ತುಮಕೂರು: ಅರಣ್ಯ ಇಲಾಖೆಯಲ್ಲಿ ನೌಕರಿ ಕೊಡಿಸುವುದಾಗಿ ನಂಬಿಸಿ, ನಕಲಿ ನೇಮಕಾತಿ ಪತ್ರದ ಜತೆಗೆ ತರಬೇತಿ ನೀಡಿ ವಂಚಿಸುತ್ತಿದ್ದ ಜಾಲ ಪತ್ತೆಯಾಗಿದೆ.

ತಾಲ್ಲೂಕಿನ ವಡ್ಡರಹಳ್ಳಿಯ ಚಂದ್ರಯ್ಯ ಎಂಬುವರ ತೋಟದ ಶೆಡ್ನಲ್ಲಿ ಮಾಹಿತಿ ಮತ್ತು ತರಬೇತಿ ಕೇಂದ್ರ ಪ್ರಾರಂಭಿಸಿ, ಹಲವಾರು ಯುವಕರಿಗೆ ತರಬೇತಿ ನೀಡಿ ವಂಚಿಸುತ್ತಿರುವುದು ಬೆಳಕಿಗೆ ಬಂದಿದೆ. ತರಬೇತಿ ಕೇಂದ್ರದ ಮೇಲೆ ಗುರುವಾರ ಬೆಳಗಿನ ಜಾವ ಪೊಲೀಸರು, ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ವಿಚಾರಣೆ ನಡೆಸಿದಾಗ ವಂಚನೆ ಜಾಲ ಬಹಿರಂಗಗೊಂಡಿದೆ.

ಉದ್ಯೋಗ ಕೊಡಿಸುವುದಾಗಿ ನಂಬಿಸಿ ರಾಜ್ಯದ ವಿವಿಧ ಜಿಲ್ಲೆಗಳ ಹತ್ತಾರು ಯುವಕರಿಂದ ₹3 ಲಕ್ಷದಿಂದ ₹5 ಲಕ್ಷದ ವರೆಗೂ ಹಣ ಪಡೆದು ಮೋಸ ಮಾಡಿದ ಆರೋಪ ಕೇಳಿ ಬಂದಿದೆ.

ನೆಲಮಂಗಲ ತಾಲ್ಲೂಕು ಭಾರತಿಪುರ ಗ್ರಾಮದ ಬಿ.ಎಸ್.ಕಿರಣ್, ತುಮಕೂರು ಹೊರವಲಯದ ಬೆಳಗುಂಬ ಬಳಿಯ ‘ನಮಸ್ತೆ ಕೆಫೆ’ ಮಾಲೀಕ ಪವನ್, ಬೆಳಗುಂಬದ ಉದಯ್ ಹಾಗೂ ಇತರರ ವಿರುದ್ಧ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಅರಣ್ಯ ಇಲಾಖೆ ಹೆಸರು ದುರುಪಯೋಗ ಪಡಿಸಿಕೊಂಡು, ನಕಲಿ ದಾಖಲಾತಿ ಸೃಷ್ಟಿಸಲಾಗಿದೆ. ಸಾರ್ವಜನಿಕರಿಗೆ ಮೋಸ ಮಾಡುವ ಉದ್ದೇಶದಿಂದ ನಕಲಿ ತರಬೇತಿ ಕೇಂದ್ರ ನಡೆಸಲಾಗುತ್ತಿದೆ. ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ವಲಯ ಅರಣ್ಯಾಧಿಕಾರಿ ಎಸ್.ನಮಿತಾ ನೀಡಿದ ದೂರಿನ ಮೇರೆಗೆ ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇಲಾಖೆ ಹೆಸರು ದುರುಪಯೋಗ: ಮೈಸೂರು ವಿಭಾಗದ ಅರಣ್ಯ ಪ್ರದೇಶದ ಖಾಲಿ ಹುದ್ದೆಗಳಿಗೆ ಯುವಕರನ್ನು ನೇಮಿಸಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮೀನಾಕ್ಷಿ ನೇಗಿ ಅವರು ಆದೇಶಿಸಿದಂತೆ ನೇಮಕಾತಿ ನಕಲಿ ಪತ್ರಗಳು, ಇತರ ದಾಖಲೆ ಪತ್ರಗಳನ್ನು ಸೃಷ್ಟಿಸಲಾಗಿದೆ. ಪರಿಸರ ಮತ್ತು ಅರಣ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಸಹಿ, ಮೊಹರು ನಕಲಿ ಮಾಡಿ, ನೇಮಕಾತಿ ದೃಢೀಕರಣ ಪತ್ರವನ್ನು ಸಹ ಅಭ್ಯರ್ಥಿಗಳಿಗೆ ಕಳುಹಿಸಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.

ತರಬೇತಿ ಕೇಂದ್ರದಲ್ಲಿ ಮಾರ್ಚ್ 23ರಿಂದ ಸುಮಾರು 15ಕ್ಕೂ ಹೆಚ್ಚು ಯುವಕರಿಗೆ ತರಬೇತಿ ನೀಡಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಪೊಲೀಸರ ಜತೆಗೆ ದಾಳಿ ನಡೆಸಿ ಪರಿಶೀಲನೆ ನಡೆಸಿದಾಗ ವಿಷಯ ಗೊತ್ತಾಗಿದೆ.

‘ಮೇಲಧಿಕಾರಿಗಳಿಂದ ಬಂದ ಮಾಹಿತಿ ಆಧರಿಸಿ ಪೊಲೀಸರ ಜತೆಗೆ ತರಬೇತಿ ಕೇಂದ್ರದ ಮೇಲೆ ದಾಳಿ ನಡೆಸಲಾಯಿತು. ದಾಳಿ ಸಮಯದಲ್ಲಿ ಕೇಂದ್ರದ ಮುಖ್ಯಸ್ಥರು, ಮಾಲೀಕರು ಯಾರೂ ಇರಲಿಲ್ಲ. ಕೇಂದ್ರದಿಂದ ಈ ಹಿಂದೆ ಯುವಕರನ್ನು ವಂಚಿಸಿದ ಬಗ್ಗೆ ಸದ್ಯಕ್ಕೆ ಮಾಹಿತಿ ಲಭ್ಯವಾಗಿಲ್ಲ' ಎಂದು ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260327-17-296286326

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.