ತುಮಕೂರು: ದೇಶದ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಗಾಗಿ ಜವಾಬ್ದಾರಿಯಿಂದ ಗಣತಿ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸಲಹೆ ಮಾಡಿದರು.

ನಗರದ ಮಹಾನಗರ ಪಾಲಿಕೆಯಲ್ಲಿ ಸೋಮವಾರ ಜನಗಣತಿ-2027ರ ಕಾರ್ಯಕ್ಕೆ ನಿಯೋಜಿತ ಅಧಿಕಾರಿ ಹಾಗೂ ಸಿಬ್ಬಂದಿಗೆ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.

ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಜನಗಣತಿಯ ಅಂಕಿ-ಅಂಶಗಳೇ ಆಧಾರ. ಸರ್ಕಾರದ ಯೋಜನೆ, ಕ್ಷೇತ್ರ ವಿಂಗಡಣೆ ಎಲ್ಲವೂ ಜನಸಂಖ್ಯೆ ಮೇಲೆ ನಿರ್ಧಾರವಾಗುತ್ತದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ನೆರವು ತಲುಪಿಸಲು ಸಮಗ್ರ ಮಾಹಿತಿಯ ಅಗತ್ಯವಿದೆ. ಗಣತಿದಾರರು ಯಾವುದೇ ಪೂರ್ವಗ್ರಹವಿಲ್ಲದೆ ಸರಿಯಾದ ಮಾಹಿತಿ ಸಂಗ್ರಹಿಸಬೇಕು ಎಂದರು.

ಸಂವಹನ, ವಿಶ್ವಾಸಾರ್ಹತೆ ಹಾಗೂ ಮಾಹಿತಿ ಸಂಗ್ರಹ ಗಣತಿಯ ಪ್ರಮುಖ ಅಂಶ. ಆರಂಭದಲ್ಲಿ ನಿರಾಸಕ್ತಿ ಮೂಡಬಹುದು. ಇದು ಜವಾಬ್ದಾರಿ, ಕರ್ತವ್ಯ ಎಂಬುದನ್ನು ಮರೆಯಬಾರದು. ಎಲ್ಲಾ ಸಂದೇಹ ಇಲ್ಲಿಯೇ ಬಗೆಹರಿಸಿಕೊಳ್ಳಿ ಎಂದು ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ, ಜನಗಣತಿ ಸಂಪನ್ಮೂಲ ವ್ಯಕ್ತಿಗಳಾದ ಆರ್.ಎಸ್.ಶರ್ಮಾ, ಭವ್ಯಾ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.