ತಿಪಟೂರು: ತಾಲ್ಲೂಕಿನ ಕೆರೆಗೋಡಿ ರಂಗಾಪುರ ಕ್ಷೇತ್ರದ ಅಧ್ಯಕ್ಷರಾದ ಗುರುಪರದೇಶಿಕೇಂದ್ರ ಸ್ವಾಮೀಜಿ ಅವರ 74ನೇ ಜನ್ಮವರ್ಧಂತಿಯನ್ನು ಮಠದ ಹಿರಿಯ ವಿದ್ಯಾರ್ಥಿಗಳು ಹಾಗೂ ಕ್ಷೇತ್ರಾಭಿಮಾನಿಗಳ ಸಂಘದ ಸಹಯೋಗದಲ್ಲಿ ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಸ್ವಾಮೀಜಿ ದೇಶ, ಧರ್ಮ, ದೇವರ ಬಗ್ಗೆ ಅಪಾರ ಭಕ್ತಿ ಮತ್ತು ಶ್ರದ್ಧೆ ಇರಿಸಿಕೊಂಡು ಸಾಮರಸ್ಯದಿಂದ ಬದುಕಿದರೆ ಸುಖ, ಶಾಂತಿ, ನೆಮ್ಮದಿ ಲಭಿಸುತ್ತದೆ ಎಂದು ಹೇಳಿದರು.

ನಮ್ಮ ಪೂರ್ವಿಕರು ಧರ್ಮ ಮತ್ತು ಬದುಕಿನ ಮೌಲ್ಯಗಳ ಬಗ್ಗೆ ಅಪಾರ ಬಾಂಧವ್ಯ ಹೊಂದಿದ್ದರು. ಅವರು ಸಂಸ್ಕೃತಿ, ಆಚಾರ-ವಿಚಾರ, ಸಂಪ್ರದಾಯ ಮತ್ತು ಸಂಸ್ಕಾರವನ್ನು ಮಕ್ಕಳಿಗೆ ಭಯ-ಭಕ್ತಿಯಿಂದ ತಿಳಿಸಿಕೊಡುತ್ತಿದ್ದರು. ಎಲ್ಲ ಸಂದರ್ಭಗಳಲ್ಲೂ ಬಂಧು-ಬಾಂಧವರು ಒಂದೆಡೆ ಸೇರಿ ಸಂಭ್ರಮಿಸುತ್ತಿದ್ದರು.

ಕಾಲ ಬದಲಾದಂತೆ ನಾಗರಿಕತೆ ಬೆಳೆದು, ಆಚಾರ-ವಿಚಾರ ಬದಲಾಗುತ್ತಿವೆ. ನಂಬಿಕೆಗಳ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿದೆ. ಆಡಂಬರದ ಆಚರಣೆ ಬಿಟ್ಟು ಪ್ರಕೃತಿದತ್ತ ನಿಯಮಗಳಿಗೆ ವಿಧೇಯರಾಗಿ, ದಾನ-ಧರ್ಮ ಮಾಡುತ್ತಾ, ಕಷ್ಟ-ಸುಖಗಳಿಗೆ ಸ್ಪಂದಿಸಬೇಕು. ಪ್ರೀತಿ-ವಿಶ್ವಾಸದಿಂದ ಬದುಕು ನಡೆಸುವುದನ್ನು ಕಲಿಯಬೇಕು ಎಂದರು.

ಭಕ್ತರೇ ಶ್ರೀಮಠದ ಆಸ್ತಿ. ಮಠದಿಂದ ಕೈಗೊಳ್ಳುವ ಅಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸಿ ಸಮಾಜೋದ್ಧಾರದ ಗುಣ ಬೆಳೆಸಿಕೊಳ್ಳಬೇಕು. ದ್ವೇಷ, ಅಸೂಯೆ ಬಿಟ್ಟು ಪರಸ್ಪರ ಒಂದಾಗಿ ಹಬ್ಬ, ಹರಿದಿನ, ಜಾತ್ರೆ, ಉತ್ಸವಗಳಲ್ಲಿ ಪಾಲ್ಗೊಂಡು ನಾವೆಲ್ಲರೂ ಒಂದೇ ಎಂಬುದನ್ನು ಸಾಧಿಸಿ ತೋರಿಸಬೇಕು ಎಂದು ಸ್ವಾಮೀಜಿ ಸಲಹೆ ನೀಡಿದರು.

ಜಗತ್ತಿನಾದ್ಯಂತ ನಡೆಯುತ್ತಿರುವ ಯುದ್ಧಗಳ ಕಠೋರತೆ ಕೈಬಿಟ್ಟು, ಮನುಷ್ಯರ ನಡುವಿನ ಸಂಬಂಧಗಳನ್ನು ಬೆಸೆದು ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದು ಪ್ರೀತಿಯಿಂದ ಬದುಕುವುದನ್ನು ಕಲಿಯದೇ ಹೋದರೆ ಜಗತ್ತು ವಿಷವರ್ತುಲದಿಂದ ಸರ್ವನಾಶವಾಗುತ್ತದೆ. ಇದನ್ನು ತಪ್ಪಿಸಲು ಬುದ್ಧ, ಬಸವ, ಗಾಂಧಿ, ಪರಮಹಂಸ, ವಿವೇಕಾನಂದರ ತತ್ವಾದರ್ಶ ಪಾಲಿಸಬೇಕು ಎಂದರು.

ಕ್ಷೇತ್ರದ ಆರಾಧ್ಯ ದೈವಗಳಾದ ಶಂಕರೇಶ್ವರ ಸ್ವಾಮಿಗೆ ರಾಜೋಪಚಾರ, ರಂಗನಾಥಸ್ವಾಮಿಗೆ ವಿಶೇಷ ಪೂಜಾದಿ ಮಂಗಳಕಾರ್ಯಗಳು ನೆರವೇರಿದವು. ಎಲ್ಲ ಹಿರಿಯ ಗುರುಗಳ ಗದ್ದುಗೆಗಳು ಮತ್ತು ದೇವಾಲಯಗಳಲ್ಲಿ ಅಲಂಕಾರ, ರುದ್ರಾಭಿಷೇಕ, ಶ್ರೀಗಳ ಪಾದಪೂಜೆ ನಡೆಯಿತು. ನಂತರ ಸಾವಿರಾರು ಭಕ್ತರು ಶ್ರೀಗಳಿಗೆ ಭಕ್ತಿ ಸಮರ್ಪಣೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಗೊಲ್ಲಹಳ್ಳಿಯ ಸಿದ್ದಲಿಂಗೇಶ್ವರ ಮಠದ ವಿಭವ ವಿದ್ಯಾಶಂಕರದೇಶಿ ಕೇಂದ್ರ ಸ್ವಾಮೀಜಿ, ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ, ವಿದ್ಯಾರ್ಥಿ ಸಂಘದ ಅಧ್ಯಕ್ಷ ಶಿವಪ್ಪ ಸೇರಿದಂತೆ ಸಾವಿರಾರು ಭಕ್ತರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260407-17-2065313507

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.