ಶಿರಾ: ತುಮಕೂರು- ಚಿತ್ರದುರ್ಗ- ದಾವಣಗೆರೆ ರೈಲ್ವೆ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಲು ಅನುಕೂಲವಾಗುವಂತೆ ಶಿರಾ ಮತ್ತು ತುಮಕೂರು ತಾಲ್ಲೂಕುಗಳ ಒಟ್ಟು 34 ಕೆರೆಗಳಿಂದ ಅಮೃತ ಸರೋವರ ಯೋಜನೆಯಡಿ ಕೆರೆಗಳಿಂದ ಹೊರತೆಗೆಯುವ ಮಣ್ಣನ್ನು ರೈಲ್ವೆ ಯೋಜನೆಗೆ ಬಳಸಿಕೊಳ್ಳಲು ಸರ್ಕಾರ ಅನುಮೋದನೆ ನೀಡಿದೆ ಎಂದು ಶಾಸಕ ಟಿ.ಬಿ.ಜಯಚಂದ್ರ ತಿಳಿಸಿದರು.

ಕೆರೆಯ ಮಣ್ಣನ್ನು ರೈಲ್ವೆ ಯೋಜನೆಗೆ ಬಳಸಿಕೊಳ್ಳಲು ರಾಯಧನ ವಿನಾಯಿತಿ ನೀಡಲಾಗಿದೆ. ಕೇಂದ್ರ ಸಚಿವ ವಿ.ಸೋಮಣ್ಣ ಹಾಗೂ ನಾನು ಮಾಡಿದ ಮನವಿಗೆ ರಾಜ್ಯ ಸರ್ಕಾರ ಸ್ಪಂದಿಸಿದ್ದು ಇದರಿಂದ ಕಾಮಗಾರಿ ತ್ವರಿತವಾಗಿ ಸಾಗಲಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ತುಮಕೂರು- ದಾವಣಗೆರೆ ರೈಲ್ವೆ ಯೋಜನೆ 2016ರಲ್ಲಿ ಮಂಜೂರಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ 50:50 ಅನುಪಾತದಲ್ಲಿ ಅನುದಾನ ನೀಡಲಿದೆ. ಯೋಜನೆಗೆ ಭೂಮಿಯನ್ನು ರಾಜ್ಯ ಸರ್ಕಾರ ನೀಡುತ್ತದೆ ಎಂದರು.

ರಾಜ್ಯ ಸರ್ಕಾರ ಈಗಾಗಲೇ ₹1300 ಕೋಟಿ ಬಿಡುಗಡೆ ಮಾಡಿದ್ದು ತುಮಕೂರು ತಾಲ್ಲೂಕಿನ ತಿಮ್ಮರಾಜನಹಳ್ಳಿಯಿಂದ ಶಿರಾ ತಾಲ್ಲೂಕಿನ ಉಜ್ಜನಕುಂಟೆಯವರೆಗೆ 53 ಕಿ.ಮೀ ರೈಲ್ವೆ ಮಾರ್ಗಕ್ಕಾಗಿ 700 ಎಕರೆ ಭೂ ಸ್ವಾಧೀನ ಮಾಡಿ ಪರಿಹಾರ ನೀಡಲಾಗಿದೆ. ಶೇ 80ರಷ್ಟು ಜಮೀನು ರೈಲ್ವೆಗೆ ಹಸ್ತಾಂತರ ಮಾಡಲಾಗಿದೆ ಎಂದರು.

ಪ್ರಾರಂಭದಲ್ಲಿ ಶಿರಾ ತಾಲ್ಲೂಕಿನ ಬ್ರಹ್ಮಸಂದ್ರ, ತರೂರು, ಯಲದಬಾಗಿ, ಕಳ್ಳಂಬೆಳ್ಳ, ಯಲಿಯೂರು, ಚಿಕ್ಕಸಂದ್ರ ಕಾವಲ್, ಭೂವನಹಳ್ಳಿ, ಲಕ್ಷ್ಮಿಸಾಗರ ಕೆರೆ ಸೇರಿದಂತೆ 9 ಕೆರೆಗಳಿಂದ ಮಣ್ಣು ತೆಗೆಯಲು ಅನುಮೋದನೆ ನೀಡಿತ್ತು. ಈಗ ಶಿರಾ ಮತ್ತು ತುಮಕೂರು ತಾಲ್ಲೂಕುಗಳ 25 ಕೆರೆಗಳಿಂದ ಮಣ್ಣು ತೆಗೆಯಲು ಅನುಮೋದನೆ ನೀಡಿರುವ ಕಾರಣ ವಾರದಿಂದ ಸ್ಥಗಿತವಾಗಿದ್ದ ರೈಲ್ವೆ ಕಾಮಗಾರಿ ಮತ್ತೆ ಪ್ರಾರಂಭವಾಗಲಿದೆ ಎಂದರು.

ಜನಪ್ರತಿನಿಧಿಗಳು, ಅಧಿಕಾರಿಗಳು, ರೈತರು, ಸಾರ್ವಜನಿಕರು ಸಹಕಾರ ನೀಡಿದರೆ 2027ರ ಡಿಸೆಂಬರ್ ಅಂತ್ಯಕ್ಕೆ ರೈಲು ಬರುವ ಮೂಲಕ ಈ ಭಾಗದ ಜನತೆಯ ಬಹುದಿನದ ಕನಸು ನನಸಾಗುವುದು ಎಂದರು.

ರೈತರಿಗೂ ಅವಕಾಶ: ಕೆರೆಗಳಿಂದ ರೈತರು ತಮ್ಮ ಜಮೀನುಗಳಿಗೆ ಮಣ್ಣು ಹೊಡೆದುಕೊಳ್ಳಲು ಅಧಿಕಾರಿಗಳು ಅವಕಾಶ ನೀಡುತ್ತಿರಲಿಲ್ಲ. ರೈತರ ಮೇಲೆ ಕೆಲವು ಕಡೆಗಳಲ್ಲಿ ಕೇಸು ಹಾಕಲಾಗಿದೆ. ಇದನ್ನು ಮನಗಂಡ ಸರ್ಕಾರ ರೈತರಿಗೆ ಸಹ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ ಕೆರೆಗಳಿಂದ ಹೂಳು ಮಣ್ಣು ಹೊಡೆದುಕೊಳ್ಳಲು ಅವಕಾಶ ನೀಡಲಾಗಿದೆ ಎಂದರು.

ಕೆರೆಗಳ ಅಚ್ಚುಕಟ್ಟು ಪ್ರದೇಶದಲ್ಲಿನ ರೈತರು ತಮ್ಮ ಕೃಷಿ ಜಮೀನುಗಳಿಗೆ ಕೆರೆಗಳಲ್ಲಿ ಶೇಖರಣೆಗೊಂಡಿರುವ ಹೂಳನ್ನು ಬಳಸಿಕೊಳ್ಳಲು ತಮ್ಮ ಜಮೀನಿನ ಪಹಣಿ ಪ್ರತಿ ಹಾಗೂ ಅಗತ್ಯವಿರುವ ಹೂಳಿನ ಪ್ರಮಾಣದ ವಿವರಗಳೊಂದಿಗೆ ಉಪವಿಭಾಗ ಕಚೇರಿಗೆ ಲಿಖಿತ ಅರ್ಜಿ ಸಲ್ಲಿಸಬೇಕು.

ರೈತರಿಂದ ಹೂಳನ್ನು ತೆಗೆಯಲು ಅನುಮತಿ ಕೋರಿ ಪ್ರಸ್ತಾವ ಬಂದ ನಂತರ ಕೆರೆಯಲ್ಲಿ ಶೇಖರಣೆಗೊಂಡಿರುವ ಹೂಳಿನ ಪರಿಮಾಣ ಅಂದಾಜಿಸಲಾಗುತ್ತದೆ. ಕೆರೆಯ ಮೂಲಸ್ವರೂಪಕ್ಕೆ ಧಕ್ಕೆ ಉಂಟಾಗದಂತೆ ಹೂಳನ್ನು ಕೃಷಿ ಚಟುವಟಿಕೆಗೆ ಬಳಸಿಕೊಳ್ಳಲು ಸಣ್ಣ ನೀರಾವರಿ ಇಲಾಖೆ ಶಾಖಾಧಿಕಾರಿ ನಿರ್ದೇಶನದಂತೆ ಪಿಡಿಒ ಮೇಲುಸ್ತುವಾರಿಯಲ್ಲಿ ಹೂಳು ತೆಗೆಯಲು ಸರ್ಕಾರ ಅವಕಾಶ ನೀಡಿದ್ದು ಇದರಿಂದ ರೈತರಿಗೆ ಹೆಚ್ಚು ಅನುಕೂಲ ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-17-1023862905

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.