ತುಮಕೂರು: ಜನಗಣತಿ ಭಾಗವಾಗಿ ನಡೆಯುತ್ತಿರುವ ಮನೆ ಗಣತಿ ಕಾರ್ಯ ಜಿಲ್ಲೆಯಲ್ಲಿ ಪೂರ್ಣಗೊಂಡಿದ್ದು, ಗಣತಿ ಸಮಯದಲ್ಲಿ 1,514 ಮನೆಗಳಿಗೆ ಬೀಗ ಹಾಕಿರುವುದು ಕಂಡು ಬಂದಿದೆ.

ಏ. 16ರಿಂದ ಮೇ 15ರ ವರೆಗೆ ಮನೆ ಗಣತಿ ಮಾಡಲಾಗಿದೆ. ಒಟ್ಟು 8,97,038 ಮನೆಗಳ ಗಣತಿಗೆ ಗುರಿ ನೀಡಲಾಗಿತ್ತು. ಗಣತಿ ವೇಳೆ ಜಿಲ್ಲೆಯ ವಿವಿಧೆಡೆ 1,514 ಮನೆಗಳಿಗೆ ಬೀಗ ಹಾಕಿರುವುದು ಗೊತ್ತಾಗಿದೆ. ಪಾವಗಡ, ಶಿರಾ, ಚಿಕ್ಕನಾಯಕನಹಳ್ಳಿ ಮತ್ತು ತುಮಕೂರು ನಗರ ಪ್ರದೇಶದಲ್ಲಿ ಹೆಚ್ಚಿನ ಮನೆಗಳಿಗೆ ಬೀಗ ಹಾಕಲಾಗಿದೆ. ಪಾವಗಡ, ಶಿರಾ ಗಡಿ ಭಾಗದ ಜನರು ಕೆಲಸ ಅರಸಿ ನಗರಗಳಿಗೆ ವಲಸೆ ಹೋಗಿದ್ದು, ಮನೆಗಳು ಖಾಲಿ ಖಾಲಿಯಾಗಿವೆ.

ಒಟ್ಟು 5,253 ಗಣತಿ ಬ್ಲಾಕ್ (ಹೌಸ್ ಲಿಸ್ಟಿಂಗ್ ಬ್ಲಾಕ್)ಗಳಲ್ಲಿ 8,97,038 ಮನೆಗಳ ಗಣತಿಗೆ ನಿಗದಿ ಪಡಿಸಲಾಗಿತ್ತು. ಒಂದು ಬ್ಲಾಕ್ನಲ್ಲಿ 150ರಿಂದ 200 ಮನೆಗಳು ಒಳಗೊಂಡಿವೆ. 45 ಮೇಲ್ವಿಚಾರಕರು, 4,415 ಗಣತಿದಾರರನ್ನು ನಿಯೋಜಿಸಲಾಗಿತ್ತು. ನಗರ ಭಾಗದಲ್ಲಿ ನಿಧಾನಗತಿಯಲ್ಲಿ ಆರಂಭವಾದ ಗಣತಿ ಕೆಲಸ ನಂತರದ ದಿನಗಳಲ್ಲಿ ವೇಗ ಪಡೆದಿತ್ತು. ಹಳ್ಳಿ ಕಡೆ ಶುರುವಿನಿಂದಲೇ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು.

ಮಧುಗಿರಿ, ಪಾವಗಡ ನಗರದಲ್ಲಿ ಮೇ 8ರ ವರೆಗೆ ಗಣತಿ ನೀರಸವಾಗಿತ್ತು. ಕೊನೆಯ ಒಂದು ವಾರದಲ್ಲಿ ಅರ್ಧದಷ್ಟು ಮನೆ ಗಣತಿ ಮುಗಿಸಲಾಗಿದೆ. ಗಣತಿ ಆರಂಭದಲ್ಲಿ ‘ಹೌಸ್ ಲಿಸ್ಟಿಂಗ್ ಆಪರೇಟಿಂಗ್ ಆ್ಯಪ್’ (ಎಚ್ಎಲ್ಒ) ಇನ್ಸ್ಟಾಲ್ ಆಗದೆ ಗಣತಿದಾರರು ಸಂಕಷ್ಟ ಅನುಭವಿಸಿದ್ದರು. ಮೊಬೈಲ್ನಲ್ಲಿ 10ರ ವರ್ಷನ್ (ಆವೃತ್ತಿ) ಕಡಿಮೆ ಇರುವವರು ಸಮಸ್ಯೆ ಎದುರಿಸಿದ್ದರು. ಗಣತಿದಾರರು ಆ್ಯಪ್ಗೆ ಹೊಂದಿಕೊಂಡು ಕೆಲಸ ಮುಂದುವರಿಸಿದ್ದರು. ನಿಗದಿತ ದಿನಾಂಕದ ಒಳಗೆ ಗಣತಿ ಕಾರ್ಯ ಸುಸೂತ್ರವಾಗಿ ಮುಗಿದಿದೆ.

ಗಣತಿ ಪೂರ್ಣಗೊಂಡರೂ ಮೇಲ್ವಿಚಾರಕರಿಗೆ ಗುರುತಿನ ಚೀಟಿ ವಿತರಿಸಿಲ್ಲ. ಗಣತಿದಾರರಿಗೆ ನೀಡಿದ್ದು, ಮೇಲ್ವಿಚಾರಕರಿಗೆ ಇನ್ನೂ ಸಿಕ್ಕಿಲ್ಲ. ಮನೆ ಗಣತಿ ಪ್ರಾರಂಭವಾದ ವಾರದ ನಂತರ ಅಗತ್ಯ ಪರಿಕರ ನೀಡಲಾಗಿತ್ತು. ಈಗ ಗಣತಿ ಮುಗಿದರೂ ಗುರುತಿನ ಚೀಟಿ ನೀಡಿಲ್ಲ. ಮುಂದಿನ ದಿನಗಳಲ್ಲಿ ಇವರನ್ನೇ ಗಣತಿಗೆ ನಿಯೋಜಿಸಲಾಗುತ್ತದೆ. ಆಗ ಗುರುತಿನ ಚೀಟಿ ಇಲ್ಲದೆ ತೊಂದರೆಯಾಗಬಹುದು. ಅಷ್ಟರ ಒಳಗೆ ಅಗತ್ಯ ಪರಿಕರ ಒದಗಿಸಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.