ತುಮಕೂರು: ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್ಎಸ್) ಪಕ್ಷದವರು ಕ್ಷುಲ್ಲಕ ವಿಚಾರಕ್ಕೆ ಗಲಾಟೆ ಮಾಡಿರುವುದು ಖಂಡನೀಯ. ಇದನ್ನು ಮುಂದುವರಿಸಿದರೆ ಅವರಿಗೆ ಜಿಲ್ಲೆಯ ಯಾವುದೇ ಕಡೆ ಓಡಾಡಲು ಅವಕಾಶ ಸಿಗದಂತಾಗುತ್ತದೆ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಚಂದ್ರಶೇಖರಗೌಡ ಇಲ್ಲಿ ಭಾನುವಾರ ಹೇಳಿದರು.

‘ನಗರದಲ್ಲಿ ಈಚೆಗೆ ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಮುಂದೆಯೇ ಕೆಆರ್ಎಸ್ ಪದಾಧಿಕಾರಿಗಳು ಗಲಾಟೆ ನಡೆಸಿದರು. ಅಹಿತಕರ ವಾತಾವರಣ ಸೃಷ್ಟಿಸಿದರು. ಸಚಿವರು ಅರ್ಜಿ ಸ್ವೀಕರಿಸಿದರೂ ವಿಡಿಯೊ ಮಾಡುವುದು ಬಿಡಲಿಲ್ಲ. ಈಗ ಸುಳ್ಳನ್ನು ಸತ್ಯ ಎಂದು ಬಿಂಬಿಸಲು ಹೊರಟಿದ್ದಾರೆ’ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಮುಖಂಡ ಇಕ್ಬಾಲ್ ಅಹ್ಮದ್, ‘ಬಂಧನಕ್ಕೆ ಒಳಗಾದ ಕೆಆರ್ಎಸ್ ಮುಖಂಡ ಮೈಸೂರಿನವರು. ಅವರಿಗೂ ನಮ್ಮ ಜಿಲ್ಲೆಗೂ ಏನು ಸಂಬಂಧ. ಗೊಂದಲ ಸೃಷ್ಟಿಸಲು ಉದ್ದೇಶ ಪೂರ್ವಕವಾಗಿ ಕೃತ್ಯ ಎಸಗಿದ್ದಾರೆ. ಎಲ್ಲರಿಗೂ ಅಹವಾಲು ಸಲ್ಲಿಸಿ, ಉತ್ತರ ಪಡೆಯಲು ಅವಕಾಶ ಕಲ್ಪಿಸಲಾಗಿತ್ತು. ಮುಖಂಡರು ಇದನ್ನು ಧಿಕ್ಕರಿಸಿ ನಡೆದುಕೊಂಡಿದ್ದಾರೆ’ ಎಂದರು.

ಕೆಪಿಸಿಸಿ ಉಪಾಧ್ಯಕ್ಷ ಮುರಳೀಧರ್ ಹಾಲಪ್ಪ, ‘ಮುಖ್ಯಮಂತ್ರಿ, ಸಚಿವರು ಜಿಲ್ಲೆಗೆ ಬಂದಾಗ ಕೆಆರ್ಎಸ್ ಮುಖಂಡರು ಇದೇ ಕೆಲಸ ಮಾಡುತ್ತಾರೆ. ಜನತಾ ದರ್ಶನದಲ್ಲಿ ಗೊಂದಲ ಮೂಡಿಸಿದವರ ವಿರುದ್ಧ ಕಾನೂನಾತ್ಮಕವಾಗಿ ತಕ್ಕ ಪಾಠ ಕಲಿಸಲಾಗುವುದು’ ಎಂದು ತಿಳಿಸಿದರು.

ಮುಖಂಡರಾದ ಆರ್.ರಾಮಕೃಷ್ಣ, ಗೋವಿಂದರಾಜು, ರೇವಣ್ಣ ಸಿದ್ದಯ್ಯ, ಸುವರ್ಣಮ್ಮ, ನಿಂಗರಾಜು, ಸುಜಾತಾ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260413-17-603139622

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.