ತುಮಕೂರು: ತುಮಕೂರು ಜಿಲ್ಲೆಯನ್ನು ‘ತುಮಕೂರು (ಬೆಂಗಳೂರು ಉತ್ತರ) ಜಿಲ್ಲೆ’ ಈ ಮಾದರಿಯಲ್ಲಿ ಹೆಸರು ಬದಲಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಹೇಳಿದರು.

ನಗರದಲ್ಲಿ ಶುಕ್ರವಾರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದಿಂದ (ಕಾಸಿಯಾ) ಹಮ್ಮಿಕೊಂಡಿದ್ದ ದಕ್ಷಿಣ ಭಾರತ ಮಟ್ಟದ ಸೂಕ್ಷ್ಮ ಹಾಗೂ ಸಣ್ಣ ಕೈಗಾರಿಕೆಗಳ (ಎಂಎಸ್ಎಂಇ) ಸಮಾವೇಶ, ಕೈಗಾರಿಕಾ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

‘ಅಮೆರಿಕ, ಇಂಗ್ಲೆಂಡ್ ಇತರೆ ದೇಶಗಳಿಂದ ಹಣ ಹೂಡಿಕೆಗೆ ಬರುವ ಉದ್ಯಮಿಗಳಿಗೆ ತುಮಕೂರು ಎನ್ನುವುದಕ್ಕಿಂತ ಬೆಂಗಳೂರು ಉತ್ತರ ಎಂದರೆ ಚೆನ್ನಾಗಿರುತ್ತದೆ. ಆಗ ಕೈಗಾರಿಕೆ ಸ್ಥಾಪನೆಗೆ ಮುಂದೆ ಬರುತ್ತಾರೆ. ನಾನು ಇಲ್ಲಿಯೇ ಹುಟ್ಟಿ ಬೆಳೆದಿದ್ದೇನೆ. ಜಿಲ್ಲೆಯ ಅಸ್ಮಿತೆಗೆ ಧಕ್ಕೆ ತರುವುದಿಲ್ಲ. ಯಾವುದೇ ಕಾರಣಕ್ಕೂ ಹೆಸರು ಬದಲಾವಣೆ ಮಾಡುವುದಿಲ್ಲ. ಬೆಂಗಳೂರಿನ ಒಂದು ಭಾಗವಾಗಿ ಜಿಲ್ಲೆಯನ್ನು ಅಭಿವೃದ್ಧಿ ಪಡಿಸಲಾಗುವುದು. ಇದಕ್ಕೆ ಎಲ್ಲ ಪ್ರಯತ್ನ ನಡೆಸುತ್ತೇನೆ‘ ಎಂದರು.

ನಗರ ಹೊರವಲಯದ ವಸಂತನರಸಾಪುರದಲ್ಲಿ ಕೈಗಾರಿಕಾ ಹಬ್ ಮಾಡಲು 20 ಸಾವಿರ ಎಕರೆ ಕಾಯ್ದಿರಿಸಲಾಗಿದೆ. 20 ವರ್ಷ ಕಳೆದರೂ ನಿರೀಕ್ಷಿತ ಮಟ್ಟದಲ್ಲಿ ಬೆಳವಣಿಗೆ ಆಗಿಲ್ಲ. ಜಪಾನಿಸ್ ಟೌನ್ಶಿಪ್ಗೆ 500 ಎಕರೆ ನೀಡಲಾಗಿದೆ. ಈವರೆಗೂ ಏನೂ ಆಗಿಲ್ಲ. ಸರ್ಕಾರ ಅಗತ್ಯ ಸೌಲಭ್ಯ ಕಲ್ಪಿಸುತ್ತದೆ. ಉದ್ಯಮಿಗಳು ಈ ಕುರಿತು ಗಮನ ಹರಿಸಬೇಕು ಎಂದು ಕೋರಿದರು.

ಆಧುನಿಕತೆಯಿಂದ ಬಡಗಿ, ನೇಕಾರಿಕೆಯಂತಹ ಗುಡಿ ಕೈಗಾರಿಕೆಗಳು ನಶಿಸಿ ಹೋಗಿವೆ. ಸ್ವಾತಂತ್ರ್ಯ ನಂತರ ಆಧುನಿಕತೆಯ ಜತೆಗೆ ಸಣ್ಣ ಕೈಗಾರಿಕೆ ಪ್ರಾರಂಭವಾಗಿ ಮುನ್ನಡೆಯುತ್ತಿವೆ. ರಾಷ್ಟ್ರದ ಆರ್ಥಿಕ ವ್ಯವಸ್ಥೆಗೆ ಶೇ 30ರಷ್ಟು ಕೊಡುಗೆ ನೀಡುತ್ತಿವೆ. ಇದಕ್ಕೆ ಉತ್ತೇಜನ ಸಿಗದಿರುವುದು ದುರ್ದೈವದ ಸಂಗತಿ. ಬೃಹತ್ ಕೈಗಾರಿಕೆಗಳು ಇವುಗಳನ್ನು ನುಂಗಿ ಹಾಕಿದವು ಎಂದು ವಿಷಾದಿಸಿದರು.

ರಾಜ್ಯದಲ್ಲಿ 24 ಲಕ್ಷ ಸಣ್ಣ ಕೈಗಾರಿಕೆಗಳಿದ್ದು, 2.50 ಕೋಟಿ ಜನ ಕೆಲಸ ಮಾಡುತ್ತಿದ್ದಾರೆ. ಚೀನಾ ಮಾದರಿಯಲ್ಲಿ ಅಗತ್ಯ ಪ್ರೋತ್ಸಾಹ ನೀಡಿದರೆ ಮತ್ತಷ್ಟು ಬೆಳವಣಿಗೆ ಕಾಣಲು ಸಾಧ್ಯ. ಕೃತಕ ಬುದ್ಧಿಮತ್ತೆ ಸೇರಿ ಅಗತ್ಯ ತಂತ್ರಜ್ಞಾನವನ್ನು ಅತೀ ಶೀಘ್ರದಲ್ಲಿ ಅಳವಡಿಸಿಕೊಳ್ಳಬೇಕು. ಇಲ್ಲದಿದ್ದರೆ ಬೇರೆ ದೇಶಗಳು ನಮ್ಮನ್ನು ಓವರ್ಟೇಕ್ ಮಾಡಿ, ಮುಂದಕ್ಕೆ ಸಾಗುತ್ತವೆ ಎಂದು ಎಚ್ಚರಿಸಿದರು.

ಕಾಸಿಯಾ ಅಧ್ಯಕ್ಷ ಬಿ.ಆರ್.ಗಣೇಶ್ರಾವ್, ‘ಸಣ್ಣ ಕೈಗಾರಿಕೆಗಳು ಆರ್ಥಿಕ ಶಕ್ತಿಯ ಮೂಲಾಧಾರವಾಗಿವೆ. ಕೃಷಿಯ ನಂತರ ಹೆಚ್ಚಿನ ಆದಾಯ ಸೃಷ್ಟಿಸುತ್ತವೆ. ಕೈಗಾರಿಕಾ ನೀತಿ, ವಿದ್ಯುತ್ ದರ, ಭೂಮಿ ಹಂಚಿಕೆ, ರಫ್ತು ಉತ್ತೇಜನ ಇತರೆ ವಿಷಯಗಳಲ್ಲಿ ಕಾಸಿಯಾ ಉದ್ಯಮಿಗಳ ಬೆಂಬಲವಾಗಿ ನಿಂತಿದೆ’ ಎಂದರು.

ಕಾಸಿಯಾ ವಜ್ರ ಮಹೋತ್ಸವದ ಸ್ಮರಣಿಕೆ ಬಿಡುಗಡೆ ಮಾಡಲಾಯಿತು. ಶಾಸಕ ಜಿ.ಬಿ.ಜ್ಯೋತಿಗಣೇಶ್, ತುಮಕೂರು ವಿ.ವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ಎಸ್ಬಿಐ ಪ್ರಾದೇಶಿಕ ವ್ಯವಸ್ಥಾಪಕ ಪಿ.ಶ್ರೀರಾಮ್, ತಮಿಳುನಾಡು ಕಾಸಿಯಾ ಅಧ್ಯಕ್ಷ ಎಸ್.ವಾಸುದೇವನ್, ತೆಲಂಗಾಣದ ಎಪಿಕೆ ರೆಡ್ಡಿ, ಕೇರಳದ ಎಂ.ಇ.ಅನಿಸ್, ಪೀಣ್ಯ ಕೈಗಾರಿಕಾ ಪ್ರದೇಶದ ಅಧ್ಯಕ್ಷ ದಾಸಪ್ಪ, ದಾಬಸ್ಪೇಟೆ ಕೈಗಾರಿಕಾ ಪ್ರದೇಶದ ಅಧ್ಯಕ್ಷ ಕಂಠಪ್ಪ, ವಸಂತನರಸಾಪುರ ಕೈಗಾರಿಕಾ ಪ್ರದೇಶದ ಅಧ್ಯಕ್ಷ ಹರೀಶ್, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಪಿ.ಆರ್.ಕುರಂದವಾಡ, ಕಾಸಿಯಾ ಪದಾಧಿಕಾರಿಗಳಾದ ಎಸ್.ಎಂ.ಹುಸೇನ್, ಆರ್.ಕೇಶವಮೂರ್ತಿ, ಸದಾಶಿವ್ ಆರ್.ಅಮಿನ್, ಆನಂದರಾವ್ ಇತರರು ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-17-175744634

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.