ತುಮಕೂರು: ಮಾದಿಗ ಸಮುದಾಯದ ವಿದ್ಯಾರ್ಥಿಗೆ ಜಾತಿ ನಿಂದನೆ ಮಾಡಿ, ಸಾಮಾಜಿಕ ಬಹಿಷ್ಕಾರ ಹಾಕಿದ ಆರೋಪದ ಮೇರೆಗೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಶಿಡ್ಲಕಟ್ಟೆ ಗ್ರಾಮದ 11 ಮಂದಿ ಸವರ್ಣೀಯರ ವಿರುದ್ಧ ನಗರದ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ (ಡಿಸಿಆರ್ಇ) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಗ್ರಾಮದಲ್ಲಿ ನಡೆಯುತ್ತಿದ್ದ ಅಭಿವೃದ್ಧಿ ಕಾಮಗಾರಿಯಲ್ಲಿನ ಭ್ರಷ್ಟಾಚಾರ ಪ್ರಶ್ನಿಸಿದ್ದಕ್ಕೆ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ನಮ್ಮ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ’ ಎಂದು ಶಿಡ್ಲಕಟ್ಟೆಯ ಕಾನೂನು ವಿದ್ಯಾರ್ಥಿ ಆರ್.ದೇವರಾಜು ನೀಡಿದ ದೂರು ಆಧರಿಸಿ ಒಕ್ಕಲಿಗ, ವಿಶ್ವಕರ್ಮ ಸಮುದಾಯದ ನಟರಾಜು, ಸಂದೇಶ್ ಗೌಡ, ಮುದ್ದೇಗೌಡ, ವಸಂತ್ಕುಮಾರ್, ಕಲ್ಯಾಣ್ ಕುಮಾರ್, ತ್ಯಾಗರಾಜು, ಯೋಗೀಶ್ ಆಚಾರಿ, ಕುಮಾರ್ ಆಚಾರಿ, ಪರಿಶಿಷ್ಟ ಜಾತಿಯ ಶಾಂತರಾಜು, ಲಕ್ಷ್ಮಣ, ಕ್ಷತ್ರಿಯ ಸಮಾಜದ ಕರಿಯಪ್ಪ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

‘ಎಸ್ಸಿಎಸ್ಪಿ ಯೋಜನೆಯಡಿ ಗ್ರಾಮದ ಪ್ರಗತಿ ಕಾಲೊನಿಯಲ್ಲಿ ರಸ್ತೆ ಅಭಿವೃದ್ಧಿ ಪಡಿಸಲಾಗುತ್ತಿದೆ. ಕಾಮಗಾರಿಯಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದ್ದೆ. ಇದನ್ನು ಮನಸ್ಸಿನಲ್ಲಿ ಇಟ್ಟುಕೊಂಡ ಸವರ್ಣೀಯರು ಮಾತನಾಡುವ ನೆಪದಲ್ಲಿ ಏ. 27ರಂದು ಕರಿಯಮ್ಮ ದೇವಾಲಯದ ಬಳಿ ನನ್ನನ್ನು ಕರೆಸಿಕೊಂಡಿದ್ದರು. ಈ ಸಮಯದಲ್ಲಿ 11 ಜನ ಜಾತಿ ನಿಂದನೆ ಮಾಡಿ, ಹಲ್ಲೆ ನಡೆಸಿದ್ದಾರೆ’ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

‘ನಾನು ಗ್ರಾಮದ ಯಾವುದೇ ಕೆಲಸದಲ್ಲಿ ಭಾಗವಹಿಸದಂತೆ ಅರ್ಜಿ ಬರೆದುಕೊಂಡು ನನ್ನಿಂದ ಸಹಿ ಪಡೆದಿದ್ದಾರೆ. ಭ್ರಷ್ಟಾಚಾರದ ಕುರಿತು ಇಲಾಖೆಗೆ ಸಲ್ಲಿಸಿದ ದೂರು ಹಿಂಪಡೆಯುವ ತನಕ ಕುಟುಂಬದವರಿಗೆ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ. ಇವರ ವಿರುದ್ಧ ಕಾನೂನು ಕ್ರಮಕೈಗೊಳ್ಳುಂತೆ’ ದೂರಿನಲ್ಲಿ ಮನವಿ ಮಾಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260430-17-1453667228

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.