ಹುಳಿಯಾರು: ಹೋಬಳಿಯ ದಸೂಡಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿಯಿಂದ ಗ್ರಾಮದ ಸಮೀಪವೇ ಸ್ಥಾಪಿಸಿದ್ದ ಘನತ್ಯಾಜ್ಯ ವಿಲೇವಾರಿ ಘಟಕದ ಪಕ್ಕದ ಜಾಗದಲ್ಲಿ ಕಸ ಹಾಕಿ ಬೆಂಕಿ ಹಚ್ಚುವುದರಿಂದ ಸಮಸ್ಯೆಯಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ನಾಲ್ಕೈದು ವರ್ಷದ ಹಿಂದೆ ದಸೂಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಸ ವಿಂಗಡಣೆ ಮಾಡಿ ಶೇಖರಿಸಲು ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲಾಗಿತ್ತು. ಅದು ಗ್ರಾಮದ ಬಳಿಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿಯೇ ಸ್ಥಾಪಿಸಲಾಗಿತ್ತು. ಕೆಲವರ್ಷ ಇದೇ ಘಟಕದಲ್ಲಿ ಕಸ ಹಾಕಲಾಗುತ್ತಿತ್ತು. ಆದರೆ ಕಳೆದ ವರ್ಷ ಘಟಕ ಬೆಂಕಿಗೆ ಆಹುತಿಯಾಗಿ ಸಂಪೂರ್ಣ ಸುಟ್ಟು ಹೋಗಿತ್ತು. ಘಟಕದ ಜತೆ ಒಳಗಿದ್ದ ಕಸವೂ ಸುಟ್ಟು ಸಮಸ್ಯೆ ಸೃಷ್ಟಿಸಿತ್ತು. ವರ್ಷವಾದರೂ ಸ್ಥಳೀಯ ಆಡಳಿತ ಘಟಕ ಮರುಬಳಕೆಗೆ ಸಿದ್ಧಗೊಳಿಸದೆ ತಾತ್ಸಾರ ತೋರಿತ್ತು.

ಇತ್ತೀಚೆಗೆ ದಸೂಡಿ ಗ್ರಾಮದಲ್ಲಿ ಬರುವ ಕಸವನ್ನು ಸುಟ್ಟುಹೋಗಿರುವ ಘಟಕದ ಪಕ್ಕ ಸುರಿಯಲಾಗುತ್ತಿತ್ತು. ಕಸದ ರಾಶಿ ಹೆಚ್ಚಿದಂತೆ ಆಕಸ್ಮಿಕ ಬೆಂಕಿ ತಗುಲಿ ಯಾವಾಗಲೂ ಕಸ ಹೊತ್ತಿ ಉರಿಯುತ್ತಿದೆ. ಪಕ್ಕದಲ್ಲಿಯೇ ಪ್ರಾಥಮಿಕ ಆರೋಗ್ಯ ಕೇಂದ್ರವಿದ್ದು ಅಲ್ಲಿಗೆ ಚಿಕಿತ್ಸೆಗೆ ಬರುವವರಿಗೆ ಹೊಗೆ ರಾಸುತ್ತಿದೆ. ಅಲ್ಲದೆ ಘಟಕದ ಮುಂದೆಯೇ ಸಾರ್ವಜನಿಕ ರಸ್ತೆಯಿದ್ದು ಪ್ರತಿನಿತ್ಯ ಹೊಗೆಯಲ್ಲಿ ಸಂಚರಿಸುವಂತಾಗಿದೆ.

ಅಕ್ಕ ಪಕ್ಕ ತೆಂಗು ಹಾಗೂ ಅಡಿಕೆ ತೋಟಗಳಿದ್ದು ಬೆಂಕಿ ಅಲ್ಲಿಗೆ ವ್ಯಾಪಿಸುವ ಭಯವೂ ರೈತರನ್ನು ಕಾಡುತ್ತಿದೆ. ಪ್ರತಿನಿತ್ಯ ಆಸ್ಪತ್ರೆಗೆ ಬರುವ ರೋಗಿಗಳು ರಸ್ತೆಯಲ್ಲಿ ಸಂಚರಿಸುವ ಜನರು ಸ್ಥಳೀಯ ಆಡಳಿತಕ್ಕೆ ಹಿಡಿಶಾಪ ಹಾಕಿಕೊಂಡು ಓಡಾಡುತ್ತಾರೆ ಎಂದು ಸಾರ್ವಜನಿಕರು ಆರೋಪಿಸಿದರು.

ಹಲವಾರು ಬಾರಿ ಘಟಕಕ್ಕೆ ಬೆಂಕಿ ಬಿದ್ದಿರುವ ಬಗ್ಗೆ ಸ್ಥಳೀಯ ಆಡಳಿತಕ್ಕೆ ಮನವರಿಕೆ ಮಾಡಲಾಗಿದೆ. ಆದರೆ ಅಧಿಕಾರಿಗಳು ಇತ್ತ ಗಮನಹರಿಸುತ್ತಿಲ್ಲ ಎಂದು ದಸೂಡಿ ಗ್ರಾ.ಪಂ ಮಾಜಿ ಸದಸ್ಯ ಕೆ.ಮರಿಯಪ್ಪ ಹೇಳಿದರು.

ಕಸ ಬೇರೆಡೆ ಹಾಕಲು ವ್ಯವಸ್ಥೆ: ಹೊಯ್ಸಳಕಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಸ ವಿಲೇವಾರಿ ಘಟಕಕ್ಕೆ ಕಸ ಸುರಿಯಲು ಅನುಮತಿ ಪಡೆಯಲಾಗಿದೆ. 15ನೇ ಹಣಕಾಸು ಯೋಜನೆಯಡಿ ಹಣ ಕಾಯ್ದಿರಿಸಲಾಗಿದೆ. ಶೀಘ್ರವೇ ಸುಟ್ಟು ಹೋಗಿರುವ ಘಟಕವನ್ನು ಸರಿಪಡಿಸಲಾಗುವುದು ಎಂದು ದಸೂಡಿ ಗ್ರಾ.ಪಂ ಪಿಡಿಒ ಮುದ್ದಲಿಂಗಪ್ಪ ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260427-17-676292663

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.