ತುಮಕೂರು: ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರು ಲಿಂಗಪ್ಪ ಕುಟುಂಬದ ಮೇಲೆ ಅರಣ್ಯ ಇಲಾಖೆ ನಡೆಸಿದ ದೌರ್ಜನ್ಯಕ್ಕೆ ಸರ್ಕಾರವೇ ಹೊಣೆ. ಕೂಡಲೇ ಅವರ ಕ್ಷಮೆ ಕೋರಬೇಕು. ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್ಎಸ್) ಒತ್ತಾಯಿಸಿದೆ.

‘ಮಾಜಿ ಶಾಸಕ, ಹಿರಿಯ ಹೋರಾಟಗಾರ ಕೋಣಂದೂರು ಲಿಂಗಪ್ಪ ಸಮಾಜವಾದಿ ಚಳವಳಿಯ ಜೀವಂತ ದಂತಕಥೆ. ಅವರಿಗೆ ಕಾನೂನು ಬದ್ಧವಾಗಿ ಕೃಷಿಭೂಮಿ ಮಂಜೂರಾಗಿದೆ. ಅಧಿಕಾರಿಗಳು ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿ ಜೆಸಿಬಿ, ಹಿಟಾಚಿ ಬಳಸಿ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ನಾಶ ಪಡಿಸಿದ್ದಾರೆ. ಇದು ವಸಾಹತುಶಾಹಿ ಮಾದರಿಯ ದೌರ್ಜನ್ಯ’ ಎಂದು ಕೆಪಿಆರ್ಎಸ್ ಜಿಲ್ಲಾ ಅಧ್ಯಕ್ಷ ದೊಡ್ಡನಂಜಯ್ಯ, ಪ್ರಧಾನ ಕಾರ್ಯದರ್ಶಿ ಬಿ.ಉಮೇಶ್ ಕಿಡಿಕಾರಿದ್ದಾರೆ.

ಬೆಳೆ ನಷ್ಟಕ್ಕೆ ಸರ್ಕಾರ ಪೂರ್ಣ ಪರಿಹಾರ ನೀಡಬೇಕು. ಲಿಂಗಪ್ಪ ಅವರ ಪಿತ್ರಾರ್ಜಿತ ಆಸ್ತಿ 8 ಎಕರೆ 12 ಗುಂಟೆ ಜಮೀನಿನ ಸಾಗುವಳಿ ಹಕ್ಕು ರಕ್ಷಿಸಬೇಕು. ಲಿಂಗಪ್ಪ ಕುಟುಂಬದ ಮೇಲೆ ಈ ರೀತಿ ದೌರ್ಜನ್ಯ ಎಸಗಿರುವ ಅಧಿಕಾರಿಗಳು ಉಳಿದ ಬಗರ್ಹುಕುಂ ಸಾಗುವಳಿ ರೈತರನ್ನು, ಅರಣ್ಯ ಸಾಗುವಳಿದಾರರನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎಂಬುದನ್ನು ಊಹಿಸಲು ಕಷ್ಟ ಎಂದಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-17-1966067626

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.