ದಂಡಿನಶಿವರ (ತುರುವೇಕೆರೆ): ತಾಲ್ಲೂಕಿನ ದಂಡಿನಶಿವರ ಹೋಬಳಿಯ ದಂಡಿನಶಿವರ ಗ್ರಾಮದೇವತೆ ಹೊನ್ನಾದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಶನಿವಾರ ಕಂಬ ವಿಸರ್ಜನೆ ಮಾಡಲಾಯಿತು.

ಶನಿವಾರ ಹೊನ್ನಾದೇವಿಗೆ ದೂಪದ ಸೇವೆ ಮಾಡಲಾಯಿತು. ಜಾತ್ರೆಯ ಸೂಚಕವಾಗಿ ಮೂರು ಮೂಲೆಗಳ ಕಂಬವನ್ನು ಯುಗಾದ ಹಬ್ಬವಾದ 15 ದಿನ ಮುಂಚೆ ಹಾಕಲಾಗಿತ್ತು. ಇದಕ್ಕೂ ಮುನ್ನಾ ಅಲಂಗಾರಗೊಂಡ ಹೊನ್ನಾದೇವಿ ಮತ್ತು ಗ್ರಾಮದ ಆಂಜನೇಯ ಸ್ವಾಮಿಯನ್ನು ಗ್ರಾಮದ ಪ್ರಮುಖ ರಾಜ ಬೀದಿಗಳಲ್ಲಿ ಮೆರವಣಿಗೆ ಮಾಡಿ ಬರಲಾಗಿತ್ತು.

ಕಂಬಕ್ಕೆ ಅಲಂಕಾರ ಮಾಡಲಾಗಿತ್ತು. ಅರ್ಚಕರು ಪೂಜೆ ನಡೆಸಿದ ನಂತರ ಕಂಬದ ಪ್ರದಕ್ಷಿಣೆ ಹಾಕಲಾಯಿತು. ಗ್ರಾಮಸ್ಥರು ಮತ್ತು ಭಕ್ತಾಧಿಗಳ ಸಮ್ಮುಖದಲ್ಲಿ ಶನಿವಾರ ಸಂಜೆ ಕಂಬವನ್ನು ಕೀಳಲಾಯಿತು. ಕಿತ್ತ ಕಂಬವನ್ನು ಗ್ರಾಮದ ಬಾವಿಯೊಳಗೆ ಹಾಕಲಾಯಿತು. ಭಕ್ತಾದಿಗಳು ಮತ್ತು ಗ್ರಾಮಸ್ಥರು ಹಣ್ಣುಕಾಯಿ, ಪೂಜೆ ನಡೆಸಿದರು.

ಗ್ರಾಮದ ಗುಡಿ ಗೌಡರಾದ ಸಿದ್ದೇಗೌಡ, ಧರ್ಮದರ್ಶಿ ಗಿರೀಶ್, ಗ್ರಾಮದ ಹಿರಿಯರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-17-1119796514

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.