ತುಮಕೂರು: ನಗರದ ಜನರ ದಾಹ ತಣಿಸುವ ಬುಗುಡನಹಳ್ಳಿ ಕೆರೆಗೆ ಕೊನೆಗೂ ಹೇಮಾವತಿ ನೀರು ಬಂದು ತಲುಪಿದೆ.

ಗೊರೂರು ಜಲಾಶಯದಿಂದ ಭಾನುವಾರ ರಾತ್ರಿ ನೀರು ಹರಿಯ ಬಿಟ್ಟಿದ್ದು, ಬುಧವಾರ ಬೆಳಗ್ಗೆ ಬುಗುಡನಹಳ್ಳಿ ಕೆರೆ ತಲುಪಿದೆ.

ಪ್ರಸ್ತುತ 600 ಕ್ಯೂಸೆಕ್ ಹರಿದು ಬರುತ್ತಿದ್ದು, ಇಷ್ಟೇ ಪ್ರಮಾಣದ ನೀರು ನಿರಂತರವಾಗಿ ಹರಿದು ಬಂದರೆ ಮುಂದಿನ ಒಂದು ವಾರದಲ್ಲಿ ಕೆರೆ ಭರ್ತಿಯಾಗಲಿದೆ.

ನಗರದ ಬಹುತೇಕ ಪ್ರದೇಶಗಳಿಗೆ ಬುಗುಡನಹಳ್ಳಿ ಕೆರೆಯಿಂದ ನೀರು ಪೂರೈಕೆ ಮಾಡಲಾಗುತ್ತಿದ್ದು, ಕೆರೆ ಬಹುತೇಕ ಖಾಲಿಯಾಗಿತ್ತು. ಪ್ರಸ್ತುತ 30 ಎಂಸಿಎಫ್ಟಿ ನೀರಷ್ಟೇ ಇದ್ದು, ಹತ್ತು ದಿನಗಳಿಗಷ್ಟೇ ಸಾಕಾಗುತಿತ್ತು. ಗೊರೂರು ಜಲಾಶಯದಿಂದ ನೀರು ಹರಿಸದಿದ್ದರೆ ಕೆಲವೇ ದಿನಗಳಲ್ಲಿ ನಗರದಲ್ಲಿ ಹಾಹಾಕಾರ ಎದುರಾಗಲಿತ್ತು. ಹೇಮಾವತಿ ನೀರು ಬಂದಿದ್ದರಿಂದ ಜನರು ನಿಟ್ಟುಸಿರು ಬಿಟ್ಟಿದ್ದಾರೆ.

ಕೆರೆ 363 ಎಂಸಿಎಫ್ಟಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಪೂರ್ಣ ಪ್ರಮಾಣದಲ್ಲಿ ಭರ್ತಿಯಾದರೆ ಮುಂದಿನ ದಿನಗಳಲ್ಲಿ ನಗರದ ನೀರಿನ ಬವಣೆ ತಪ್ಪಲಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-17-127082106

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.