ತುಮಕೂರು: ನಗರದ ರಾಜೀವ್ಗಾಂಧಿ ನಗರದಲ್ಲಿ ಮಂಗಳವಾರ ರಾತ್ರಿ ಅಕ್ರಮವಾಗಿ ಕೂಡಿ ಹಾಕಿದ್ದ 72 ಜಾನುವಾರುಗಳನ್ನು ರಕ್ಷಿಸಿದ ತಿಲಕ್ ಪಾರ್ಕ್ ಠಾಣೆ ಪೊಲೀಸರು, ಗೋ ಶಾಲೆಗೆ ಕಳುಹಿಸಿದ್ದಾರೆ.

ವಿವಿಧೆಡೆಯಿಂದ ಅಕ್ರಮವಾಗಿ ಸಾಗಣೆ ಮಾಡಿಕೊಂಡು ಬಂದು, ಮನೆಯ ಬಳಿ ಕೂಡಿ ಹಾಕಿದ್ದ ಆರೋಪದ ಮೇರೆಗೆ ರಾಜೀವ್ಗಾಂಧಿ ನಗರದ ನಿವಾಸಿ ಮೊಹ್ಮದ್ ಇಸ್ಮಾಯಿಲ್ ಅನ್ಸಾರಿ ವಿರುದ್ಧ ಪ್ರಕರಣ ದಾಖಲಾಗಿದೆ.

ಸ್ಥಳೀಯರ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಜಾನುವಾರುಗಳನ್ನು ರಕ್ಷಿಸಿದ್ದಾರೆ. ಘಟನೆ ನಂತರ ಇಸ್ಮಾಯಿಲ್ ಅನ್ಸಾರಿ ತಲೆಮರೆಸಿಕೊಂಡಿದ್ದಾರೆ. ಬಕ್ರೀದ್ ಹಬ್ಬದ ಪ್ರಯುಕ್ತ ಗೋಮಾಂಸ ಮಾರಾಟ ಮಾಡುವ ಉದ್ದೇಶದಿಂದ ಗೋವುಗಳನ್ನು ಖರೀದಿಸಿ ತರಲಾಗಿತ್ತು ಎಂಬುದು ಗೊತ್ತಾಗಿದೆ.

ಪಾವಗಡ: ತಾಲ್ಲೂಕಿನ ದೋಮ್ಮತಮರಿ ಗ್ರಾಮದಲ್ಲಿ ಬುಧವಾರ ಸರಕು ಸಾಗಣೆ ವಾಹನದಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದವರನ್ನು ಪಟ್ಟಣ ಠಾಣೆ ಪೊಲೀಸರು ಬಂಧಿಸಿದ್ದಾರೆ.

ವೈ.ಎನ್. ಹೊಸಕೋಟೆ ಹೋಬಳಿ ತಿಮ್ಮಮ್ಮನಹಳ್ಳಿಯ ವೆಂಕಟೇಶ್ (39) ಬಂಧಿತ ಆರೋಪಿ.

ಪಾವಗಡ ಕಡೆಯಿಂದ ಹಿಂದೂಪುರ ಕಡೆಗೆ ಸರಕು ಸಾಗಣೆ ವಾಹನದಲ್ಲಿ ಎರಡು ಎತ್ತುಗಳನ್ನು ಅಪಾಯಕಾರಿ ಸ್ಥಿತಿಯಲ್ಲಿ ಯಾವುದೇ ಪರವಾನಗಿ ಪಡೆಯದೆ ಸಾಗಿಸಲಾಗುತ್ತಿದೆ ಎಂದು ಪಟ್ಟಣದ ರವಿ ಎಂಬುವರು ದೂರು ನೀಡಿದ್ದರು. ದೂರು ಆಧರಿಸಿ ಪೊಲೀಸರು ಹಸುಗಳನ್ನು ಸಾಗಿಸುತ್ತಿದ್ದ ಲಗೇಜ್ ವಾಹನ, ಎರಡು ಹಸುಗಳನ್ನು ವಶಪಡಿಸಿಕೊಂಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-17-27708437

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.