ತಿಪಟೂರು: ತಾಲ್ಲೂಕಿನಲ್ಲಿ ಬುಧವಾರ ನಡೆದ ಜನಸಂಪರ್ಕ ಸಭೆಗೆ ಜಿಲ್ಲಾಧಿಕಾರಿ ಗೈರಾಗಿದ್ದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

ಕಿಬ್ಬನಹಳ್ಳಿ ಹೋಬಳಿ ಬಿಳಿಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದ ಸಭೆಗೆ ಜಿಲ್ಲಾಮಟ್ಟದ ಅಧಿಕಾರಿಗಳು ಬರಲಿಲ್ಲ. ಉಪವಿಭಾಗಾಧಿಕಾರಿ, ತಹಶೀಲ್ದಾರ್, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಅರ್ಜಿ ಸ್ವೀಕರಿಸಿದರು.

ಮಧ್ಯಾಹ್ನದ ನಂತರ ತಾಲ್ಲೂಕು ಆಡಳಿತ ಸೌಧದ ಆವರಣದಲ್ಲಿ ನಡೆದ ಸಭೆಗೂ ಜಿಲ್ಲಾಧಿಕಾರಿ ಗೈರಾಗಿದ್ದರಿಂದ ಜನರು ನಿರಾಶರಾದರು.

ಬಿಳಿಗೆರೆಯಲ್ಲಿ ಸಮಸ್ಯೆಗಳ ಕುರಿತು ಸಮಗ್ರ ಚರ್ಚೆ ನಡೆಯದೆ ಕೇವಲ ಅರ್ಜಿ ಸ್ವೀಕರಿಸುವ ಮಟ್ಟಕ್ಕೆ ಸಭೆ ಸೀಮಿತವಾಯಿತು. 101 ಅರ್ಜಿ ಸ್ವೀಕೃತವಾಗಿದ್ದು, ನಗರದ ತಾಲ್ಲೂಕು ಆಡಳಿತಸೌಧದಲ್ಲಿ 133 ಅರ್ಜಿಗಳು ಸ್ವೀಕೃತವಾಗಿವೆ. ಒಟ್ಟು 234 ಅರ್ಜಿಗಳು ಸ್ವೀಕೃತಗೊಂಡವು.

ಸಭೆಗೆ ಬಂದ ಸಾರ್ವಜನಿಕರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ, ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದ ಭೂಸ್ವಾಧೀನ ಸಮಸ್ಯೆ, ಬಗರ್ಹುಕುಂ ಯೋಜನೆಯಡಿ ನೀಡಿದ ಜಮೀನುಗಳ ದುರಸ್ತಿ, ಜಮೀನು ಪಹಣಿ, ದುರಸ್ತಿ, ಸರ್ವೆ, ಗಣಿಬಾಧಿತ ಪ್ರದೇಶಗಳಿಗೆ ವಸತಿ ನಿವೇಶನ ವಿತರಣೆ ವಿಳಂಬ ಹಾಗೂ ನಗರದ ಕೆರೆಗಳ ಒತ್ತುವರಿ ತೆರವುಗೊಳಿಸುವಂತೆ ಸಾರ್ವಜನಿಕರು ಮನವಿ ಸಲ್ಲಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ ಮಾತನಾಡಿ, ತಾಲ್ಲೂಕಿನಲ್ಲಿ ಈಗಾಗಲೇ ಆರು ತಿಂಗಳಲ್ಲಿ ಇ-ಪೌತಿ ಖಾತೆ ಆಂದೋಲನ ಜಾರಿಯಲ್ಲಿದ್ದು, 7,843 ಜನರಿಗೆ ಪೌತಿ ಖಾತೆ ಮಾಡಿಕೊಡಲಾಗಿದೆ. ಜಮೀನು ಅಳತೆ ಹಾಗೂ ದಾಖಲೆಗಳ ಸರಿಪಡಿಸುವ ಕಾರ್ಯ ಕ್ರಮಬದ್ಧವಾಗಿ ನಡೆಯುತ್ತಿದ್ದು, ಸರ್ಕಾರಿ ಜಮೀನು ಒತ್ತುವರಿ ತಡೆದು ಸಂರಕ್ಷಿಸಲು ಹಲವು ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ ಎಂದರು.

ಬಿಳಿಗೆರೆ ಗ್ರಾಮ ಪಂಚಾಯಿತಿ ಆವರಣದಲ್ಲಿ ನಡೆದ ಸಭೆ ಕೇವಲ ಔಪಚಾರಿಕ ಹಾಗೂ ಕಾಟಾಚಾರವಾಗಿದೆ. ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಮತ್ತೊಂದು ದಿನ ಜನಸಂಪರ್ಕ ಸಭೆ ನಡೆಸಬೇಕು ಎಂದು ಬಿಳಿಗೆರೆ ಪಾಳ್ಯದ ನಾಗೇಶ್ ಒತ್ತಾಯಿಸಿದರು.

ಜಿಲ್ಲಾಧಿಕಾರಿಗಳ ಭೇಟಿ ಹಿನ್ನೆಲೆಯಲ್ಲಿ ಒಂದು ವಾರದಿಂದ ತಾಲ್ಲೂಕು ಆಡಳಿತ ಸಿದ್ಧತೆ ನಡೆಸಿದ್ದರೂ ಅವರು ಬರದ ಕಾರಣ ಸಾರ್ವಜನಿಕರು ಹಾಗೂ ಅಧಿಕಾರಿಗಳ ಸಮಯ ವ್ಯರ್ಥವಾದಂತಾಗಿದೆ. ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಮತ್ತೊಮ್ಮೆ ಜನಸಂಪರ್ಕ ಸಭೆ ಆಯೋಜಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260327-17-1516333621

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.