ತುಮಕೂರು: ನಗರದ ಹೆಗ್ಗಡೆ ಕಾಲೊನಿ ಬಳಿ ಈಚೆಗೆ ಕಾರು ಅಡ್ಡಗಟ್ಟಿ ಬೆಳ್ಳಿ ಉಂಗುರ, ಮೊಬೈಲ್ ದೋಚಿದ್ದ ಮೂವರು ಸುಲಿಗೆಕೋರರನ್ನು ತಿಲಕ್ಪಾರ್ಕ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನಗರದ ವಿನೋಬ ನಗರದ ಮಂಜನಾಥ (24), ಹೆಗ್ಗಡೆ ಕಾಲೊನಿಯ ಸುಹೇಲ್ ಪಾಷ (26), ಅಪ್ರೋಜ್ ಪಾಷ (28) ಬಂಧಿತರು. ಆರೋಪಿಗಳಿಂದ ₹80 ಸಾವಿರ ಮೌಲ್ಯದ ಬೈಕ್, ₹25 ಸಾವಿರದ 2 ಮೊಬೈಲ್ ಜಪ್ತಿ ಮಾಡಲಾಗಿದೆ.

ಹಾಸನದ ಬಿ.ಜಿ.ಚೇತನ್ ತಮ್ಮ ಸ್ನೇಹಿತರ ಜತೆಗೆ ನಗರಕ್ಕೆ ಬರುವಾಗ ಸುಲಿಗೆಕೋರರು ಹೆಗ್ಗಡೆ ಕಾಲೊನಿಯ ರೈಲ್ವೆ ಕೆಳ ಸೇತುವೆ ಬಳಿ ಕಾರು ಅಡ್ಡಗಟ್ಟಿದ್ದರು. ಚಾಕು ತೋರಿಸಿ ಬೆದರಿಕೆ ಹಾಕಿದ್ದರು. ಚೇತನ್ ಮೇಲೆ ಹಲ್ಲೆ ನಡೆಸಿ, 2 ಮೊಬೈಲ್ ಕಿತ್ತುಕೊಂಡು ಹೋಗಿದ್ದರು. ಈ ಕುರಿತು ತಿಲಕ್ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಮೂವರ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿರುವುದು ಗೊತ್ತಾಗಿದೆ.

‘ತಿಲಕ್ಪಾರ್ಕ್ ಸಿಪಿಐ ಎಫ್.ಕೆ.ನದಾಫ್, ಪಿಎಸ್ಐ ಟಿ.ಕೆ.ಯೋಗೀಶ್, ಸಿಬ್ಬಂದಿ ರಾಮಕೃಷ್ಣ, ಶಶಿಕುಮಾರ್ ನಾಯ್ಕ್, ನಿಜಾಮುದ್ಧೀನ್ ಷಾ ಅವರ ತಂಡ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಸಿತ್ತು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260405-17-1674430498

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.