನರಸಯ್ಯನ ಕಟ್ಟೆ ಬಳಿ ನಿಯಮ ಉಲ್ಲಂಘಿಸಿ ನಿರ್ಮಾಣ ಚಟುವಟಿಕೆ ನಡೆಯುತ್ತಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.

ಗಾರೆನರಸಯ್ಯನ ಕಟ್ಟೆ 19.1 ಎಕರೆ ವಿಸ್ತೀರ್ಣ ಹೊಂದಿದ್ದು, 2026 ಪೆಬ್ರುವರಿ 16ರಂದು ಬಪರ್ ವಲಯವನ್ನು ಮರು ನಿಗದಿಪಡಿಸಿದ ನಂತರ ಕೆರೆಯ ಗಡಿಯಿಂದ 12 ಮೀಟರ್ ಬಪರ್ ವಲಯದಲ್ಲಿ ಕಟ್ಟಡ ನಿರ್ಮಾಣ ಮಾಡಲು ಅವಕಾಶವಿಲ್ಲ. ಆದರೆ ಮಹಾನಗರ ಪಾಲಿಕೆಯವರು ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಾಣಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ದೂರಿದ್ದಾರೆ.

ಕಟ್ಟಡ ನಿರ್ಮಾಣ ಮಾಡುತ್ತಿರುವ ಜಾಗದ ಹಿಂಭಾಗದ ಪಾರ್ಕ್ ಜಾಗ ಸಹ ಕೆರೆ ಅಂಗಳದಲ್ಲಿದೆ. ಭೂಗಳ್ಳರಿಗೆ ಅನುಕೂಲ ಮಾಡಿಕೊಡಲು ‘ಟೂಡಾ’ದವರು ಮಾಡಿರುವ ಲೋಪ ಹಾಗೂ ಪಾಲಿಕೆ ಅಧಿಕಾರಿಗಳು ಅಕ್ರಮ ಕಟ್ಟಡ ಕಟ್ಟಲು ಭ್ರಷ್ಟಾಚಾರದಲ್ಲಿ ಪಾಲ್ಗೊಂಡಿರುವುದು ಸ್ಪಷ್ಟವಾಗಿ ಕಂಡುಬರುತ್ತಿದೆ ಎಂದು ಆರೋಪಿಸಿದ್ದಾರೆ.

ಕೆರೆಯನ್ನು 2006ರಿಂದಲೂ ಒತ್ತುವರಿ ಮಾಡಲಾಗುತ್ತಿದೆ. ನಗರದ ಘನತ್ಯಾಜ್ಯ ಸುರಿಯುವುದು, ಅಂಗಳದ ಮಣ್ಣು ಕಳ್ಳತನ ಮಾಡಿ 50-60 ಅಡಿ ಆಳದಷ್ಟು ಕಂದಕಗಳನ್ನು ನಿರ್ಮಿಸಿ ಇಡೀ ಕೆರೆಯನ್ನು ವಿಕಾರಗೊಳಿಸಿದ ಇತಿಹಾಸವಿದೆ. 2010ರಿಂದ ಕಟ್ಟೆಯ ಪೂರ್ವ ಭಾಗದ ಸರ್ಕಾರಿ ಖರಾಬು, ಕಟ್ಟೆಯ ಅಂಗಳದಲ್ಲಿ ತ್ಯಾಜ್ಯ, ಮಣ್ಣು ಸುರಿದು ಸಮತಟ್ಟು ಮಾಡುತ್ತಾ ಬರಲಾಗಿದೆ. ಕಟ್ಟೆಯ ಪೂರ್ವ ಭಾಗದಲ್ಲಿ ಭೂಗಳ್ಳರಿಗೆ ಅನುಕೂಲ ಮಾಡಿಕೊಡಲು ಚೈನ್ ಲಿಂಕ್ ಪೆನ್ಸಿಂಗ್ ಕಾಮಗಾರಿಗೆ ₹60 ಲಕ್ಷ ವೆಚ್ಚ ಮಾಡಲಾಗಿದೆ ಎಂದು ಹೇಳಿದ್ದಾರೆ.

ಕಟ್ಟೆಯ ಪೂರ್ವ ಭಾಗದ ಎರಡು ಎಕರೆ ಖರಾಬು ಜಾಗದಲ್ಲಿ (ಬಪರ್ ವಲಯ) ಬಡಾವಣೆ ನಿರ್ಮಿಸಲು ಟೂಡಾ, ಪಾಲಿಕೆ, 30ನೇ ವಾರ್ಡ್ ಸದಸ್ಯರು ನೆರವಾಗಿದ್ದಾರೆ. ಎಲ್ಲ ನಿಯಮ ಉಲ್ಲಂಘಿಸಲಾಗಿದೆ. ಕಟ್ಟೆ ಅಂಗಳದಲ್ಲಿ ನಿರ್ಮಿಸಿರುವ ಚೈನ್ಲಿಂಕ್ ಪೆನ್ಸಿಂಗ್ ತೆರವುಗೊಳಿಸಿ ಆ ಜಾಗದಲ್ಲಿ ಪಾರ್ಕ್ ನಿರ್ಮಾಣ ಮಾಡಬೇಕು. ಖರಾಬು ಜಾಗದಲ್ಲಿ ಲೇಔಟ್ಗೆ ಕೊಟ್ಟಿರುವ ಪರವಾನಗಿ ರದ್ದುಗೊಳಿಸಬೇಕು. ಬಪರ್ ವಲಯದಲ್ಲಿ ನಿರ್ಮಿಸುತ್ತಿರುವ ಕಟ್ಟಡ ಕಾಮಗಾರಿ ತಡೆಯಬೇಕು ಎಂದು ಆಗ್ರಹಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260411-17-1686726143

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.