ತುಮಕೂರು: ‘ಸಂವಿಧಾನ ಅನುಸರಿಸುತ್ತಲೇ ಮನುಸ್ಮೃತಿ ಆಚರಿಸುತ್ತಿದ್ದೇವೆ.ಮೊದಲು ಸಂವಿಧಾನ ರಕ್ಷಿಸುವ ಕೆಲಸವಾಗಬೇಕಿದೆ’ ಎಂದು ಚಿಂತಕ ಶಿವಸುಂದರ್ ತಿಳಿಸಿದರು.

ತುಮಕೂರು ವಿಶ್ವವಿದ್ಯಾಲಯ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರ, ಬೆಂಗಳೂರಿನ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ಡಾ.ಬಿ.ಆರ್.ಅಂಬೇಡ್ಕರ್ ವಿಚಾರಧಾರೆ: 21ನೇ ಶತಮಾನದ ಭಾರತದಲ್ಲಿ ಒಳಗೊಳ್ಳುವಿಕೆ, ಪ್ರಜಾಸತ್ತಾತ್ಮಕತೆ ಮತ್ತು ಸಾಮಾಜಿಕ ನ್ಯಾಯ’ ಎಂಬ ಎರಡು ದಿನಗಳ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಅಂಬೇಡ್ಕರ್ ಚಿಂತನೆಯಂತೆ ಯಾವುದನ್ನೂ ಪ್ರಶ್ನಿಸದೆ ನಂಬಬೇಡಿ. ಆದರೆ ಇಂದು ನಾವು ಹೇಳಿಕೊಳ್ಳಲು ಸಂವಿಧಾನ ಅನುಸರಿಸುತ್ತಿದ್ದರೂ, ಆಚರಣೆಯಲ್ಲಿ ಮನುಸ್ಮೃತಿಯೇ ಮುನ್ನೆಲೆಗೆ ಬರುತ್ತಿದೆ ಎಂದು ವಿಷಾದಿಸಿದರು.

ಎಸ್ಐಆರ್ ಜಾರಿಯಿಂದ ಸಾಕಷ್ಟು ಸಮಸ್ಯೆಗಳಾಗುತ್ತಿವೆ. ಬುಡಕಟ್ಟು, ಅಲೆಮಾರಿಗಳು ಸೇರಿದಂತೆ ಸುಮಾರು 6.5 ಕೋಟಿ ಜನರ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡುವ ಕೆಲಸವಾಗುತ್ತಿದೆ. ದೇಶದಲ್ಲಿ ವಾಕ್ ಸ್ವಾತಂತ್ರ್ಯವಿದ್ದರೂ, ಮಾತನಾಡಿದ ನಂತರ ಸ್ವಾತಂತ್ರ್ಯವಿದೆಯೇ ಎಂಬುದನ್ನು ನಾವು ಪ್ರಶ್ನಿಸಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಬೆಂಗಳೂರಿನ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ಸಾಬೀರ್ ಅಹ್ಮದ್ ಮುಲ್ಲಾ, ‘ಅಂಬೇಡ್ಕರ್ ಚಿಂತನೆಗಳು ಪ್ರತಿ ಮನೆ, ಮನವನ್ನು ತಲುಪಬೇಕು’ ಎಂದರು.

ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ಪ್ರಾಧ್ಯಾಪಕ ಆವತ್ತಿ ರಾಮಯ್ಯ ಮಾತನಾಡಿದರು. ಕುಲಸಚಿವರಾದ ನಾಹಿದಾ ಜಮ್ ಜಮ್, ಪ್ರೊ.ಎಚ್.ಎಸ್.ಮೋಹನ್, ಬಿ.ಆರ್.ಅಂಬೇಡ್ಕರ್ ಸಂಶೋಧನಾ ಕೇಂದ್ರದ ನಿರ್ದೇಶಕ ಪ್ರೊ.ಕೇಶವ ಉಪಸ್ಥಿತರಿದ್ದರು.

ಮೊದಲ ಗೋಷ್ಠಿಯಲ್ಲಿ ಐಐಟಿ ಸಹ ಪ್ರಾಧ್ಯಾಪಕ ಯಶ್ಪಾಲ್ ಜೋಗ್ದಂಡ್ ‘ಮನಸ್ಸು ಮತ್ತು ಸಮಾಜದಲ್ಲಿ ಜಾತಿ ನಿರ್ಮೂಲನೆ’ ಕುರಿತು ಪ್ರಬಂಧ ಮಂಡಿಸಿದರು. ವಿ.ವಿ ಕಲಾ ನಿಕಾಯದ ಡೀನ್ ಪ್ರೊ.ಕೆ.ಜಿ.ಪರಶುರಾಮ ಅಧ್ಯಕ್ಷತೆ ವಹಿಸಿದ್ದರು. ಎರಡನೇ ಗೋಷ್ಠಿಯಲ್ಲಿ ಮುಂಬೈ ವಿ.ವಿ ಪ್ರೊ.ಮೃದುಲ್ ನೀಲೆ ‘ದಲಿತರ ಆರ್ಥಿಕ ಸ್ಥಿತಿಗತಿ’ ಬಗ್ಗೆ ಮಾಹಿತಿ ನೀಡಿದರು. ಪ್ರೊ.ಬಿ.ಶೇಖರ್ ಅಧ್ಯಕ್ಷತೆ ವಹಿಸಿದ್ದರು. ಮೂರನೇ ಗೋಷ್ಠಿಯಲ್ಲಿ ಕಲಬುರಗಿ ಕೇಂದ್ರೀಯ ವಿ.ವಿ ಪ್ರೊ.ಅಪ್ಪಗೆರೆ ಸೋಮಶೇಖರ್ ‘ಅಂಬೇಡ್ಕರ್ ಬೌದ್ಧ ತತ್ವಶಾಸ್ತ್ರ’ದ ಬಗ್ಗೆ ಉಪನ್ಯಾಸ ನೀಡಿದರು. ವಾಣಿಜ್ಯ ನಿಕಾಯದ ಡೀನ್ ಪ್ರೊ.ಪಿ.ಪರಮಶಿವಯ್ಯ ಅಧ್ಯಕ್ಷತೆ ವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-17-1203966008

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.