ತುಮಕೂರು: ‘ಜಿ.ಪರಮೇಶ್ವರ ಅಸಮರ್ಥ, ಅದಕ್ಷ ಗೃಹ ಸಚಿವರಾಗಿದ್ದಾರೆ. ಕೂಡಲೇ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್ಎಸ್) ಪಕ್ಷದ ರಾಜ್ಯ ಘಟಕದ ಗೌರವಾಧ್ಯಕ್ಷ ರವಿಕೃಷ್ಣಾ ರೆಡ್ಡಿ ಇಲ್ಲಿ ಸೋಮವಾರ ಒತ್ತಾಯಿಸಿದರು.

‘ನಗರದಲ್ಲಿ ಈಚೆಗೆ ಪರಮೇಶ್ವರ ಅಧ್ಯಕ್ಷತೆಯಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಮನವಿ ಸಲ್ಲಿಸಲು ಹೋಗಿದ್ದ ಕೆಆರ್ಎಸ್ ಪದಾಧಿಕಾರಿಗಳ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದೆ. ಪರಮೇಶ್ವರ ವಿಡಿಯೊ ಮಾಡುವುದಕ್ಕೆ ಅಡ್ಡಿ ಪಡಿಸಿ ದುರ್ವರ್ತನೆ ತೋರಿದ್ದಾರೆ. ಕಾಂಗ್ರೆಸ್ ಮೂಲದಲ್ಲೇ ಇಂತಹ ದುರ್ವರ್ತನೆ ಇದೆ’ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

‘ಪೊಲೀಸ್ ಇಲಾಖೆಯನ್ನು ಕಡು ಭ್ರಷ್ಟ ಇಲಾಖೆಯಾಗಿಸಿದ ಕೀರ್ತಿ ಪರಮೇಶ್ವರ ಅವರಿಗೆ ಸಲ್ಲುತ್ತದೆ. ಅವರು ಜಿಲ್ಲೆಯ ಜನತೆಗೆ ಅಂಟಿದ ಶಾಪ. ಕನಿಷ್ಠ ಒಂದು ಸರ್ಕಾರಿ ವೈದ್ಯಕೀಯ ಕಾಲೇಜು ತರಲು ಆಗಿಲ್ಲ. ಗಣಿ ಬಾಧಿತ ತಾಲ್ಲೂಕು ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತಿಲ್ಲ. ಮಂತ್ರಿಯಾಗಿರಲು ಅನರ್ಹರು’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜನತಾ ದರ್ಶನ ಕಾರ್ಯಕ್ರಮದಲ್ಲಿ ಕೆಆರ್ಎಸ್ ಪದಾಧಿಕಾರಿಗಳ ಜತೆಗೆ ಪರಮೇಶ್ವರ ನಡೆದುಕೊಂಡ ರೀತಿ ಸರಿಯಲ್ಲ. ಪೊಲೀಸರು ಮಹಿಳಾ ಪಿಎಸ್ಐ ಅವರಿಂದ ದೂರು ಪಡೆದು, ಎಫ್ಐಆರ್ ದಾಖಲಿಸಿದ್ದಾರೆ. ಇದು ಪೊಲೀಸ್ ಇಲಾಖೆಗೆ ಅವಮಾನಕರವಾದ ವಿಷಯ. ಸುಳ್ಳನ್ನು ಸತ್ಯ ಎಂದು ಬಿಂಬಿಸಲಾಗಿದೆ. ‘ನನ್ನ ಹತ್ತಿರ ಬಲವಂತವಾಗಿ ಸಹಿ ಪಡೆದುಕೊಂಡರು’ ಎಂದು ಮಹಿಳಾ ಅಧಿಕಾರಿ ಹೇಳಿಕೊಂಡಿದ್ದಾರೆ ಎಂಬ ಮಾಹಿತಿ ಇದೆ. ಅವರನ್ನು ಮಂಪರು ಪರೀಕ್ಷೆ ಒಳ ಪಡಿಸಬೇಕು ಎಂದು ಆಗ್ರಹಿಸಿದರು.

ಕೋಟ್ಯಂತರ ರೂಪಾಯಿ ಸಾರ್ವಜನಿಕರ ತೆರಿಗೆ ಹಣದಲ್ಲಿ ಅಧಿಕಾರಿಗಳು ‘ಜನ ಸ್ಪಂದನ’ ಎಂಬ ನಾಟಕ ಮಾಡುತ್ತಿದ್ದಾರೆ. ಇದರಿಂದ ಯಾವುದೇ ಪ್ರಯೋಜನ ಆಗುತ್ತಿಲ್ಲ. ಜನರ ಸಮಸ್ಯೆ ಬಗೆಹರಿಯುವುದಿಲ್ಲ. ಮುಂದಿನ ಎಲ್ಲ ಸಭೆಗಳಿಗೆ ಕೆಆರ್ಎಸ್ ಪದಾಧಿಕಾರಿಗಳು ಹಾಜರಾಗುತ್ತಾರೆ. ಕಪ್ಪು ಬಾವುಟ ಪ್ರದರ್ಶಿಸುತ್ತಾರೆ ಎಂದು ತಿಳಿಸಿದರು.

ಇಡೀ ರಾಜ್ಯದ ರಾಜಕೀಯ ಕೆಲವೇ ಕುಟುಂಬಗಳ ಕೈಯಲ್ಲಿದೆ. ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಕಾರ್ಯಕರ್ತರು ಸಿದ್ಧಾಂತದ ಪರವಾಗಿ ಕೆಲಸ ಮಾಡುತ್ತಿಲ್ಲ. ಅವರ ನಾಯಕರಿಗೆ ಜೀತದಾಳಿನಂತೆ ಇದ್ದಾರೆ ಎಂದು ಹೇಳಿದರು.

ಕೆಆರ್ಎಸ್ ಪದಾಧಿಕಾರಿಗಳಾದ ಮಂಜುನಾಥ್, ನರಸಿಂಹರಾಜು, ಪ್ರದೀಪ್ಕುಮಾರ್, ಎಲ್.ಜೀವನ್ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260414-17-1063771784

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.