ತುಮಕೂರು: ‘ಕೊರಳ ಕೊಳಲ ದನಿಗೆ ಗೆಜ್ಜೆಯ ನಾದವಾಲಿಸೇ..ಓ ಮನಸೇ’ ಎಂಬ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮದಲ್ಲಿ ಜಾನಪದ ನೃತ್ಯ, ಹಾಡುಗಾರಿಕೆ ಮೇಳೈಸಿತ್ತು.

ನಗರದ ಎಸ್.ಎಸ್.ಪುರಂ ವಾಸವಿ ದೇವಾಲಯದಲ್ಲಿ ಮಂಗಳವಾರ ಸ್ವರ ಸಿಂಚನ ಸುಗಮ ಸಂಗೀತ ಜನಪದ ಕಲಾ ಸಂಸ್ಥೆ, ಜ್ಞಾನಬುತ್ತಿ ಸತ್ಸಂಗ ಕೇಂದ್ರದ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜನಪದ ಸೊಗಡು ಆವರಿಸಿತ್ತು.

ಕಲಾವಿದ ಕೋಲಾರ ರಮೇಶ್, ತಂಡದಿಂದ ಜಾನಪದ ನೃತ್ಯ, ಕರ್ನಾಟಕ ಸಂಗೀತ, ಪದ ದೇವರಾಜು, ವನಿತ ಹಿರೇಮಠ, ವೈ.ಎನ್.ಶಶಿಕುಮಾರ್ ತಂಡದಿಂದ ಗೀತ ವೈವಿಧ್ಯ, ಜನಪದ ಗಾಯನ, ಮಂಜುಳ ತಂಡದಿಂದ ಸುಗಮ ಸಂಗೀತ, ಚಿಕ್ಕನಾಯಕನಹಳ್ಳಿ ತಾಲ್ಲೂಕು ಎಳನಡುವಿನ ಶ್ರೀಗುರು ರಾಜಯೋಗಿ ಸಾಂಸ್ಕೃತಿಕ ಕಲಾ ಸಂಸ್ಥೆಯ ರಘು ಪೂಜಾರ್ ತಂಡದಿಂದ ತತ್ವಪದಗಳ ಗಾಯನ ಮೂಡಿಬಂತು.

ಪಂಡಿತ್ ನಾಗರಾಜ ಶ್ಯಾವಿ ಕೊಪ್ಪಳ ಅವರ ಕೊಳಲು ವಾದನ ಪ್ರೇಕ್ಷಕರ ಮನಸೂರೆಗೊಂಡಿತು. ಕೀಬೋರ್ಡ್ ಗಣೇಶ್ ಪ್ರಸಾದ್, ತಬಲ ಲೋಕೇಶ್ ಬಾಬು, ಡೋಲಕ್ ರಾಜೇಶ್ ರಂಗನಾಥ್, ರಿದಮ್ ಪ್ಯಾಡ್ ನಿರಂಜನ್ ಸಾಥ್ ನೀಡಿದರು. ಜನಪದ, ಭಾವಗೀತೆಗಳು ಗಮನ ಸೆಳೆದವು.

ಕಾರ್ಯಕ್ರಮಕ್ಕೆ ಚಾಲನೆ ನೀಡದ ಉಪವಿಭಾಗಾಧಿಕಾರಿ ನಾಹಿದಾ ಜಮ್ ಜಮ್, ‘ಜನಪದವನ್ನು ಪೂರ್ವಜರು ನಮಗೆ ನೀಡಿರುವ ಬಹುದೊಡ್ಡ ಕೊಡುಗೆ. ಅದನ್ನು ನಮ್ಮ ಮುಂದಿನ ಪೀಳಿಗೆಗೆ ತಲುಪಿಸುವ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ’ ಎಂದು ಹೇಳಿದರು.

ನಗರಪಾಲಿಕೆ ಉಪ ಆಯುಕ್ತರಾದ ಸುಪ್ರಿಯ ಬಾಣಗಾರ್, ‘ಜನಸಾಮಾನ್ಯರು ತಮ್ಮ ಮನದ ನೋವು, ನಲಿವುಗಳನ್ನು ವ್ಯಕ್ತಪಡಿಸಲು ಕಂಡುಕೊಂಡ ದಾರಿಯೇ ಜನಪದ. ಉತ್ತರ ಕರ್ನಾಟಕ ಭಾಗದಲ್ಲಿ ಜನಪದ ಬಹಳ ಉತ್ತುಂಗದಲ್ಲಿದೆ. ದೇವರ ಚರಿತ್ರೆಗಳು ಸಹ ಜನಪದವನ್ನೇ ಅವಲಂಬಿಸಿವೆ’ ಎಂದು ಅಭಿಪ್ರಾಯಪಟ್ಟರು.

ಸ್ವರ ಸಿಂಚನ ಸಂಸ್ಥೆ ಅಧ್ಯಕ್ಷ ಕೆಂಕೆರೆ ಮಲ್ಲಿಕಾರ್ಜುನ್, ‘ಸಂಸ್ಥೆ ಪ್ರಾರಂಭವಾಗಿ 25 ವಸಂತ ಕಂಡಿದೆ. ಆರಂಭದಲ್ಲಿ ₹300ಕ್ಕೆ ಒಂದು ಕಾರ್ಯಕ್ರಮ ನೀಡುತ್ತಿದ್ದೆವು. ಅನೇಕರು ಪ್ರೋತ್ಸಾಹ ನೀಡಿ ಬೆಳೆಸಿದ್ದಾರೆ’ ಎಂದು ಸ್ಮರಿಸಿದರು.

ಕಾಂಗ್ರೆಸ್ ಮುಖಂಡ ಜಿ.ಎಚ್.ಷಣ್ಮುಗಪ್ಪ, ಜ್ಞಾನಬುತ್ತಿ ಸತ್ಸಂಗ ಕೇಂದ್ರದ ಅಧ್ಯಕ್ಷ ಮುರುಳಿಕೃಷ್ಣಪ್ಪ, ಪ್ರಮುಖರಾದ ಆರ್.ಎಲ್.ರಮೇಶ್ ಬಾಬು, ನಾರಾಯಣ್, ವಿ.ಪಿ.ಕೃಷ್ಣಮೂರ್ತಿ, ಸಾ.ಚಿ.ರಾಜಕುಮಾರ್, ನೀಲಮ್ಮ, ಪದ ದೇವರಾಜು, ರಮೇಶ್, ಬಾಣಸಂದ್ರ ರವಿಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಈಶ್ವರ ಕು.ಮಿರ್ಜಿ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260409-17-1109400805

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.