ಗುಬ್ಬಿ: ಕುರಿಗಳ ಮೈ ತೊಳೆಯಲು ಹೋದ ಕಸಬಾ ಹೋಬಳಿ ಅಮ್ಮನಘಟ್ಟ ಮಜರೆ ಕೋಡಿಹಟ್ಟಿ ಗ್ರಾಮದ ಶಿವಣ್ಣ (48) ಆಕಸ್ಮಿಕವಾಗಿ ನೀರಿಗೆ ಬಿದ್ದು ಸೋಮವಾರ ಮೃತಪಟ್ಟಿದ್ದಾರೆ.

ಶಿವಣ್ಣ ಗ್ರಾಮದ ಸಮೀಪವಿರುವ ಕೆರೆಯಲ್ಲಿ ಅವರ ಪತ್ನಿಯೊಡನೆ ಕುರಿಗಳ ಮೈ ತೊಳೆಯುವ ಸಂದರ್ಭದಲ್ಲಿ ನೀರಿಗೆ ಜಾರಿದ್ದಾರೆ. ಶಿವಣ್ಣರ ಪತ್ನಿ ದಡದಲ್ಲಿದ್ದ ಹಗ್ಗವನ್ನು ಎಸೆದು ಪತಿಯನ್ನು ಉಳಿಸಿಕೊಳ್ಳಲು ಪ್ರಯತ್ನಪಟ್ಟರೂ ಸಾಧ್ಯವಾಗಿಲ್ಲ. ಸಮೀಪದಲ್ಲಿದ್ದ ಗ್ರಾಮಸ್ಥರು ಓಡಿ ಬರುವಷ್ಟರಲ್ಲಿ ಶಿವಣ್ಣ ನೀರಿನಲ್ಲಿ ಮುಳುಗಿದ್ದರು.

ಗ್ರಾಮಸ್ಥರು ಪೊಲೀಸರಿಗೆ ಸುದ್ದಿ ಮುಟ್ಟಿಸಿದರು. ಪೊಲೀಸರು ಸ್ಥಳಕ್ಕೆ ತೆರಳಿ ಸ್ಥಳೀಯರ ಸಹಾಯದೊಂದಿಗೆ ಶವವನ್ನು ನೀರಿನಿಂದ ಹೊರತೆಗೆದು ಅಗತ್ಯ ಕ್ರಮ ಕೈಗೊಂಡಿದ್ದಾರೆ.

ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದ ಶಿವಣ್ಣರ ಅಕಾಲಿಕ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ನೀರು ಇಲ್ಲದಿರುವ ಸಮಯದಲ್ಲಿ ಸುತ್ತಮುತ್ತಲಿನ ಜಮೀನಿನವರು ಯಂತ್ರಗಳಿಂದ ಮಣ್ಣನ್ನು ತೆಗೆದಿರುವುದರಿಂದ ಆಳವಾದ ಗುಂಡಿಗಳಾಗಿವೆ. ನೀರು ಇರುವ ಸಂದರ್ಭದಲ್ಲಿ ಗುಂಡಿಗಳು ಕಾಣದೇ ಇರುವುದರಿಂದ ಅವಘಡಗಳಿಗೆ ಕಾರಣವಾಗುತ್ತಿದೆ.

ಈಗಾಗಲೇ ಈ ಕೆರೆಯಲ್ಲಿ ಸುಮಾರು 5-6 ಜನ ಬಿದ್ದು ಸಾವನ್ನಪ್ಪಿದ್ದಾರೆ. ಕೆರೆ ಮಣ್ಣು ತೆಗೆಯುವ ನೆಪದಲ್ಲಿ ಆಳವಾದ ಗುಂಡಿ ಮಾಡುವವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-17-709186755

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.