ತುಮಕೂರು: ‘₹500 ಮುಖಬೆಲೆಯ ₹10 ಲಕ್ಷ ನೀಡಿದರೆ, ₹100 ಮುಖಬೆಲೆಯ ₹20 ಲಕ್ಷ ಕೊಡಲಾಗುವುದು’ ಎಂದು ನಂಬಿಸಿ ನಗರ ಹೊರವಲಯದ ಭೀಮಸಂದ್ರ ವೃತ್ತದ ಬಳಿ ಮೈಸೂರಿನ ಉದ್ಯಮಿ ಗೌರಿಶಂಕರ್ ಎಂಬುವರಿಗೆ ₹10 ಲಕ್ಷ ವಂಚಿಸಲಾಗಿದೆ.

ಗೌರಿಶಂಕರ್ ಕಳೆದ 6 ತಿಂಗಳಿನಿಂದ ಸೌದೆ ಒಲೆ ವ್ಯಾಪಾರ ಮಾಡುತ್ತಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ವ್ಯಾಪಾರದ ಕುರಿತು ರೀಲ್ಸ್ ಹಂಚಿಕೊಂಡಿದ್ದರು.

‘ಏ. 24ರಂದು ಮಹಿಳೆಯೊಬ್ಬರು ಕರೆ ಮಾಡಿ ಸೌದೆ ಒಲೆ ಬಗ್ಗೆ ವಿಚಾರಿಸಿದ್ದರು. ಉದ್ಯಮಕ್ಕೆ ಹಣ ಹೂಡಿಕೆ ಮಾಡುತ್ತೇವೆ. ₹100 ಮುಖಬೆಲೆಯ ₹20 ಲಕ್ಷ ನೀಡುತ್ತೇವೆ, ನೀವು ₹500 ಮುಖಬೆಲೆಯ ₹10 ಲಕ್ಷ ಕೊಟ್ಟರೆ ಸಾಕು. ಹೆಚ್ಚಿನ ಲಾಭ ಬಂದಾಗ ಹಣ ವಾಪಸ್ ಕೊಡಬಹುದು ಎಂದು ನಂಬಿಸಿದ್ದರು’ ಎಂದು ಗೌರಿಶಂಕರ್ ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

‘ಏ. 27ರಂದು ಅಪರಿಚಿತರು ಕರೆ ಮಾಡಿ, ಗುಬ್ಬಿ ಪಟ್ಟಣಕ್ಕೆ ಬನ್ನಿ, ಉದ್ಯಮದ ಕುರಿತು ಮಾತನಾಡೋಣ ಎಂದಿದ್ದರು. ನಂತರ ಗುಬ್ಬಿಗೆ ಹೋಗಿ ಮೂರು ಜನರ ಜತೆ ಚರ್ಚಿಸಲಾಗಿತ್ತು. ಆಗ ₹100 ಮುಖಬೆಲೆಯ 4 ಕಟ್ಟು ನನ್ನ ಕೈಗೆ ಕೊಟ್ಟು, ಎಲ್ಲವೂ ಅಸಲಿ ನೋಟು ಎಂದು ತಿಳಿಸಿದ್ದರು’ ಎಂದು ವಿವರಿಸಿದ್ದಾರೆ.

‘ಏ. 28ರಂದು ಕರೆ ಮಾಡಿದ ಆರೋಪಿಗಳು ₹20 ಲಕ್ಷ ಸಿದ್ಧವಾಗಿದೆ. ನೀವು ₹10 ಲಕ್ಷ ತೆಗೆದುಕೊಂಡು ತುಮಕೂರಿಗೆ ಬರುವಂತೆ ಹೇಳಿದ್ದರು. ಮೂವರು ಆರೋಪಿಗಳು ಭೀಮಸಂದ್ರ ವೃತ್ತದ ಬಳಿ ಹಣ ಪಡೆದಿದ್ದರು. ಅವರು ಒಂದು ಹಣದ ಬಾಕ್ಸ್ ನೀಡಿದ್ದರು. ಎಲ್ಲಿಯೂ ತೆರೆದು ನೋಡಬೇಡಿ, ಯಾರಾದರೂ ಹಿಂಬಾಲಿಸಿಕೊಂಡು ಬಂದರೆ ಕಷ್ಟ. ಮನೆಗೆ ಹೋಗಿ ತೆರೆಯುವಂತೆ ಹೇಳಿದ್ದರು’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

‘ಮನೆಗೆ ಹೋಗಿ ನೋಡಿದಾಗ, ಹಣದ ಬಾಕ್ಸ್ ಮೇಲ್ಭಾಗದಲ್ಲಿ ಒಂದು ಹಾಳೆಯ ಮೇಲೆ ₹100 ಮುಖಬೆಲೆಯ ₹8 ನೋಟುಗಳನ್ನು ಅಂಟಿಸಿ, ಕೆಳ ಭಾಗದಲ್ಲಿ ಮಣ್ಣಿನ ಇಟ್ಟಿಗೆ ಇಟ್ಟು ಹಣ ಇದೆ ಎಂದು ಹೇಳಿ ವಂಚಿಸಿದ್ದಾರೆ. ನಂತರ ಅವರ ನಂಬರ್ಗೆ ಕರೆ ಮಾಡಿದಾಗ ಸ್ವಿಚ್ಡ್ ಆಫ್ ಎಂದು ಬಂದಿದೆ’ ಎಂದಿದ್ದಾರೆ.

‘ವ್ಯಾಪಾರ ವೃದ್ಧಿಸಿಕೊಳ್ಳಲು ಹಣ ಕೊಡುತ್ತೇವೆ ಎಂದು ಹೇಳಿ ನಂಬಿಸಿ, ಮೋಸ ಮಾಡಿದ ವ್ಯಕ್ತಿಗಳ ವಿರುದ್ಧ ಕ್ರಮಕೈಗೊಳ್ಳಬೇಕು. ಹಣ ವಾಪಸ್ ಕೊಡಿಸಬೇಕು’ ಎಂದು ಮನವಿ ಮಾಡಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-17-1587126406

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.