ಮಂಗಳವಾರ, ಅಕ್ಟೋಬರ್ 27, 2020
25 °C

ಕೋರಂ‌ ಕೊರತೆ: ಆರಂಭವಾಗದ ಜಿ.ಪಂ ವಿಶೇಷ ಸಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಲತಾ ರವಿಕುಮಾರ್  ಶುಕ್ರವಾರ ಕರೆದಿದ್ದ ವಿಶೇಷ ಸಾಮಾನ್ಯ ಸಭೆಗೆ ಕೋರಂ ಕೊರತೆ ಎದುರಾಗಿದೆ. ಸಭೆ ನಡೆಯುವ ಸಾಧ್ಯತೆ ಇಲ್ಲ.  ಅಧ್ಯಕ್ಷರ ವಿರುದ್ಧ ಕಾಂಗ್ರೆಸ್, ಜೆಡಿಎಸ್, ಬಿಜೆಪಿಯ 49 ಸದಸ್ಯರು ಅವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಮೇರೆಗೆ ಅ.7ರಂದು ಪ್ರಾದೇಶಿಕ ಆಯುಕ್ತರು ಸಭೆ ನಿಗದಿಗೊಳಿಸಿದ್ದಾರೆ. ಈ ನಡುವೆ ಅಧ್ಯಕ್ಷೆ ಲತಾ ಅವರು ವಿಶೇಷ ಸಾಮಾನ್ಯ ಸಭೆ ಕರೆದಿದ್ದರು.

ಅನುದಾನ ಹಂಚಿಕೆ ಮತ್ತು ಕಾಮಗಾರಿ ವಿಚಾರದಲ್ಲಿ ಚರ್ಚಿಸಲು ಸಭೆ ಕರೆದಿರುವುದಾಗಿ ತಿಳಿಸಿದ್ದರು. 

ಸಭೆ ಆರಂಭವಾಗಿ ಒಂದು ತಾಸು ಕಳೆದರೂ ನಾಲ್ಕು ಮಂದಿ ಸದಸ್ಯರು ಮಾತ್ರ ಭಾಗಿಯಾಗಿದ್ದಾರೆ. 

ಜೆಡಿಎಸ್ ಮತ್ತು ಬಿಜೆಪಿ ಜಿ.ಪಂ ನಲ್ಲಿ ಅಧಿಕಾರ ಹಂಚಿಕೊಂಡಿವೆ. ಜೆಡಿಎಸ್ ನ ಲತಾ ಅಧ್ಯಕ್ಷರಾಗಿ ಮತ್ತು ಬಿಜೆಪಿಯ ಶಾರದಾ ಉಪಾಧ್ಯಕ್ಷರಾಗಿದ್ದಾರೆ. 

ಜಿ.ಪಂನಲ್ಲಿ ಬಲಾಬಲ
ಒಟ್ಟು:57
ಬಿಜೆಪಿ: 19
ಕಾಂಗ್ರೆಸ್: 23
ಜೆಡಿಎಸ್;24
ಪಕ್ಷೇತರ; 1

ಸದಸ್ಯರು ಇದ್ದಾರೆ. ಇವರಲ್ಲಿ ಜೆಡಿಎಸ್ ನ 13 ಮಂದಿ ಅವಿಶ್ವಾಸಕ್ಕೆ ಸಹಿ ಮಾಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು