ತುಮಕೂರು: ತಾಲ್ಲೂಕಿನ ನರಸಾಪುರ ಗ್ರಾಮದ ಗೀತಾ ಅವರ ಪತಿ ಪಾನ್ ಕಾರ್ಡ್ಗೆ ಆಧಾರ್ ಜೋಡಣೆ ಮಾಡುವಾಗ ₹1 ಸಾವಿರ ದಂಡ ಪಾವತಿಸಿದ್ದರು. ಇದನ್ನೇ ‘ಆದಾಯ ತೆರಿಗೆ ಪಾವತಿ’ ಎಂದು ಪರಿಗಣಿಸಿ ಗೀತಾ ಅವರ ಹೆಸರನ್ನು ಗೃಹಲಕ್ಷ್ಮಿ ಯೋಜನೆಯಿಂದ ಕೈ ಬಿಡಲಾಗಿದೆ.

ಗೀತಾ ಆದಾಯ ತೆರಿಗೆ ಇಲಾಖೆಯಿಂದ ನಿರಪೇಕ್ಷಣಾ ಪತ್ರ (ಎನ್ಒಸಿ) ಪಡೆದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸಲ್ಲಿಸಿದರೂ ಯಾವುದೇ ಪ್ರಯೋಜನ ಆಗುತ್ತಿಲ್ಲ. ಅರ್ಹತೆ ಇದ್ದರು ಸರ್ಕಾರದ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಗೀತಾ ಪತಿ ಚಾಲಕರಾಗಿ ಕೆಲಸ ಮಾಡುತ್ತಿದ್ದು, ಮಕ್ಕಳ ವಿದ್ಯಾಭ್ಯಾಸ, ಕುಟುಂಬ ನಿರ್ವಹಣೆ ಮಾಡಲು ಹೆಣಗಾಡುತ್ತಿದ್ದಾರೆ. ಪ್ರತಿ ತಿಂಗಳು ಬರುತ್ತಿದ್ದ ₹2 ಸಾವಿರ ಅವರ ಬದುಕಿಗೆ ಆಸರೆಯಾಗಿತ್ತು. ಅದನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಇದು ಕೇವಲ ಒಂದು ಉದಾಹರಣೆ ಮಾತ್ರ. ಐಟಿ, ಜಿಎಸ್ಟಿ ಪಾವತಿ ಹೆಸರಿನಲ್ಲಿ ಜಿಲ್ಲೆಯ 7,578 ಮಹಿಳೆಯರನ್ನು ಗೃಹಲಕ್ಷ್ಮಿ ಯೋಜನೆಯಿಂದ ಹೊರಗಿಡಲಾಗಿದೆ. ಇದರಲ್ಲಿ ಸಾಕಷ್ಟು ಜನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಎನ್ಒಸಿ ಪತ್ರ ಸಲ್ಲಿಸಿದರೂ ಅವರನ್ನು ಮತ್ತೆ ಪಟ್ಟಿಗೆ ಸೇರಿಸುವ ಪ್ರಕ್ರಿಯೆ ಆರಂಭವಾಗಿಲ್ಲ. ಆದಾಯ ತೆರಿಗೆ ಪಾವತಿದಾರರು ಎಂದು ಅರ್ಜಿ ತಿರಸ್ಕಾರ ಮಾಡಲಾಗುತ್ತಿದೆ. ಮಹಿಳೆಯರು ಅರ್ಜಿ ಹಿಡಿದುಕೊಂಡು ಇಲಾಖೆಯ ಕಚೇರಿಗೆ ಅಲೆಯುವುದು ನಿಂತಿಲ್ಲ.

ಜಿಲ್ಲೆಯಲ್ಲಿ ಒಟ್ಟು 6,77,206 ಮಹಿಳಾ ಪ್ರಧಾನ ಪಡಿತರ ಚೀಟಿಗಳಿವೆ. ಈ ಪೈಕಿ 6,43,258 ಮಂದಿ ಗೃಹಲಕ್ಷ್ಮಿ ಯೋಜನೆಯಡಿ ನೋಂದಣಿ ಆಗಿದ್ದಾರೆ. ಇದರಲ್ಲಿ ಆದಾಯ ತೆರಿಗೆ ಇಲಾಖೆ, ಜಿಎಸ್ಟಿ ಪಾವತಿಯಿಂದಾಗಿ 7,578 ಜನರಿಗೆ ಆರ್ಥಿಕ ನೆರವು ಸಿಗುತ್ತಿಲ್ಲ. ನೋಂದಣಿ ನಂತರ ಜಿಲ್ಲೆಯಾದ್ಯಂತ 16,228 ಮಹಿಳೆಯರು ಮೃತಪಟ್ಟಿದ್ದಾರೆ. ಮೃತರ ಖಾತೆ ಪತ್ತೆ ಹಚ್ಚಿ, ಹಣ ಸಂದಾಯ ಮಾಡುವುದನ್ನು ನಿಲ್ಲಿಸಲಾಗಿದೆ.

ನೋಂದಣಿ ಮಾಡಿಕೊಂಡವರಲ್ಲಿ ಅತಿ ಹೆಚ್ಚು 2,32,059 ಮಹಿಳೆಯರು ಸಾಮಾನ್ಯ ವರ್ಗಕ್ಕೆ ಸೇರಿದವರಾಗಿದ್ದಾರೆ. 1,91,524 ಮಂದಿ ಇತರೆ ಹಿಂದುಳಿದ ವರ್ಗ, 1,18,669 ಫಲಾನುಭವಿಗಳು ಪರಿಶಿಷ್ಟ ಜಾತಿ, 55,267 ಜನ ಅಲ್ಪಸಂಖ್ಯಾತರು, ಪರಿಶಿಷ್ಟ ಪಂಗಡದ 45,739 ಮಹಿಳೆಯರಿದ್ದಾರೆ.

ಅರ್ಹ ಫಲಾನುಭವಿಗಳಿಗೆ ತಲಾ ₹2 ಸಾವಿರದಂತೆ ಪ್ರತಿ ತಿಂಗಳು ₹123 ಕೋಟಿ ಪಾವತಿಸಲಾಗುತ್ತಿದೆ. 2023ರ ಆಗಸ್ಟ್ನಿಂದ 2026ರ ಫೆಬ್ರುವರಿ ತನಕ ₹3,537 ಕೋಟಿ ಹಣ ಜಿಲ್ಲೆಯ ಮಹಿಳೆಯರ ಖಾತೆಗಳಿಗೆ ಜಮೆ ಮಾಡಲಾಗಿದೆ.

‘ಜಿಎಸ್ಟಿ, ಐಟಿ ಗೊಂದಲ ಬಗೆಹರಿಸಿ, ಎಲ್ಲ ಅರ್ಹರಿಗೆ ಸರ್ಕಾರದ ಸೌಲಭ್ಯ ಸಿಗುವಂತೆ ಮಾಡಬೇಕು’ ಎಂಬುವುದು ಆರ್ಥಿಕ ನೆರವಿನಿಂದ ವಂಚಿತರಾದ ಮಹಿಳೆಯರ ಒತ್ತಾಯವಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-17-26630757

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.