ತುಮಕೂರು: ‘ಜಮೀನಿನಲ್ಲಿ ಉಳುಮೆಮಾಡುವಾಗ ಚಿನ್ನದ ನಿಧಿ ಸಿಕ್ಕಿದ್ದು, ಕಡಿಮೆ ಬೆಲೆಗೆ ಮಾರಾಟ ಮಾಡಲಾಗುವುದು’ ಎಂದು ನಂಬಿಸಿ ಚಿತ್ರದುರ್ಗದ ಮೊಳಕಾಲ್ಮೂರು ತಾಲ್ಲೂಕಿನ ಕೋನಸಾಗರದ ಶರಣೇಶ್ ಎಂಬುವರಿಗೆ ₹12 ಲಕ್ಷ ವಂಚಿಸಲಾಗಿದೆ.

ನಕಲಿ ಒಡವೆ ಕೊಟ್ಟು, ವಂಚಿಸಿದ ಆರೋಪದ ಮೇರೆಗೆ ಹಿರಿಯೂರಿನ ರಾಜಣ್ಣ, ಗಣೇಶ್ ಎಂಬುವರ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ನಮ್ಮ ಊರಿನ ಕಡೆಗೆ ಹಕ್ಕಿ ಹಿಡಿಯಲು ಬಂದಾಗ ಇಬ್ಬರು ಆರೋಪಿಗಳ ಪರಿಚಯವಾಗಿತ್ತು. ಒಂದು ದಿನ ರಾಜಣ್ಣ ಕರೆ ಮಾಡಿ ಚಿನ್ನದ ನಿಧಿ ಬಗ್ಗೆ ತಿಳಿಸಿದ್ದರು. ನಾವು ಹೊರಗಡೆ ಮಾರಾಟ ಮಾಡಲು ಆಗುವುದಿಲ್ಲ. ನಿಮಗೆ ಕಡಿಮೆ ಬೆಲೆಗೆ ಕೊಡುತ್ತೇವೆ. ₹12 ಲಕ್ಷ ನೀಡಿದರೆ ಒಡವೆ ಕೊಡಲಾಗುವುದು ಎಂದಿದ್ದರು. ನಮ್ಮ ತಂದೆ ಜತೆಗೆ ಚರ್ಚಿಸಿ ಹಣ ಕೊಡಲು ಒಪ್ಪಿದ್ದೆ’ ಎಂದು ಶರಣೇಶ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಮಾರ್ಚ್ 26ರಂದು ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ರಾಜಣ್ಣ ಅವರಿಗೆ ₹2 ಲಕ್ಷ ನೀಡಿದೆ. ನಂತರ ಯಲ್ಲಾಪುರಕ್ಕೆ ತೆರಳಿ ಅಲ್ಲಿದ್ದ ಗಣೇಶ ಅವರಿಗೆ ₹10 ಲಕ್ಷ ತಲುಪಿಸಿದೆ. ಅವರು ನಮ್ಮನ್ನು ಯಲ್ಲಾಪುರ ದೊಡ್ಡ ಮೈದಾನಕ್ಕೆ ಕರೆದುಕೊಂಡು ಹೋಗಿ, ಗಿಡದ ಪೊದೆಯಲ್ಲಿ ನಿಂತು ಚಿನ್ನಾಭರಣದ ಮೂಟೆ ನೀಡಿದ್ದರು ಎಂದು ಹೇಳಿದ್ದಾರೆ.

15ರಿಂದ 20 ದಿನ ಮನೆಯಲ್ಲಿಟ್ಟು, ನಂತರ ಸ್ವಲ್ಪ ಚಿನ್ನವನ್ನು ಮೊಳಕಾಲ್ಮೂರಿನ ಚಿನ್ನದಂಗಡಿಯಲ್ಲಿ ಪರೀಕ್ಷೆ ನಡೆಸಲಾಯಿತು. ಆಗ ಅದು ನಕಲಿ ಬಂಗಾರ ಎಂಬುವುದು ತಿಳಿಯಿತು. ಚಿನ್ನ ಎಂದು ನಂಬಿಸಿ ಹಣ ಪಡೆದು ವಂಚಿಸಿದ ರಾಜಣ್ಣ, ಗಣೇಶ್ ವಿರುದ್ಧ ಕ್ರಮಕೈಗೊಳ್ಳುವಂತೆ ಶರಣೇಶ್ ಮನವಿ ಮಾಡಿದ್ದಾರೆ.

ಎರಡನೇ ಪ್ರಕರಣ: 2025ರಲ್ಲಿಯೂ ಇಂತಹ ಘಟನೆ ನಗರದ ಹೊರವಲಯದ ಅಂತರಸನಹಳ್ಳಿ ಕೈಗಾರಿಕಾ ಪ್ರದೇಶ ಬಳಿ ನಡೆದಿತ್ತು. ಆಂಧ್ರಪ್ರದೇಶದ ಪಲನಾಡು ಬಳಿಯ ಚಿಲಕಲೂರು ಪೇಟೆಯ ವೈ.ಪ್ರಸನ್ನಾ ಎಂಬುವರಿಗೆ ನಕಲಿ ಚಿನ್ನ ಕೊಟ್ಟು, ₹45 ಲಕ್ಷ ವಂಚಿಸಲಾಗಿತ್ತು. ಈ ಕುರಿತು ತುಮಕೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈಗ ಅದೇ ರೀತಿಯ ಮತ್ತೊಂದು ಪ್ರಕರಣ ನಗರ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260429-17-65391183

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.