ತುಮಕೂರು: ಜನಗಣತಿ ಕಾರ್ಯಕ್ಕೆ ಆರಂಭದಲ್ಲಿಯೇ ವಿಘ್ನ ಎದುರಾಗಿದ್ದು ಮೊಬೈಲ್ ಫೋನ್ನಲ್ಲಿ ‘ಹೌಸ್ ಲಿಸ್ಟಿಂಗ್ ಆಪರೇಟಿಂಗ್ ಆ್ಯಪ್’ (ಎಚ್ಎಲ್ಒ) ಇನ್ಸ್ಟಾಲ್ ಆಗದೆ ಗಣತಿದಾರರು ಪರದಾಡುತ್ತಿದ್ದಾರೆ.

ಏ.16ರಿಂದ ಮನೆ ಗಣತಿ ಕಾರ್ಯ ಆರಂಭವಾಗಿದೆ. ಗಣತಿಗೆ ನೇಮಿಸಿದ ಶಿಕ್ಷಕರಲ್ಲಿ ಹಲವರು ಹಳೆಯ ಆವೃತ್ತಿಯ ಮೊಬೈಲ್ ಬಳಸುತ್ತಿದ್ದಾರೆ. ಇದರಲ್ಲಿ ಎಚ್ಎಲ್ಒ ಆ್ಯಪ್ ತೆರೆದುಕೊಳ್ಳುತ್ತಿಲ್ಲ. ಕನಿಷ್ಠ ಆಂಡ್ರಾಯ್ಡ್ 10ರ ವರ್ಷನ್ (ಆವೃತ್ತಿ) ಇದ್ದರೆ ಮಾತ್ರ ಆ್ಯಪ್ ಡೌನ್ಲೋಡ್ ಆಗುತ್ತದೆ.

ಈ ಮಾಹಿತಿ ಇಲ್ಲದ, ಹೊಸಮಾದರಿಯ ಮೊಬೈಲ್ ಹೊಂದಿರದಸಾಕಷ್ಟು ಶಿಕ್ಷಕರು ಸಮೀಕ್ಷೆಗೆ ಮುಂದಾಗಿಲ್ಲ. ಗಣತಿಗೆ ನಿಯೋಜನೆಗೊಂಡ ಶಿಕ್ಷಕರು ಹಲವೆಡೆ ಸಮೀಕ್ಷೆಯನ್ನೇ ಆರಂಭಿಸಿಲ್ಲ. ತಾಂತ್ರಿಕ ಸಮಸ್ಯೆ ಪರಿಹರಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ.

ಜನ ಗಣತಿ ಸಮೀಕ್ಷೆಗಾಗಿ ಹಲವರು ಸಂಬಂಧಿಕರು, ಸ್ನೇಹಿತರು, ಪತಿಯ ಮೊಬೈಲ್ ಪಡೆದಿದ್ದರೆ, ಆ್ಯಪ್ ಡೌನ್ಲೋಡ್ ಆಗದವರು ₹15 ಸಾವಿರದಿಂದ ₹20 ಸಾವಿರ ಕೊಟ್ಟು ಹೊಸ ಮೊಬೈಲ್ ಖರೀದಿಸುತ್ತಿದ್ದಾರೆ. ಆದರೆ ಸಮೀಕ್ಷೆ ಕೆಲಸ ಮುಗಿಸಿದರೆ ಅವರಿಗೆ ಸಿಗುವುದು ₹25 ಸಾವಿರ!

‘ಸರ್ಕಾರ ಸಮೀಕ್ಷೆಗೆ ಪೂರಕವಾಗಿ ಅಗತ್ಯ ಪರಿಕರ ವಿತರಿಸಿಲ್ಲ. ಈ ಕೆಲಸ ಹೊರೆಯಾಗಿ ಪರಿಣಮಿಸಿದೆ. ಹಿರಿಯ ಶಿಕ್ಷಕರಿಗೆ ಸಮೀಕ್ಷೆ ಪೂರ್ಣಗೊಳಿಸಲು ಆಗುತ್ತಿಲ್ಲ. ಸುಧಾರಿತ ತಂತ್ರಜ್ಞಾನ ಬಳಸಲು ಬಾರದವರು ಪೇಚಿಗೆ ಸಿಲುಕುತ್ತಿದ್ದಾರೆ’ ಎಂದು ಶಿಕ್ಷಕರೊಬ್ಬರು ಬೇಸರ ವ್ಯಕ್ತಪಡಿಸಿದರು.

ಆ್ಯಪ್ ಸಮಸ್ಯೆ ಒಂದೆಡೆಯಾದರೆ ಮತ್ತೊಂದು ಕಡೆ ಲಾಗಿನ್ ತೊಂದರೆಯಾಗುತ್ತಿದೆ. ಸಮೀಕ್ಷೆ ಆರಂಭದಿಂದ ಇದೇ ರೀತಿಯಾಗುತ್ತಿದೆ. ತರಬೇತಿಗೆ ಹಾಜರಾಗಿ, ಎಲ್ಲ ಮಾಹಿತಿ ಪಡೆದು ಲಾಗಿನ್ ಕುರಿತು ಪರಿಶೀಲನೆ ನಡೆಸಿ, ಗಣತಿಗೆ ಹೋದರೆ ಸರ್ವರ್ ಸಮಸ್ಯೆ ಕಾಡುತ್ತಿದೆ. ಲಾಗಿನ್ ಆಗಲು ಗಂಟೆಗಟ್ಟಲೇ ಕಾಯುತ್ತಾ ಕಳಿತುಕೊಳ್ಳಬೇಕಾದ ಸ್ಥಿತಿ ಇದೆ. ಕೆಲವರಿಗೆ ಲಾಗಿನ್ ಆದ ನಂತರ ಮೊಬೈಲ್ಗೆ ಒಟಿಪಿ ಬರುತ್ತಿಲ್ಲ. ಇಂತಹ ಒಂದಿಲ್ಲೊಂದು ಸಮಸ್ಯೆ ಕಾಡಲಾರಂಭಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-51-1936931740

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.