ತುಮಕೂರು: ಜಿಲ್ಲೆಯಲ್ಲಿ 3 ತಾಲ್ಲೂಕು ಹೊರತುಪಡಿಸಿದರೆಉಳಿದೆಡೆಅಂತರ್ಜಲ ಬಳಕೆ ಮಿತಿ ಮೀರಿದೆ. ‘ಇದು ಅಪಾಯದ ಮುನ್ಸೂಚನೆಯಾಗಿದೆ’ ಎಂದು ತಜ್ಞರು ಎಚ್ಚರಿಸಿದ್ದಾರೆ.

ಕೇಂದ್ರೀಯ ಅಂತರ್ಜಲ ಮಂಡಳಿ ಮತ್ತು ಅಂತರ್ಜಲ ನಿರ್ದೇಶನಾಲಯದ ಸಹಯೋಗದಲ್ಲಿ ಜಿಲ್ಲಾ ಅಂತರ್ಜಲ ಕಚೇರಿಯ ಭೂ ವಿಜ್ಞಾನಿಗಳು ಅಂತರ್ಜಲ ಮೌಲ್ಯೀಕರಣ ಕಾರ್ಯ ಕೈಗೊಂಡಿದ್ದರು. 2024– 25ನೇ ಸಾಲಿನಲ್ಲಿ ಜಿಲ್ಲೆಯ ವಿವಿಧ ಕಡೆಗಳಲ್ಲಿ ಪರಿಶೀಲನೆ ನಡೆಸಿದ್ದಾರೆ. ಅಂತರ್ಜಲ ಪ್ರಮಾಣ, ಗುಣಮಟ್ಟ ಮತ್ತು ಬಳಕೆ ಪ್ರಮಾಣವನ್ನು ವೈಜ್ಞಾನಿಕವಾಗಿ ಅಳೆಯುವ ಪ್ರಕ್ರಿಯೆ ನಡೆದಿದೆ. ಈ ವೇಳೆ 5 ತಾಲ್ಲೂಕುಗಳಲ್ಲಿ ಅಂತರ್ಜಲ ಬಳಕೆ ಹೆಚ್ಚಾಗಿರುವುದು ಕಂಡು ಬಂದಿದೆ.

ಸುರಕ್ಷಿತ, ಕ್ಲಿಷ್ಟಕರ, ಅರೆ ಕ್ಲಿಷ್ಟಕರ, ಅತಿ ಬಳಕೆ ಎಂದು ನಾಲ್ಕು ವಿಧಗಳಲ್ಲಿ ಅಂತರ್ಜಲದ ಬಳಕೆ ವಿಂಗಡಿಸಲಾಗಿದೆ. ಗುಬ್ಬಿ, ತುರುವೇಕೆರೆ, ಕುಣಿಗಲ್ ತಾಲ್ಲೂಕು ಸುರಕ್ಷಿತ ಪಟ್ಟಿಗೆ ಸೇರಿವೆ. ಇಲ್ಲಿ ಶೇ 100ರಷ್ಟು ಅಂತರ್ಜಲ ಮರುಪೂರಣವಾದರೆ, ಈ ಪೈಕಿ ಶೇ 70ಕ್ಕಿಂತ ಕಡಿಮೆ ಬಳಸಲಾಗುತ್ತಿದೆ. ಮೂರು ತಾಲ್ಲೂಕುಗಳಲ್ಲಿ ಹೇಮಾವತಿ ನೀರು ಹರಿಯುತ್ತಿದೆ. ಹೇಮಾವತಿ ನೀರಿನಿಂದ ಕೆರೆ–ಕಟ್ಟೆ ತುಂಬಿಸಲಾಗುತ್ತಿದೆ. ಹೀಗಾಗಿ ಈ ಭಾಗದ ಹೆಚ್ಚಿನ ರೈತರು ಕೊಳವೆ ಬಾವಿ ಆಶ್ರಯಿಸುತ್ತಿಲ್ಲ. ಇದೇ ಕಾರಣಕ್ಕೆ ಅಂತರ್ಜಲ ಬಳಕೆ ಕಡಿಮೆಯಾಗಿದೆ.

ಕೊರಟಗೆರೆ ಭಾಗವನ್ನು ಕ್ಲಿಷ್ಟಕರ ಎಂದು ಗುರುತಿಸಲಾಗಿದೆ. ಮರುಪೂರಣದ ಪೈಕಿ ಶೇ 90ರಿಂದ 100 ರಷ್ಟು ಅಂತರ್ಜಲ ಬಳಕೆಯಾಗುತ್ತಿದೆ. ಪಾವಗಡವನ್ನು ಅರೆ ಕ್ಲಿಷ್ಟಕರ ಪಟ್ಟಿಗೆ ಸೇರಿಸಲಾಗಿದೆ. ಅಂತರ್ಜಲ ಮರುಪೂರಣದಲ್ಲಿ ಶೇ 70ರಿಂದ 90 ರಷ್ಟು ಬಳಕೆ ಮಾಡಲಾಗುತ್ತಿದೆ. ತುಮಕೂರು, ಚಿಕ್ಕನಾಯಕನಹಳ್ಳಿ, ಶಿರಾ, ತಿಪಟೂರು, ಮಧುಗಿರಿ ತಾಲ್ಲೂಕುಗಳಲ್ಲಿ ಮರುಪೂರಣಕ್ಕಿಂತ ಜಾಸ್ತಿ ಅಂತರ್ಜಲ ಉಪಯೋಗಿಸಲಾಗುತ್ತಿದೆ. ಐದು ಕಡೆಗಳಲ್ಲಿ ಈಗಾಗಲೇ ಅಗತ್ಯಕ್ಕೂ ಮೀರಿ ಅಂತರ್ಜಲ ಬಳಕೆಯಾಗಿದೆ.

ಜಿಲ್ಲೆಯ ಸರಾಸರಿ ಅಂತರ್ಜಲ ಮಟ್ಟವೂ ಕುಸಿತ ಕಾಣುತ್ತಿದೆ. 2024ರಲ್ಲಿ ಉತ್ತಮ ಮಳೆ ಸುರಿದಿದ್ದರಿಂದ 2025ರಲ್ಲಿ ಅಂತರ್ಜಲ ಮಟ್ಟ ಸರಾಸರಿ 11.64 ಮೀಟರ್ (ನೆಲಮಟ್ಟದಿಂದ ಆಳಕ್ಕೆ) ತಲುಪಿತ್ತು. 2024ರಲ್ಲಿ 14.24 ಮೀಟರ್ ಇತ್ತು. ಈ ವರ್ಷದ ಜನವರಿ– ಮಾರ್ಚ್ ಮಧ್ಯೆ 12.38 ಮೀಟರ್ಗೆ ಕುಸಿದಿದೆ.

ಅಂತರ್ಜಲ ನಿರ್ದೇಶನಾಲಯದ ಅಧಿಕಾರಿಗಳ ತಂಡದಿಂದ ಪ್ರತಿ ತಿಂಗಳು ಅಂತರ್ಜಲ ಮಟ್ಟ ಪರೀಕ್ಷಿಸಲಾಗುತ್ತದೆ. ಎಲ್ಲ ತಾಲ್ಲೂಕುಗಳಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಾ ಸಾಗಿದೆ. ಕುಣಿಗಲ್ನಲ್ಲಿ ಕಳೆದ ವರ್ಷ ಚೇತರಿಕೆ ಕಂಡಿತ್ತು. ಈ ಬಾರಿ 15.66 ಮೀಟರ್ಗೆ ಇಳಿಕೆಯಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-18-695885796

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.