ಹುಳಿಯಾರು: ಹೋಬಳಿಯ ದಬ್ಬಗುಂಟೆ ಸಮೀಪದ ದೇವರಮರಡಿಕೆರೆಗೆ ಶನಿವಾರ ಈಜಲು ತೆರಳಿದ್ದ ಗಿಲ್ಯಾನಾಯ್ಕನ ತಾಂಡಾದ ದ್ವಿತೀಯ ಪಿಯು ವಿದ್ಯಾರ್ಥಿ ಗೌತಮ್(17) ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಭಾನುವಾರ ಶವ ಪತ್ತೆಯಾಗಿದೆ.

ಗೌತಮ್ ತಿಪಟೂರು ಕಾಲೇಜಿನ ದ್ವಿತೀಯ ಪಿಯು ವಿಜ್ಞಾನ ವಿಭಾಗದ ವಿದ್ಯಾರ್ಥಿ. ಶನಿವಾರ ಮಧ್ಯಾಹ್ನ 6 ಮಂದಿ ಸಂಬಂಧಿಕರು ಹಾಗೂ ಸ್ನೇಹಿತರ ಜತೆ ಗೌತಮ್ ಕೆರೆಯಲ್ಲಿ ಈಜಲು ತೆರಳಿದ್ದರು. ಈ ವೇಳೆ ಮೀನು ಹಿಡಿಯುವ ಸಲುವಾಗಿ ಬಳಸಲಾಗುತ್ತಿದ್ದ ತೆಪ್ಪವನ್ನು ಕೆರೆ ದಡದಲ್ಲಿ ಇರಿಸಲಾಗಿತ್ತು. ತೆಪ್ಪದಲ್ಲಿ ಕೆರೆ ಮಧ್ಯೆ ಹೋದ ವೇಳೆ ಪಲ್ಟಿ ಆಗಿದೆ. ತೆಪ್ಪದಲ್ಲಿದ್ದ ಆರು ಮಂದಿ ಪೈಕಿ ಇಬ್ಬರಿಗೆ ಮಾತ್ರ ಈಜು ಬರುತ್ತಿದ್ದು, ಒಬ್ಬೊಬ್ಬರನ್ನೇ ದಡ ಸೇರಿಸುವ ವೇಳೆ ಗೌತಮ್ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಶನಿವಾರ ಸಂಜೆವರೆಗೆ ಮೃತ ದೇಹಕ್ಕಾಗಿ ಹುಡುಕಾಟ ನಡೆದಿತ್ತು.

ಭಾನುವಾರ ಮುಳುಗು ತಜ್ಞರು ಬರುವ ವೇಳೆಗೆ ಮೃತದೇಹ ಕೆರೆಯಲ್ಲಿ ತೇಲಿತ್ತು. ಸ್ಥಳಕ್ಕೆ ಹುಳಿಯಾರು ಪೊಲೀಸರು ಭೇಟಿ ನೀಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-17-1994866146

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.